ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಅದರಲ್ಲೂ ನಾವು ಭಾರತೀಯರು ನಮಗೆ ಬಂಗಾರದ ಹುಚ್ಚು ಸ್ವಲ್ಪ ಜಾಸ್ತಿನೇ, ನಾವು ದುಡಿದು ಉಳಿಸಿದ ಹಣವನ್ನ ಹೆಚ್ಚಾಗಿ ಬಂಗಾರಗಳಿಗೆ ವಿನಿಯೋಗ ಮಾಡುತ್ತೇವೆ ಯಾಕೆಂದರೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗುವುದು ಇದೆ ಚಿನ್ನ. ಆದರೆ ಬಂಗಾರದ ಖರೀದಿಗೆ ಸರಿ ಸಮಯ ತೋಚದೆ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ , ಹಬ್ಬದ ದಿನಗಳಲ್ಲಿ ಖರೀದಿ ಮಾಡಿದರಾಯ್ತು ಎಂದು ಅಂದುಕೊಳ್ಳುತ್ತೇವೆ.

ಇದು ನಿಮ್ಮ ತಪ್ಪು ನಿರ್ಧಾರ ಕೆಲ ದಿನಗಳಿಂದ ಬಂಗಾರದ ಬೆಲೆಯಲ್ಲಿ ಭಾರಿ ಇಳಿಮುಖ ಕಂಡು ಬಂದಿದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರಕ್ಕೆ ಬೇಡಿಕೆ ಕಮ್ಮಿಯಾಗಿರುವುದು ಈ ವತ್ಯಯಕ್ಕೆ ಕಾರಣ. ಹೌದು ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಆದ್ದರಿಂದ ಈ ಅವಕಾಶ ಕಳೆದುಕೊಳ್ಳುವುದು ಸರಿಯಲ್ಲ, ಅಷ್ಟೇ ಅಲ್ಲದೆ ಇದು ಶ್ರಾವಣ ಮಾಸ ಇನ್ನೇನಿದ್ದರೂ ಹಬ್ಬ ಹರಿದಿನಗಳ ಸರದಿ ಅವಾಗ ಚಿನ್ನಕ್ಕೆ ದರ ಸಹಜವಾಗಿಯೇ ಏರುತ್ತದೆ ಆದರೆ ಈಗ ಬೇಡಿಕೆಯಿಲ್ಲದಿರುವುದು ಪ್ಲಸ್ ಪಾಯಿಂಟ್.

ಹಾಗಿದ್ದರೆ ಇವತ್ತಿನ ಚಿನ್ನದ ದರ ಹೇಗಿದೆ ಅಂತ ನೋಡೋಣ ಒಮ್ಮೆ. ಹತ್ತು ಗ್ರಾಂ ೨೨ ಕ್ಯಾರೆಟ್ ಚಿನ್ನಕ್ಕೆ ಇಂದು 27740 ರೂ ಇದೆ ಬೆಂಗಳೂರಿನಲ್ಲಿ, ಈ ಪರಿಷ್ಕ್ರತ ದರ ಕೆಲ ದಿನಗಳಿಂದ ಏರಿಳಿತ ಕಾಣುತ್ತಿರುವುದು ಎಲ್ಲರಿಗು ಗೊತ್ತಿರುವ ವಿಚಾರ. ಹದಿನೈದು ದಿನಗಳ ಹಿಂದೆ ಮೂವತ್ತು ಸಾವಿರ ಗಡಿಯಿಂದ ಕೆಳಗಿಳಿದಿತ್ತು.

ಚಿನ್ನದ ದರ ಈಗ ಮತ್ತೆ ವತ್ಯಯ ಕಾಣುತ್ತಿರುವುದು ಸಹಜವಾಗಿಯೇ ಬಂಗಾರ ಪ್ರಿಯರಿಗೆ ಎಲ್ಲಿಲ್ಲದ ಸಂತಸ ತಂದಿದೆ. ನೀವು ಕೂಡ ಆಭರಣ ಪ್ರಿಯರಾದರೆ ನೀವು ಪ್ರಥಮ ಬಾರಿ ಚಿನ್ನವನ್ನು ಖರೀದಿಸುವಾಗ ಇದ್ದ ಬೆಲೆ ತಿಳಿಸಿ. ಆಗಸ್ಟ್ ಅಂತ್ಯದಲ್ಲಿ ಮತ್ತೆ ಚಿನ್ನ ಅಗ್ಗವಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ

Please follow and like us:
0
http://karnatakatoday.in/wp-content/uploads/2018/08/price-down-1024x576.pnghttp://karnatakatoday.in/wp-content/uploads/2018/08/price-down-150x104.pngKarnataka Today's Newsಅಂಕಣನಗರಬೆಂಗಳೂರುಬಂಗಾರ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಅದರಲ್ಲೂ ನಾವು ಭಾರತೀಯರು ನಮಗೆ ಬಂಗಾರದ ಹುಚ್ಚು ಸ್ವಲ್ಪ ಜಾಸ್ತಿನೇ, ನಾವು ದುಡಿದು ಉಳಿಸಿದ ಹಣವನ್ನ ಹೆಚ್ಚಾಗಿ ಬಂಗಾರಗಳಿಗೆ ವಿನಿಯೋಗ ಮಾಡುತ್ತೇವೆ ಯಾಕೆಂದರೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗುವುದು ಇದೆ ಚಿನ್ನ. ಆದರೆ ಬಂಗಾರದ ಖರೀದಿಗೆ ಸರಿ ಸಮಯ ತೋಚದೆ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ , ಹಬ್ಬದ ದಿನಗಳಲ್ಲಿ ಖರೀದಿ ಮಾಡಿದರಾಯ್ತು ಎಂದು ಅಂದುಕೊಳ್ಳುತ್ತೇವೆ. ಇದು ನಿಮ್ಮ ತಪ್ಪು ನಿರ್ಧಾರ ಕೆಲ...Kannada News