ಸಾವು ಯಾರಿಗೆ ಹೇಗೆ ಬರುತ್ತದೆ ಎಂದು ಊಹಿಸಲಾಗಲ್ಲ ಜಗತ್ತಿನ ಕಹಿ ಸತ್ಯವಿದು  ಹುಟ್ಟಿದವೆರೆಲ್ಲ ಒಂದು ದಿನ ಎಲ್ಲವನ್ನು ಬಿಟ್ಟು ಹೋಗಲೇಬೇಕು, ಆದರೂ ಕೂಡ ಅವರ ನೆನಪು ಮಡಿದ ಸಾಧನೆ ನಮಗೆ ನಿದರ್ಶನವಾಗಿರಬೇಕು. ಹೌದು ಚಿತ್ರರಂಗದಲ್ಲಿ ಇದ್ದುಕೊಂಡು ಬಾಲಿವುಡ್ ನಲ್ಲಿ ಅಪಾರ ಖ್ಯಾತಿಗಳೈಸಿದ ನಟರೊಬ್ಬರು ಇನ್ನಿಲ್ಲವಾಗಿದ್ದಾರೆ. ಯಾರು ಆ ನಟ ಹೇಗಾಯ್ತು ಎಂದು ತಿಳಿಯೋಣ. ಬಾಲಿವುಡ್ ನಟ ಮಹೇಶ್ ಆನಂದ್ ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಇದು ಆತ್ಮಹತ್ಯೆ ಅಲ್ಲ ಎಂದಿದ್ದಾರೆ.

ಅಲ್ಲದೇ, ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ನೋಟ್ ಗಳು ಕೂಡಾ ದೊರಕಿಲ್ಲ.  ಕಳೆದ ತಿಂಗಳು ಬಿಡುಗಡೆಯಾದ ಗೋವಿಂದ್ ಅಭಿನಯದ ರಂಗೀಲಾ ರಾಜಾ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದ 57 ವರ್ಷದ ಮಹೇಶ್ ಆನಂದ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಅಂದೇರಿಯಲ್ಲಿನ ಅವರ ಮನೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದಲ್ಲಿನ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ. ಕುಡಿತದ ದಾಸನಾಗಿದ್ದ ಮಹೇಶ್ ಆನಂದ್ ಹೆಂಡತಿ ಮಾಸ್ಕೋದಲ್ಲಿ ವಾಸಿಸುತ್ತಿದ್ದು, ಆತನ ಏಕಾಂಗಿಯಾಗಿ ವಾಸಿಸುತ್ತಿದ್ದ ಎನ್ನಲಾಗಿದೆ. ಆದಾಗ್ಯೂ, ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ.

ಮನೆಯಿಂದ ಮೃತದೇಹವನ್ನು ಆಸ್ಪತ್ರೆಗೆ ತಂದಾಗ ಕೊಳತೆ ಸ್ಥಿತಿಯಲ್ಲಿದಿತ್ತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸತ್ಯಾಂಶ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ. ಕೂಲಿ ನಂಬರ್ 1, ಸ್ವರ್ಗ್, ಕುರುಕ್ಷೇತ್ರ, ವಿಜೇತ ಸೇರಿದಂತೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಧರ್ಮೇಂದ್ರ, ಗೋವಿಂದ್, ಸಂಜಯ್ ದತ್ ಮತ್ತಿತರ ಜೊತೆಗೆ ಅನೇಕ ಚಿತ್ರಗಳಲ್ಲಿ ಮಹೇಶ್ ಆನಂದ್ ನಟಿಸಿದ್ದಾರೆ.

 

ಖ್ಯಾತಃ ನಟನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಅನೇಕ ದಿಗ್ಗಜ ನಟರು ಈಗಾಗಲೇ ಕಂಬನಿ ಮಿಡಿದಿದ್ದಾರೆ. ಇನ್ನು ಅವರ ಅಪಾರ ಅಭಿಮಾನಿ ಬಳಗ ಕೂಡ ನೆಚ್ಚಿನ ನಟನನ್ನ ಕಳೆದುಕೊಂಡು ಬಡವಾಗಿದ್ದಾರೆ. ಇವರ ಚಿತ್ರಗಳಲ್ಲಿ ನಿಮ್ಮ ಫೆವರಿಟ್ ಯಾವುದು ಎಂದು ತಿಳಿಸಿ .  ಸುಮಾರು 15 ವರ್ಷಗಳ ಗ್ಯಾಪ್ ಬಳಿಕ ಇತ್ತೀಚಿಗೆ ಪಹಲಜ್ ನಿಹಲಾನಿ ನಿರ್ದೇಶನದ ಗೋವಿಂದ ಜತೆಗೆ ರಂಗೀಲಾ ರಾಜಾ ಚಿತ್ರದಲ್ಲಿ ಅಭಿನಯಿಸಿದ್ದರು. ಮುಂಬೈನ ವರ್ಸೋವಾ ಪೊಲೀಸರು ಮಹೇಶ್ ಆನಂದ್ ಸಾವನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Please follow and like us:
0
http://karnatakatoday.in/wp-content/uploads/2019/02/kannada-chitraranga-1024x576.jpghttp://karnatakatoday.in/wp-content/uploads/2019/02/kannada-chitraranga-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಸಾವು ಯಾರಿಗೆ ಹೇಗೆ ಬರುತ್ತದೆ ಎಂದು ಊಹಿಸಲಾಗಲ್ಲ ಜಗತ್ತಿನ ಕಹಿ ಸತ್ಯವಿದು  ಹುಟ್ಟಿದವೆರೆಲ್ಲ ಒಂದು ದಿನ ಎಲ್ಲವನ್ನು ಬಿಟ್ಟು ಹೋಗಲೇಬೇಕು, ಆದರೂ ಕೂಡ ಅವರ ನೆನಪು ಮಡಿದ ಸಾಧನೆ ನಮಗೆ ನಿದರ್ಶನವಾಗಿರಬೇಕು. ಹೌದು ಚಿತ್ರರಂಗದಲ್ಲಿ ಇದ್ದುಕೊಂಡು ಬಾಲಿವುಡ್ ನಲ್ಲಿ ಅಪಾರ ಖ್ಯಾತಿಗಳೈಸಿದ ನಟರೊಬ್ಬರು ಇನ್ನಿಲ್ಲವಾಗಿದ್ದಾರೆ. ಯಾರು ಆ ನಟ ಹೇಗಾಯ್ತು ಎಂದು ತಿಳಿಯೋಣ. ಬಾಲಿವುಡ್ ನಟ ಮಹೇಶ್ ಆನಂದ್ ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು...Kannada News