ನಮ್ಮ ಹಿಂದೂ ಸಂಪ್ರಾಯದಲ್ಲಿ ಎಲ್ಲಾ ಹಬ್ಬಗಳಿಗೂ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಮತ್ತು ನಮ್ಮ ಪುರಾಣದಲ್ಲಿ ಕೂಡ ಕೆಲವು ಹಬ್ಬಗಳಿಗೆ ಅದರದ್ದೇ ಆದ ವಿಶೇಷತೆಗಳು ಇವೆ, ಹಿಂದೂಗಳ ಪವಿತ್ರವಾದ ಹಬ್ಬಗಳಲ್ಲಿ ಈ ಶಿವರಾತ್ರಿ ಹಬ್ಬ ಕೂಡ ಒಂದು ಮತ್ತು ಈ ಹಬ್ಬವನ್ನ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇನ್ನು ಈ ಶಿವರಾತ್ರಿ ಹಬ್ಬದ ದಿನ ಶಿವನ ದೇವಾಲಯದಲ್ಲಿ ಬಹಳ ವಿಶೇಷವಾದ ಪೂಜೆಗಳು ನಡೆಯುತ್ತದೆ ಮತ್ತು ಜನರು ಇದು ಉಪವಾಸವನ್ನ ಮಾಡಿ ಜಾಗರಣೆಯನ್ನ ಕೂಡ ಮಾಡುತ್ತಾರೆ, ಇನ್ನು ನಮ್ಮ ಕರಾವಳಿ ಪ್ರದೇಶಗಲ್ಲಿ ಕೆಲವು ದೇವಾಲಯದಲ್ಲಿ ವಿಶೇಷ ಭಜನಾ ಕಾರ್ಯಕ್ರಮವನ್ನ ಕೂಡ ಏರ್ಪಾಡು ಮಾಡಲಾಗಿರುತ್ತದೆ.

ನಾಳೆಯ ದಿನ ಬಹಳ ಶಕ್ತಿಶಾಲಿಯಾದ ದಿನ ಆದಕಾರಣ ಈ ದಿನ ಈ ಕೆಲವು ತಪ್ಪುಗಳನ್ನ ಮಾಡಿದರೆ ನೀವು ಜೀವನದಲ್ಲಿ ಅನೇಕ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಮತ್ತು ನಿಮ್ಮ ನಿಮಗೆ ಇರುವ ಸಮಸ್ಯೆಗಳು ಕೂಡ ಮುಂದಿನ ದಿನಗಳಲ್ಲಿ ದುಪ್ಪಟ್ಟು ಆಗುತ್ತದೆ. ಹಾಗಾದರೆ ಶಿವರಾತ್ರಿಯ ದಿನ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಾಳೆಯ ದಿನ ಶಿವನ ದಿನ ಆದಕಾರಣ ನಾವು ಯಾವುದೇ ಕಾರಣಕ್ಕೂ ಸೂರ್ಯ ಉದಯವಾದ ನಂತರ ಏಳಬಾರದು ಮತ್ತು ಬೆಳಿಗ್ಗೆ ಸೂರ್ಯ ಉದಯ ಆಗುವುದರ ಒಳಗೆ ಎದ್ದು ಸ್ನಾನ ಮಾಡಿ ಹತ್ತಿರದ ಶಿವನ ದೇವಾಲಯಕ್ಕೆ ಭೇಟಿನೀಡಿ ಶಿವನ ಆಶೀರ್ವಾದವನ್ನ ಪಡೆಯಬೇಕು. ಇನ್ನು ಈ ದಿನ ಉಪವಾಸವನ್ನ ಮಾಡಿದರೆ ಬಹಳ ಒಳ್ಳೆಯದು ಮತ್ತು ರಾತ್ರಿಯ ಸಮಯದಲ್ಲಿ ಜಾಗರಣೆಯನ್ನ ಮಾಡಿದರೆ ಇನ್ನು ಒಳ್ಳೆಯದು.

Maha shivaratri festival

ನಾಳೆಯ ದಿನ ಬಹಳ ಶ್ರೇಷ್ಠವಾದ ದಿನವಾದ ಕಾರಣ ಯಾವುದೇ ಕಾರಣಕ್ಕೂ ಮಾಂಸದ ಆಹಾರವನ್ನ ಸೇವನೆ ಮಾಡಬಾರದು ಮಾಡಿದರೆ ನಿಮಗೆ ಶಿವನ ಆಶೀರ್ವಾದ ದೊರೆಯುವುದಿಲ್ಲ, ಇನ್ನು ಇದರ ಜೊತೆಗೆ ನಾಳೆಯ ದಿನ ಮದ್ಯಪಾನವನ್ನ ಕೂಡ ಸೇವನೆ ಮಾಡಬಾರದು. ನಾಳೆಯ ದಿನ ಮುಖ ಪ್ರಾಣಿಗಳಿಗೆ ಅದರಲ್ಲೂ ಹಸುವಿಗೆ ಅಂದರೆ ನಂದಿಗೆ ನಿಮ್ಮ ಕೈಯಲ್ಲಿ ಆದಷ್ಟು ತಿನಿಸುಗಳನ್ನ ನೀಡಿ ಅದರ ಆಶೀರ್ವಾದನ್ನ ಪಡೆಯಬೇಕು, ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡದ ಎಲೆಯನ್ನ ಕೀಳಬೇಡಿ. ಇನ್ನು ಶಿವರಾತ್ರಿಯ ದಿನ ಯಾರ ಬಳಿನೂ ಜಗಳವನ್ನ ಮಾಡಿಕೊಳ್ಳಬೇಡಿ ಮತ್ತು ಆದಷ್ಟು ಈ ಒಂದು ದಿನ ಮಡಿಯಿಂದ ಇರುವುದು ಒಳ್ಳೆಯದು, ಗಂಡ ಹೆಂಡತಿಯರು ಶಿವನ ದೇವಾಲಯಕ್ಕೆ ಹೋಗಿ ಶಿವನ ದರ್ಶನವನ್ನ ಮಾಡಿ.

ಶಿವರಾತ್ರಿಯ ದಿನ ತಲೆ ಕೂದಲನ್ನ ಕತ್ತರಿಸದೆ ಇರುವುದು ಬಹಳ ಒಳ್ಳೆಯದು ಮತ್ತು ಕೈ ಕಾಲಿನ ಉಗುರುಗಳನ್ನ ಕೂಡ ಈ ಒಂದು ತಗೆಯಬೇಡಿ, ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ದಾನವನ್ನ ಮಾಡಿದರೆ ನಿಮಗೆ ಪುಣ್ಯ ಸಿಗುತ್ತದೆ. ನಿಮ್ಮ ಬಳಿ ವಾಹನ ಇದ್ದರೆ ನಾಳೆಯ ಒಂದು ದಿನ ವಾಹನವನ್ನ ಹೊರಗೆ ತಗೆಯಬೇಡಿ ಮತ್ತು ವಾಹನವನ್ನ ಸ್ವಚ್ಛ ಮಾಡಿ ಅದಕ್ಕೆ ಪೂಜೆಯನ್ನ ಮಾಡಿ, ಹೊಸ ವ್ಯಾಪಾರ ಅಥವಾ ವ್ಯವಹಾರವನ್ನ ಆರಂಭ ಮಾಡಲು ನಾಳೆಯ ದಿನ ಬಹಳ ಸೂಕ್ತವಾದ ದಿನವಾಗಿದೆ ಮತ್ತು ಭೂಮಿಯನ್ನ ಖರೀದಿ ಮಾಡಲು ಕೂಡ ಸೂಕ್ತವಾದ ಸಮಯ. ಸ್ನೇಹಿತರೆ ನಾಳೆ ಶಿವರಾತ್ರಿ ಆಗಿರುವುದರಿಂದ ಆದಷ್ಟು ಶಿವನ ಆರಾಧನೆಯನ್ನ ಮಾಡಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Maha shivaratri festival

Please follow and like us:
error0
http://karnatakatoday.in/wp-content/uploads/2020/02/Maha-shivaratri-festival-1-1024x576.jpghttp://karnatakatoday.in/wp-content/uploads/2020/02/Maha-shivaratri-festival-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲನಮ್ಮ ಹಿಂದೂ ಸಂಪ್ರಾಯದಲ್ಲಿ ಎಲ್ಲಾ ಹಬ್ಬಗಳಿಗೂ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಮತ್ತು ನಮ್ಮ ಪುರಾಣದಲ್ಲಿ ಕೂಡ ಕೆಲವು ಹಬ್ಬಗಳಿಗೆ ಅದರದ್ದೇ ಆದ ವಿಶೇಷತೆಗಳು ಇವೆ, ಹಿಂದೂಗಳ ಪವಿತ್ರವಾದ ಹಬ್ಬಗಳಲ್ಲಿ ಈ ಶಿವರಾತ್ರಿ ಹಬ್ಬ ಕೂಡ ಒಂದು ಮತ್ತು ಈ ಹಬ್ಬವನ್ನ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇನ್ನು ಈ ಶಿವರಾತ್ರಿ ಹಬ್ಬದ ದಿನ ಶಿವನ ದೇವಾಲಯದಲ್ಲಿ ಬಹಳ ವಿಶೇಷವಾದ ಪೂಜೆಗಳು ನಡೆಯುತ್ತದೆ ಮತ್ತು...Film | Devotional | Cricket | Health | India