Lovers problem

ಪ್ರ ತಿಯೊಬ್ಬರ ಬದುಕಿನಲ್ಲಿಯೂ ಮೊದಲ ಪ್ರೀತಿ ಎನ್ನುವುದು ಬಹಳ ಅವಿಸ್ಮರಣೀಯ, ಎಂದು ಮರೆಯಬೇಕು ಎಂದರು ಮರೆಯಲಾಗದ ಭಾವನೆಗಳ ಸಾಗರ ಅದು. ಇಂದು ಪ್ರೀತಿಯ ಹೆಸರಿನಲ್ಲಿ ಸಾಕಷ್ಟು ಮೋಸ ವಚನೆಗಳು ನಡೆಯುತ್ತವೆ ಮತ್ತು ನೈಜ ಪ್ರೀತಿಗೆ ಬೆಲೆ ಇಲ್ಲ. ಪ್ರೀತಿಗೂ ಸ್ನೇಹಕ್ಕೂ ಇರುವ ವ್ಯತ್ಯಾಸ ಏನೆಂದರೆ ಅದು ಸ್ವಾರ್ಥ, ಸ್ವಾರ್ಥ ಇದ್ದಲ್ಲಿ ಮೋಸ ನಡೆಯೋದು ಸಹಜ, ಪ್ರೀತಿಯಲ್ಲಿ ಸ್ವಾರ್ಥ ಇರಬೇಕು ನಿಜ, ನಾವು ಪ್ರೀತಿಸಿದ ಹುಡುಗ / ಹುಡುಗಿ ನಮಗೆ ಮಾತ್ರ ಸ್ವಂತ, ನನ್ನ ಬಿಟ್ಟು ಬೇರೆಯವರನ್ನ ನೋಡಬಾರದು, ಮಾತಾಡಿಸಬಾರದು, ಜಾಸ್ತಿ ಅವರ ಜೊತೆ ಸೇರಬಾರದು ಅಂತ ಬಯಸೋದು ತಪ್ಪೇನೂ ಅಲ್ಲ ಆದ್ರೆ ಅದೇ ಅತಿಯಾದ್ರೆ ಪ್ರೀತಿಗೆ ಮಾರಕ.

ಹಾಗೆ ಸ್ನೇಹದಲ್ಲೂ ಸ್ವಾರ್ಥ ಇದ್ರೆ ಅದು ಕೂಡ ಸ್ನೇಹದ ಅಳಿವಿಗೆ ಕಾರಣವಾಗುತ್ತೆ, ಪ್ರೀತಿ ಸ್ನೇಹ ಎರಡು ಒಂದು ಕೈಯಿಂದ ಮರಳನ್ನೂ ಹಿಡಿದುಕೊಂಡಂತೆ ಗಟ್ಟಿಯಾಗಿ ಹಿಡಿದಷ್ಟು ಮರಳು ಜಾರಿ ಜಾರಿ ಹೋಗುತ್ತೆ, ಸ್ನೇಹ ಪ್ರೀತಿಯಿಂದ ಸೋತ ಜೀವಗಳಿಗೆ ಜೀವ ಕೊಡೋ ಸೆಲೆ, ಕಣ್ಣೀರು ಒರೆಸಿ ಅವರ ನೋವನ್ನು ಮರೆಸಿ ಸದಾ ನಗುನಗುತ ಇರುವಂತೆ ಮಾಡೋ ಒಂದು ಶಕ್ತಿ.

ಇನ್ನು ಪ್ರೀತಿಯಲ್ಲಿ ಬಿದ್ದು ನೊಂದು ಕಣ್ಣೀರು ಹಾಕುವವರಲ್ಲಿ ಈ ಕೆಳಗಿನ ಮೂರು ರಾಶಿಗಳು ಹೆಚ್ಚು. ಒಂದು ಸಮೀಕ್ಷೆಯ ಪ್ರಕಾರ ಮೊದಲ ಪ್ರೀತಿ ಸಿಗದೆ ಬಹಳ ನೋವು ಅನುಭವಿಸುತ್ತಾರೆ ಈ ಮೂರು ರಾಶಿಯವರು. ನಿಜವಾದ ಪ್ರೀತಿ ಎಲ್ಲರಿಗೂ ಸಿಗುವುದು ಬಹಳ ಕಷ್ಟ ಈ ಜಗತ್ತಿನಲ್ಲಿ ನೇರವಾಗಿ ಮಾತಾಡುವ ವ್ಯಕ್ತಿಗಿಂತ ಬಣ್ಣ ಬಣ್ಣದ ಮಾತಾಡುವವರಿಗೆ ಹೆಚ್ಚು ಜನರು ಮರಳಾಗುತ್ತಾರೆ.

Lovers problem

ಕೆಲವೊಮ್ಮೆ ಕೆಲವರು ತಮ್ಮ ಸ್ವಭಾವದಿಂದಾಗಿ ಮತ್ತು ಕೆಲವರು ಅದೃಷ್ಟದಿಂದಾಗಿ ನಿಜವಾದ ಪ್ರೀತಿಯನ್ನು ಪಡೆಯುವುದಿಲ್ಲ. ತಾವು ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ಪ್ರೀತಿಯಿಂದ ವಂಚಿತರಾಗುತ್ತಾರೆ ಇದಕ್ಕೆ ಕೇವಲ ಅವರು ಮಾತ್ರ ಕಾರಣವಲ್ಲ ಬದಲಿಗೆ ಅವರ ರಾಶಿಚಕ್ರ ಮತ್ತು ಜಾತಕ ಫಲ ಕೂಡ ಒಮ್ಮೊಮ್ಮೆ ಆ ಪರಿಸ್ಥಿತಿಗೆ ಅವರನ್ನು ನೂಕುತ್ತದೆ.

ಮೊದಲೆನೆಯದಾಗಿ ಮೀನಾ ರಾಶಿಯವರಿಗೆ ಕೊನೆತನಕವು ತಾವು ಮಾಡಿದ ಪ್ರೀತಿಗೆ ಪ್ರತಿಫಲ ಸಿಗುವುದಿಲ್ಲ ಪ್ರೀತಿಯ ಬದಲಿಗೆ ಅವರಿಗೆ ಸಿಗುವುದು ಬರಿ ನೋವು. ಎಲ್ಲಾ ನೋವುಗಳನ್ನು ನುಂಗಿಕೊಂಡು ಎದುರಿಗೆ ನಗುತ್ತ ಇರುತ್ತಾರೆ, ಈ ರಾಶಿಯವರಿಗೆ ಒಮ್ಮೆ ಯಾರಾದರೂ ಇಷ್ಟವಾದರೆ ಸಾಕು ಬೇಗ ಅವರನ್ನು ಹಚ್ಚಿಕೊಳ್ಳುತ್ತಾರೆ. ಜನರನ್ನು ಬೇಗನೆ ನಂಬುತ್ತಾರೆ ಇದೆ ಇವರ ದೌರ್ಬಲ್ಯ.

Lovers problem

ಇನ್ನು ಎರಡನೆಯದಾಗಿ ಮಿಥುನ ರಾಶಿ, ಈ ರಾಶಿಯವರಿಗೂ ಕೂಡ ನಿಜವಾದ ಪ್ರೀತಿ ಸಿಗುವುದು ಬಹಳ ಅಪರೂಪ, ಯಾಕೆಂದರೆ ಇವರು ಜೊತೆಗಿದ್ದವರೆಲ್ಲ ತನ್ನವರು ಎಂದು ನಂಬಿರುತ್ತಾರೆ ಆ ನಂಬಿಕೆಯೇ ಇವರನ್ನು ಒಮ್ಮೊಮ್ಮೆ ತೀವ್ರ ನೋವಿಗೆ ಕಾರಣವಾಗುತ್ತದೆ. ಬದುಕಿನಲ್ಲಿ ತನ್ನ ಬಳಿ ಇದ್ದವರನ್ನೆಲ್ಲ ಸದಾ ನಗಿಸುತ್ತಾ ಇರುತ್ತಾರೆ, ಆದರೆ ತಾನು ಮಾತ್ರ ಬಹಳ ನೋವನ್ನು ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತಾರೆ.

ಇನ್ನು ಮೇಷ ರಾಶಿಯ ಯುವಕರಿಗೆ ಕೂಡ ಪ್ರೀತಿ ಬಹಳ ನೋವು ಕೊಡತ್ತದೆ, ಇವರ ನೇರ ಸ್ವಭಾವ ಮತ್ತು ತಪ್ಪನ್ನು ಎದುರಿಗೆ ಹೇಳುವ ಇವರ ವ್ಯಕ್ತಿತ್ವ ಕೆಲವರಿಗೆ ಇಷ್ಟವಾಗದೇ ಸಂಬಂಧವನ್ನು ಮುರಿದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಮೂರು ರಾಶಿಗಳಿಗೆ ಪ್ರೀತಿ ಜೀವನದಲ್ಲಿ ಒಂದು ಪಾಠ ಕಲಿಸಿರುತ್ತದೆ, ಹೀಗಾಗಿ ಒಮ್ಮೆ ಅದನ್ನು ಅರ್ಥ ಮಾಡಿಕೊಂಡ ಇವರು ಮತ್ತೆಂದೂ ಪ್ರೀತಿ ಪ್ರೇಮದ ಮೇಲೆ ವಿಶ್ವಾಸ ಇಡುವುದಿಲ್ಲ.

Lovers problem

Please follow and like us:
error0
http://karnatakatoday.in/wp-content/uploads/2019/09/kind-hearted-rashi-1024x576.jpghttp://karnatakatoday.in/wp-content/uploads/2019/09/kind-hearted-rashi-150x104.jpgKarnataka Trendingಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಪ್ರ ತಿಯೊಬ್ಬರ ಬದುಕಿನಲ್ಲಿಯೂ ಮೊದಲ ಪ್ರೀತಿ ಎನ್ನುವುದು ಬಹಳ ಅವಿಸ್ಮರಣೀಯ, ಎಂದು ಮರೆಯಬೇಕು ಎಂದರು ಮರೆಯಲಾಗದ ಭಾವನೆಗಳ ಸಾಗರ ಅದು. ಇಂದು ಪ್ರೀತಿಯ ಹೆಸರಿನಲ್ಲಿ ಸಾಕಷ್ಟು ಮೋಸ ವಚನೆಗಳು ನಡೆಯುತ್ತವೆ ಮತ್ತು ನೈಜ ಪ್ರೀತಿಗೆ ಬೆಲೆ ಇಲ್ಲ. ಪ್ರೀತಿಗೂ ಸ್ನೇಹಕ್ಕೂ ಇರುವ ವ್ಯತ್ಯಾಸ ಏನೆಂದರೆ ಅದು ಸ್ವಾರ್ಥ, ಸ್ವಾರ್ಥ ಇದ್ದಲ್ಲಿ ಮೋಸ ನಡೆಯೋದು ಸಹಜ, ಪ್ರೀತಿಯಲ್ಲಿ ಸ್ವಾರ್ಥ ಇರಬೇಕು ನಿಜ, ನಾವು ಪ್ರೀತಿಸಿದ ಹುಡುಗ / ಹುಡುಗಿ ನಮಗೆ...Film | Devotional | Cricket | Health | India