ಹೊಸ ವರುಷದ ಸಂಭ್ರಮದಲ್ಲಿರುವ ದೇಶದ ಜನತೆಗೆ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಬಂಪರ್ ಆಫ಼ರ್ ನೀಡಿದೆ. ಹೌದು ದೇಶದಲ್ಲಿ ಇದೀಗ ಪೆಟ್ರೋಲ್ ಬೆಲೆ ಒಂದು ಕಡೆ ದಿನದಿಂದ ದಿನಕ್ಕೆ ಕಮ್ಮಿಯಾಗಿದೆ, ಮತ್ತು ಹೊಸವರುಷದ ದಿನವೂ ಇಪ್ಪತ್ತು ಪೈಸೆ ಇಳಿದಿದೆ. ಇದೆ ಖುಷಿಯಲ್ಲಿರುವ ಜನತೆಗೆ ಸಾಲು ಸಾಲು ಸುದ್ದಿಗಳು ಕಾಯುತ್ತಿವೆ. ಹೊಸ ವರ್ಷ ಮುನ್ನಾದಿನ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆ ಕಡಿಮೆ ಮಾಡಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಸಬ್ಸಿಡಿ ಸಹಿತ 14 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 5 ರೂ 91 ಪೈಸೆ ಗಳ ಕಡಿತ ಮಾಡಿದ್ದು, ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 120 ರೂ 50 ಪೈಸೆ ಕಡಿಮೆ ಮಾಡಲಾಗಿದೆ. ಇನ್ನು, ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ 494ರೂ 99 ಪೈಸೆಗಳಿಗೆ ಸಿಗಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ಸಿಲಿಂಡರ್‌ ಬೆಲೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ತೈಲ ಕಂಪನಿ ಪ್ರಕಟಣೆ ತಿಳಿಸಿದೆ. ಇದಷ್ಟೇ ಅಲ್ಲದೆ ದಿನನಿತ್ಯದ ವಸ್ತುಗಳಿಗೆ ಜಿಎಸ್ಟಿ ದರದಲ್ಲಿ ಗಣನೀಯ ಇಳಿಕೆ ಮಾಡಿದೆ.

ಸಿಮೆಂಟ್, ವಾಹನ ಭಾಗಗಳು, ಟೈರ್, ಎಸಿ ಮತ್ತು ಟಿವಿಗಳ ಮೇಲೆ 18 ಪ್ರತಿಶತ ಜಿಎಸ್‏ಟಿ ಧಾರ್ಮಿಕ ಯಾತ್ರೆಗಳಿಗೆ ಹೋಗುವ ವಿಮಾನಗಳ ಮೇಲಿನ ಜಿಎಸ್‏ಟಿ ದರ ಇಳಿಕೆ. 100 ರೂವರೆಗಿನ ಸಿನಿಮಾ ಟಿಕೆಟ್ ಅಗ್ಗ. ರೂ 100 ರವರೆಗೆ ಟಿಕೆಟ್ 12% ಜಿಎಸ್‏ಟಿ 100 ರೂ ಗಿಂತ ಅಧಿಕ ಮೊತ್ತದ ಸಿನಿಮಾ ಟಿಕೆಟ್ ಗೆ 18% ಜಿಎಸ್‏ಟಿ ವಿಧಿಸಲಾಗುವುದು.

Please follow and like us:
0
http://karnatakatoday.in/wp-content/uploads/2019/01/gas-january-1024x576.jpghttp://karnatakatoday.in/wp-content/uploads/2019/01/gas-january-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಮಂಗಳೂರುಹೊಸ ವರುಷದ ಸಂಭ್ರಮದಲ್ಲಿರುವ ದೇಶದ ಜನತೆಗೆ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಬಂಪರ್ ಆಫ಼ರ್ ನೀಡಿದೆ. ಹೌದು ದೇಶದಲ್ಲಿ ಇದೀಗ ಪೆಟ್ರೋಲ್ ಬೆಲೆ ಒಂದು ಕಡೆ ದಿನದಿಂದ ದಿನಕ್ಕೆ ಕಮ್ಮಿಯಾಗಿದೆ, ಮತ್ತು ಹೊಸವರುಷದ ದಿನವೂ ಇಪ್ಪತ್ತು ಪೈಸೆ ಇಳಿದಿದೆ. ಇದೆ ಖುಷಿಯಲ್ಲಿರುವ ಜನತೆಗೆ ಸಾಲು ಸಾಲು ಸುದ್ದಿಗಳು ಕಾಯುತ್ತಿವೆ. ಹೊಸ ವರ್ಷ ಮುನ್ನಾದಿನ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆ ಕಡಿಮೆ ಮಾಡಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ...Kannada News