ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಶ್ರಾವಣದ ಎರಡನೆಯ ಶುಕ್ರವಾರ, ಅಥವಾ ಹುಣ್ಣಿಮೆಯ ಹಿಂದೆ ಬೀಳುವ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತದೆ.

ಈ ವ್ರತವನ್ನು ಮೈಸೂರು-ಕರ್ನಾಟಕದ ಪ್ರಾಂತಗಳಲ್ಲಿ ಮಾತ್ರ ಹೆಚ್ಚಾಗಿ ಆಚರಿಸಲಾಗುತ್ತದೆ ಇನ್ನು ಹಬ್ಬದ ದಿನಗಳಲ್ಲಿ ಭಾರತೀಯರು ಹೆಚ್ಚಾಗಿ ಆಭರಣ ಖರೀದಿಸುವುದು ವಾಡಿಕೆ. ಅದರಲ್ಲೂ ಬಂಗಾರಕ್ಕೆ ಭಾರತದಲ್ಲಿರುವ ಬೇಡಿಕೆ ಮತ್ತೆಲ್ಲೂ ಇಲ್ಲ, ಚಿನ್ನದ ವ್ಯಾಪಾರಿಗಳಿಗಂತೂ ಇದು ಸುಗ್ಗಿಯ ಕಾಲ ಎನ್ನಬಹುದು. ಆದರೆ ಈ ಬಾರಿ ವರಮಹಾಲಕ್ಷ್ಮಿಯ ಹಬ್ಬದ ದಿನದಂದು ಚಿನ್ನ ಸಾಮಾನ್ಯರಿಗೆ ಕೈಗೆಟುಕದಂತಾಗಿದೆ ಎನ್ನಬಹುದು.


ವರಮಹಾಲಕ್ಷ್ಮಿ ದಿನದಂದೇ ಮಹಿಳೆಯರ ಅಚ್ಚುಮೆಚ್ಚಿನ ಚಿನ್ನಾಭರಣಗಳ ಬೆಲೆ ಗಗನಕ್ಕೇರಿ ಬಂಗಾರ ಖರೀದಿಸುವವರಿಗೆ ತೀವ್ರ ನಿರಾಶೆ ಮೂಡಿಸಿದೆ. ಗುರುವಾರ ಬಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 38,000 ಗಡಿ ದಾಟಿದೆ. 550 ರೂ ದರ ಏರಿಕೆ ಕಂಡ ಚಿನ್ನದ ಬೆಲೆ 10 ಗ್ರಾಂಗೆ 38,470 ರೂಗೆ ತಲುಪಿದೆ. ಅಮೆರಿಕಾ-ಚೀನಾದೊಂದಿಗಿನ ವ್ಯಾಪಾರದಲ್ಲಿನ ಉದ್ವಿಗ್ನತೆ ಹಾಗೂ ದೇಶೀಯ ಆರ್ಥಿಕ ಕಾಳಜಿಗಳ ಕಾರಣಕ್ಕಾಗಿ ಈ ಏರಿಕೆ ಕಂಡುಬಂದಿದೆ ಎಂದು ಅಂದಾಜಿಸಲಾಗಿದೆ.

ಹೆಚ್ಚುತ್ತಿರುವ ಯುಎಸ್-ಚೀನಾ ವ್ಯಾಪಾರದ ಉದ್ವಿಗ್ನತೆ ವಾತಾವರಣದ ನಡುವೆ ಆರು ವರ್ಷಗಳಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1,500 ಯುಎಸ್ ಡಾಲರ್ ಗಡಿ ದಾಟಿದೆ.ಇದಲ್ಲದೆ, ದೇಶೀಯ ಆರ್ಥಿಕ ಕುಸಿತದ ಬಗೆಗಿನ ಕಳವಳಗಳು ಚಿನ್ನದಂತಹಾ ಅಮೂಲ್ಯ ಲೋಹದ ಮೇಲೆ ಜನರ ಮುತುವರ್ಜಿಯನ್ನು ಹೆಚ್ಚಿಸುತ್ತಿದೆ.

ಹಬ್ಬ ಹರಿದಿನದಂದೇ ಚಿನ್ನದ ಬೆಲೆ ಈ ಮಟ್ಟಿಗೆ ಏರಿದ್ದು ಜನಸಾಮಾನ್ಯರಿಗೆ ಭಾರಿ ಬೇಸರ ಮೂಡಿಸಿದೆ. ಹೆಚ್ಚು ಚಿನ್ನ ಖರೀದಿ ಮಾಡಬೇಕೆಂದು ಬಯಸಿದವರಿಗೆ ಇದು ಸೂಕ್ತ ಸಮಯವಲ್ಲ ಎನ್ನಬಹದು. ಇನ್ನು ಚಿನ್ನದ ಜೊತೆಗೆ ಬೆಳ್ಳಿ ಕೂಡ ದುಬಾರಿಯಾಗಿದ್ದು ಒಂದೇ ದಿನದಲ್ಲಿ 630 ರೂನಷ್ಟು ಏರಿಕೆ ಕಂಡಿದೆ.

Please follow and like us:
error0
http://karnatakatoday.in/wp-content/uploads/2019/08/varamahalakshmi-habba-1024x576.jpghttp://karnatakatoday.in/wp-content/uploads/2019/08/varamahalakshmi-habba-150x104.jpgKarnataka Trendingಎಲ್ಲಾ ಸುದ್ದಿಗಳುಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಶ್ರಾವಣದ ಎರಡನೆಯ ಶುಕ್ರವಾರ, ಅಥವಾ ಹುಣ್ಣಿಮೆಯ ಹಿಂದೆ ಬೀಳುವ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತವನ್ನು ಮೈಸೂರು-ಕರ್ನಾಟಕದ ಪ್ರಾಂತಗಳಲ್ಲಿ ಮಾತ್ರ ಹೆಚ್ಚಾಗಿ...Film | Devotional | Cricket | Health | India