Marriage of Sumalata and Ambareesh

ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಮಾಡಿ ಮದುವೆಯಾದ ಎಲ್ಲಾ ಯುವ ಜೋಡಿಗಳಿಗೂ ಮಾದರಿಯಾಗಿದ್ದ ಜೋಡಿ ಅಂದರೆ ಅದು ಅಂಬರೀಷ್ ಮತ್ತು ಸುಮಲತಾ ಅವರ ಜೋಡಿ.

ಇನ್ನು ಅಂಬರೀಷ್ ಅವರು ಸುಮಲತಾ ಅವರನ್ನ ಮದುವೆಯಾದಾಗಿನಿಂದ ಅವರನ್ನ ರಾಣಿಯಂತೆ ನೋಡಿಕೊಂಡಿದ್ದರು, ಆದರೆ ಇವರಿಬ್ಬರು ಪ್ರೀತಿ ಮಾಡಿ ಮದುವೆಯಾಗುವ ಸಂದರ್ಭದಲ್ಲಿ ಒಬ್ಬ ಟಾಪ್ ನಟಿ ಇವರಿಬ್ಬರ ಮದುವೆಗೆ ಅಡಪಡಿಸಿದ್ದರಂತೆ.

ಹಾಗಾದರೆ ಆ ಟಾಪ್ ನಟಿ ಯಾರು ಮತ್ತು ಯಾಕೆ ಮದುವೆಗೆ ಅಡ್ಡಪಡಿಸಿದ್ದರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Marriage of Sumalata and Ambareesh

ಸ್ನೇಹಿತರೆ ಆ ನಟಿ ಬೇರೆ ಯಾರು ಅಲ್ಲ ಅವರೇ ಬಹುಭಾಷಾ ನಟಿ ಸುಹಾಸಿನಿ, ತೆಲುಗಿನ ಮುಗ್ಗುರು ಮಿತ್ರುಲು ಚಿತ್ರದ ಶೂಟಿಂಗ್ ವೇಳೆ ಸುಮಲತಾ ಅವರು ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿದ್ದರು, ಇನ್ನು ಸುಹಾಸಿನಿ ಅವರದ್ದು ಡಾಕ್ಟರ್ ಪಾತ್ರ ಆಗಿದ್ದರಿಂದ ಸ್ಟ್ರೆಚರ್ ತಳ್ಳುತ್ತಿದ್ದರು.

ಇನ್ನು ಈ ಸಮಯದಲ್ಲಿ ಸುಮಲತಾ ಅವರು ನಾವು ಅಂಬರೀಷ್ ಅವರನ್ನ ಮದುವೆಯಾಗೋಣ ಅಂದುಕೊಂಡಿದ್ದೇನೆ ಸುಹಾಸಿನಿ ಅವರಿಗೆ ಹೇಳಿದರು, ಇನ್ನು ಈ ಮಾತನ್ನ ಕೇಳಿ ಶಾಕ್ ಆದ ಸುಹಾಸಿನಿ ಅವರು ನಿನಗೇನೂ ಹುಚ್ಚ, ಅಂಬರೀಷ್ ಅವರನ್ನ ನಿನ್ನ ಕೈಯಲ್ಲಿ ಹ್ಯಾಂಡಲ್ ಮಾಡಲು ಆಗುತ್ತಾ ಹೇಳಿದರು.

ಇನ್ನು ಮುಂದುವರೆಸಿದ ಸುಹಾಸಿನಿ ಅವರು ಸುಮಲತಾ ಅವರ ಬಳಿ ನೀನು ಮೊದಲೇ ಮೃದು ಸ್ವಭಾವದ ಹುಡುಗಿ ಮತ್ತು ಯಾವಾಗಲು ಪುಸ್ತಕ ಓದಿಕೊಂಡು ಇರುತ್ತೀಯ, ಇನ್ನು ಅಂಬರೀಷ್ ಅವರದ್ದು ಬೇರೆ ರೀತಿಯ ಸ್ವಭಾವ, ಇದೆಲ್ಲ ಆಗುವ ಕೆಲಸ ಅಲ್ಲ ಎಂದು ಹೇಳಿ ಸುಮಲತಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರಂತೆ ಸುಹಾಸಿನಿ ಅವರು.

Marriage of Sumalata and Ambareesh

ಈ ವಿಷಯವನ್ನ ಸುಮಲತಾ ಅವರು ಮದುವೆಯಾದ 10 ವರ್ಷದ ನಂತರ ಅಂಬರೀಷ್ ಅವರಿಗೆ ಹೇಳಿದ್ದರಂತೆ, ಇನ್ನು ಒಂದು ದಿನ ಸುಹಾಸಿನಿ ಅವರು ಅಂಬರೀಷ್ ಅವರ ಮನೆಗೆ ಬಂದಾಗ ಅಂಬರೀಷ್ ಅವರು ಸುಹಾಸಿನಿ ಅವರ ಬಳಿ, ಏನಮ್ಮ ನಾನು ಏನು ನಿನಗೆ ದ್ರೋಹ ಮಾಡಿದ್ದೀನಿ ನನ್ನ ಮೇಲೆ ಹಾಗೆಲ್ಲ ಹೇಳಿದ್ದೆಯಲ್ಲ ಎಂದು ತಮಾಷೆಯಾಗಿ ಸುಹಾಸಿನಿ ಅವರಿಗೆ ರೇಗಿಸಿದ್ದರಂತೆ ಅಂಬರೀಷ್ ಅವರು.

ಇನ್ನು ಈ ವಿಷಯವನ್ನ ಒಂದು ಖಾಸಗಿ ಸಂದರ್ಶನದಲ್ಲಿ ಸ್ವತಃ ಸುಮಲತಾ ಅವರೇ ಹೇಳಿಕೊಂಡಿದ್ದಾರೆ, ಸ್ನೇಹಿತರೆ ಸುಮಲತಾ ಮತ್ತು ಅಂಬರೀಷ್ ಅವರ ಸುಂದರ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Marriage of Sumalata and Ambareesh

Please follow and like us:
0
http://karnatakatoday.in/wp-content/uploads/2019/03/Marriage-of-Sumalata-anda-Ambarish-1024x576.jpghttp://karnatakatoday.in/wp-content/uploads/2019/03/Marriage-of-Sumalata-anda-Ambarish-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದಲ್ಲಿ ಪ್ರೀತಿ ಮಾಡಿ ಮದುವೆಯಾದ ಎಲ್ಲಾ ಯುವ ಜೋಡಿಗಳಿಗೂ ಮಾದರಿಯಾಗಿದ್ದ ಜೋಡಿ ಅಂದರೆ ಅದು ಅಂಬರೀಷ್ ಮತ್ತು ಸುಮಲತಾ ಅವರ ಜೋಡಿ. ಇನ್ನು ಅಂಬರೀಷ್ ಅವರು ಸುಮಲತಾ ಅವರನ್ನ ಮದುವೆಯಾದಾಗಿನಿಂದ ಅವರನ್ನ ರಾಣಿಯಂತೆ ನೋಡಿಕೊಂಡಿದ್ದರು, ಆದರೆ ಇವರಿಬ್ಬರು ಪ್ರೀತಿ ಮಾಡಿ ಮದುವೆಯಾಗುವ ಸಂದರ್ಭದಲ್ಲಿ ಒಬ್ಬ ಟಾಪ್ ನಟಿ ಇವರಿಬ್ಬರ ಮದುವೆಗೆ ಅಡಪಡಿಸಿದ್ದರಂತೆ. ಹಾಗಾದರೆ ಆ ಟಾಪ್ ನಟಿ ಯಾರು ಮತ್ತು ಯಾಕೆ ಮದುವೆಗೆ ಅಡ್ಡಪಡಿಸಿದ್ದರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ...Kannada News