ಅದೃಷ್ಟ ಮತ್ತು ದುರದೃಷ್ಟ ಅನ್ನುವುದು ಮನುಷ್ಯನಿಗೆ ಯಾವಾಗ ಹೇಗೆ ಬರುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ, ಒಬ್ಬ ಬಡವನಿಗೆ ಅದೃಷ್ಟ ಅನ್ನುವುದು ಕೈ ಹಿಡಿದರೆ ಆದ ಒಮ್ಮೆಲೇ ಶ್ರೀಮಂತ ಆಗುತ್ತಾನೆ ಮತ್ತು ಒಬ್ಬ ಶ್ರೀಮಂತನಿಗೆ ಅದೃಷ್ಟ ಅನ್ನುವುದು ಕೈ ಕೊಟ್ಟರೆ ಆತ ಎಷ್ಟೇ ದೊಡ್ಡ ಶ್ರೀಮಂತನಾಗಿದ್ದರೂ ಕೂಡ ಆತ ಭಿಕ್ಷುಕನಾಗುತ್ತಾನೆ ಮತ್ತು ಇದಕ್ಕೆ ಬಹಳ ಉದಾಹರಣೆಗಳು ಕೂಡ ಇದೆ. ಸ್ನೇಹಿತರೆ ನಾವು ಹೇಳುವ ಈ ಕೂಲಿ ಮಾಡುವ ವ್ಯಕ್ತಿ ರಾತ್ರಿ ಬೆಳಗಾಗುವುದರ ಒಳಗೆ ದೊಡ್ಡ ಶ್ರೀಮಂತನಾಗಿದ್ದಾನೆ, ಕೂಲಿ ಕೆಲಸ ಮಾಡಿ ತನ್ನ ಹೆಂಡತಿ ಮತ್ತು ಮಕ್ಕಳನ್ನ ಸಾಕುತ್ತಿದ್ದ ವ್ಯಕ್ತಿ ಈಗ ಕೋಟ್ಯಾಧಿಪತಿ ಆಗಿ ಜೀವನ ಮಾಡುತ್ತಿದ್ದಾನೆ.

ಇನ್ನು ಈತನನ್ನ ನೋಡಿ ಅಲ್ಲಿನ ಜನರು ಫುಲ್ ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಹಾಗಾದರೆ ಈ ಕೂಲಿ ಮಾಡುವ ವ್ಯಕ್ತಿ ಯಾರು ಮತ್ತು ಆತ ಒಮ್ಮೆಲೇ ಇಷ್ಟು ಶ್ರೀಮಂತ ಹೇಗೆ ಆದ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕೇರಳ ರಾಜ್ಯದ ಕುರಾಚಿ ನಗರಕ್ಕೆ ಸೇರಿದ ರಾಜನ್ ಅನ್ನುವ ವ್ಯಕ್ತಿ ಚಿಕ್ಕ ಮನೆ ಮಾಡುವ ಸಾಕಷ್ಟು ಸಾಲ ಮಾಡಿದ್ದರು ಮತ್ತು ಸಾಲ ತೀರಿಸಲು ಹಗಲು ರಾತ್ರಿ ಅನ್ನದೆ ಕಷ್ಟಪಟ್ಟು ದುಡಿಯುತ್ತಿದ್ದರು ಮತ್ತು ಅದರ ಜೊತೆಗೆ ತನ್ನ ಮಗಳ ಮದುವೆಗೆ ಮಾಡಿದ ಸಾಲ ಕೂಡ ಹಾಗೆ ಉಳಿದಿತ್ತು.

Lucky Rajan

ಬ್ಯಾಂಕುಗಳಲ್ಲಿ ಅಷ್ಟೆಲ್ಲ ಸಾಲ ಮಾಡಿದ್ದರೂ ಹಣ ಸಾಕಾಗದೆ ಮನೆ ಕಟ್ಟುವ ಕೆಲಸ ಅರ್ಧಕ್ಕೆ ನಿಂತಿತ್ತು, ಹೇಗಾದರೂ ಮನೆಯನ್ನ ಪೂರ್ತಿ ಮಾಡಬೇಕು ಅನ್ನುವ ಸಲುವಾಗಿ ಮತ್ತೆ ಬ್ಯಾಂಕ್ ನಲ್ಲಿ ಸಾಲ ಮಾಡಲು ನಿರ್ಧಾರ ಮಾಡಿದರು ರಾಜನ್ ಅವರು. ಇನ್ನು ಬ್ಯಾಂಕಿನಲ್ಲಿ ಸಾಲ ಮಾಡಲು ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ 300 ರೂಪಾಯಿ ಕೊಟ್ಟು ಒಂದು ಲಾಟರಿ ಟಿಕೆಟ್ ಖರೀದಿ ಮಾಡಿದರು ರಾಜನ್ ಅವರು ಮತ್ತು ಲಾಟರಿ ಪಡೆದ ನಂತರ ರಾಜನ್ ಅವರ ಅದೃಷ್ಟವೇ ಬದಲಾಯಿತು ಎಂದು ಅನ್ನಬಹುದು. ಇನ್ನು ಕೆಲವು ಸಮಯದ ನಂತರ ಆ ಲಾಟರಿ ಡ್ರಾ ಆದನಂತರ ರಾಜನ್ ಅವರ ಅದೃಷ್ಟವೇ ಬದಲಾಯಿತು.

ಹೌದು ರಾಜನ್ ಅವರಿಗೆ ಬರೊಬ್ಬರು 12 ಕೋಟಿ ರೂಪಾಯಿ ಲಾಟರಿ ಬಹುಮಾನ ಬಂತು. ರಾಜನ್ ಅವರು ಈ ಹಿಂದೆ ಹಲವು ಭಾರಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು ಮತ್ತು ಈ ಲಾಟರಿ ವಿಷಯವಾಗಿ ಹಲವು ಭಾರಿ ಹೆಂಡತಿಯ ಜೊತೆ ಜಗಳವನ್ನ ಕೂಡಿ ಮಾಡಿಕೊಂಡಿದ್ದರು. ಇನ್ನು ವಿಪರ್ಯಾಸ ಏನು ಅಂದರೆ ಈಗಾಗಲೇ ಸಾಲದಲ್ಲಿ ಬಳಲುತ್ತಿರುವ ನಾನು ಲಾಟರಿ ಖರೀದಿ ಮಾಡಿದ ವಿಚಾರವನ್ನ ಹೆಂಡತಿಗೆ ಹೇಳಿದರೆ ಅವಳು ಕೋಪ ಮಾಡಿಕೊಳ್ಳುತ್ತಾನೆ ಅನ್ನುವ ಕಾರಣೆಕ್ಕೆ ಲಾಟರಿ ಖರೀದಿ ಮಾಡಿದ ವಿಷಯವನ್ನ ಹೆಂಡತಿಯ ಬಳಿ ಹೇಳಿರಲಿಲ್ಲ ರಾಜನ್ ಅವರು.

Lucky Rajan

ಇನ್ನು ಈಗ ರಾಜನ್ ಮತ್ತು ರಾಜನ್ ಅವರ ಹೆಂಡತಿ ಮಕ್ಕಳು ಲಾಟರಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಬಂದಿರುವುದಕ್ಕೆ ತುಂಬಾ ಸಂತಸವನ್ನ ವ್ಯಕ್ತಪಡಿಸಿದ್ದಾರೆ, ತುಂಬಾ ಕಷ್ಟದ ದಿನಗಳನ್ನ ಕಂಡಿರುವ ರಾಜನ್ ಅವರು ಬಂದ ಹಣದಲ್ಲಿ ತನ್ನ ಎಲ್ಲಾ ಸಾಲಗಳನ್ನ ತೀರಿಸಿಕೊಂಡು ಅರ್ಧಕ್ಕೆ ನಿಂತಿದ್ದ ಮನೆಯನ್ನ ಪೂರ್ತಿಯಾಗಿ ಮಾಡಿ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಸಾಲ ಪಡೆಯಲು ಹೋದ ವ್ಯಕ್ತಿ ಸಾಹುಕಾರಣದ ಈ ರೋಚಕ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Please follow and like us:
error0
http://karnatakatoday.in/wp-content/uploads/2020/03/Lucky-Rajan-1024x576.jpghttp://karnatakatoday.in/wp-content/uploads/2020/03/Lucky-Rajan-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಅದೃಷ್ಟ ಮತ್ತು ದುರದೃಷ್ಟ ಅನ್ನುವುದು ಮನುಷ್ಯನಿಗೆ ಯಾವಾಗ ಹೇಗೆ ಬರುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ, ಒಬ್ಬ ಬಡವನಿಗೆ ಅದೃಷ್ಟ ಅನ್ನುವುದು ಕೈ ಹಿಡಿದರೆ ಆದ ಒಮ್ಮೆಲೇ ಶ್ರೀಮಂತ ಆಗುತ್ತಾನೆ ಮತ್ತು ಒಬ್ಬ ಶ್ರೀಮಂತನಿಗೆ ಅದೃಷ್ಟ ಅನ್ನುವುದು ಕೈ ಕೊಟ್ಟರೆ ಆತ ಎಷ್ಟೇ ದೊಡ್ಡ ಶ್ರೀಮಂತನಾಗಿದ್ದರೂ ಕೂಡ ಆತ ಭಿಕ್ಷುಕನಾಗುತ್ತಾನೆ ಮತ್ತು ಇದಕ್ಕೆ ಬಹಳ ಉದಾಹರಣೆಗಳು ಕೂಡ ಇದೆ. ಸ್ನೇಹಿತರೆ ನಾವು ಹೇಳುವ ಈ ಕೂಲಿ ಮಾಡುವ ವ್ಯಕ್ತಿ...Film | Devotional | Cricket | Health | India