ಪ್ರೇಮ ವಿವಾಹವಾಗಲೀ ಅಥವಾ ಮನೆಯಲ್ಲಿ ನೋಡಿ ಮಾಡಿದ ವಿವಾಹವಾಗಲೀ, ಕೊನೆಗೆ ಬದುಕಿನುದ್ದಕ್ಕೂ ಒಟ್ಟಿಗೆ ಇರುವುದು ಗಂಡ ಹೆಂಡತಿ ಮಾತ್ರ. ಇಷ್ಟವಿಲ್ಲದ ಮನಸ್ಸಿನಿಂದಲೋ ಅಥವಾ ಬಲವಂತವಾಗಿಯೋ ಮದುವೆ ಮಾಡಿಕೊಂಡಾಗ ಜೀವನಪೂರ್ತಿ ಆ ಕೊರಗಿನಿಂದ ಜೀವನ ಮಾಡುವುದು ಬಹಳ ಕಷ್ಟ. ಜೀವನವನ್ನು ಖುಷಿಯಾಗಿ ಕಳೆಯಬೇಕೆಂದರೆ ನಾವು ಪ್ರೀತಿಸುವ ಜೀವ ನಮ್ಮ ಜೊತೆಗಿರಬೇಕು, ಪ್ರತೀ‌ ಕ್ಷಣವೂ ನಮ್ಮ ಕಾಳಜಿ ವಹಿಸಬೇಕು, ಉಸಿರುಗಟ್ಟಿಸುವಷ್ಟು ಪ್ರೀತಿಸಬೇಕು. ಹೌದು ಈಗಿನ ಕಾಲದಲ್ಲಿ ವಿವಾಹ ಎನ್ನುವ ಪವಿತ್ರ ಬಂಧನಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿಲ್ಲ. ಮದುವೆಗಳು ವಿಜೃಂಭಣೆಯಿಂದ ನಡೆಯುತ್ತಿವೆ ಆದರೆ ಅಷ್ಟೇ ಬೇಗ ಸಂಬಂಧಗಳು ಮುರಿದು ಬೀಳುತ್ತಿವೆ.

ಕೆಲವೊಂದು ರಾಶಿ ಚಕ್ರಗಳ ಸಮೀಕ್ಷೆಯ ಪ್ರಕಾರ ಹಾಗು ಜಾತಕ ಫಲದ ಪ್ರಕಾರ ಕೆಲ ರಾಶಿಗಳ ವ್ಯಕ್ತಿಗಳು ಮದುವೆಯಾಗುವ ಹುಡುಗಿ ಹೇಗಿರುತ್ತಾಳೆ ಎನ್ನುವುದಕ್ಕೆ ಹಲವು ವಿವರಗಳನ್ನು ನೀಡಲಾಗಿದೆ. ವಾಸ್ತವವಾಗಿ ರಾಶಿಚಕ್ರ ಚಿಹ್ನೆಗಳು ನಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸುವುದಲ್ಲದೆ ನಮ್ಮ ಜೀವನದ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲುತ್ತವೆ. ಹಾಗಿದ್ದರೆ ರಾಶಿಚಕ್ರದ ಪ್ರಕಾರ ನೀವು ಮದುವೆಯಾಗುವ ಹುಡುಗಿ ಹೇಗಿರುತ್ತಾಳೆ ಎನ್ನುವುದರ ಬಗ್ಗೆ ಒಮ್ಮೆ ತಿಳಿದುಕೊಳ್ಳೋಣ. ಮೇಷ ರಾಶಿಯವರು ಮದುವೆಯಾಗುವ ಹುಡುಗಿ ಸಾಮಾನ್ಯವಾಗಿ ಮೋಜಿನ ಗುಣದ, ಹಾಗು ಸಾಹಸಿ ಹುಡುಗಿ ಆಗಿರುತ್ತಾಳೆ, ಬಹಳ ಪ್ರೀತಿ ಹಾಗು ಕಾಳಜಿ ತೋರಿಸುವ ಪತ್ನಿ ಆಗಿರುತ್ತಾಳೆ, ಪ್ರಯಾಣವನ್ನು ಬಹಳ ಇಷ್ಟಪಡುವ ಗುಣದವರು.


ವೃಷಭ ರಾಶಿಯವರ ಹೆಂಡತಿ ಬಹಳ ಸರಳತೆ ಹಾಗು ಪ್ರಾಮಾಣಿಕ ಗುಣದವರು, ಯಾವುದೇ ಕಷ್ಟ ಬಂದರೂ ಸಹಿತ ಪತಿಯೊಂದಿಗೆ ಸಾಥ್ ನೀಡುತ್ತಾರೆ. ಬಹಳ ಭಾವುಕ ಹಾಗು ಸ್ಬೇಹಜೀವಿಯಾದ ಹೆಂಡತಿಯನ್ನು ಪಡೆಯುತ್ತಾರೆ ಮಿಥುನ ರಾಶಿಯವರು. ಸಾಮಾನ್ಯವಾಗಿ ಕಟಕ ರಾಶಿಯವರು ಬಹಳ ಭಾವಜೀವಿಗಳು ಹೀಗಾಗಿ ಜಾತಕ ಫಲದ ಪ್ರಕಾರ ಇವರ ವೈವಾಹಿಕ ಜೀವನ ಸೊಗಸಾಗಿರುತ್ತದೆ. ಮದುವೆಯಾದ ಬಳಿಕ ಬಹಳ ಸಂತೋಷದ ಜೀವನ ನಡೆಸುತ್ತಾರೆ. ನ್ನು ಸಿಂಹದವರಿಗೆ ಬಹಳ ಗಟ್ಟಿ ಮನಸ್ಸಿನ ಹಾಗು ಅನ್ಯಾಯದ ವಿರುದ್ಧ ದಂಗೆ ಏಳುವ ಗುಣದ ಹೆಂಡತಿ ಜಾತಕ ಫಲದ ಪ್ರಕಾರ ಸಿಗುತ್ತಾಳೆ.

ಜೀವನದಲ್ಲಿ ಬರುವ ಸುಖ ದುಃಖ ಹಾಗು ಏಳು ಬೀಳುಗಳಲ್ಲಿ ಎಲ್ಲಿಲ್ಲದ ಸಹಕಾರ ನೀಡುತ್ತಾಳೆ. ದೂರದಿಂದಲೇ ಎಲ್ಲಾ ಕಾರ್ಯಗಳನ್ನು ಗಮನಿಸುವ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಈ ರಾಶಿಯ ಮಹಿಳೆಯರು ಗುಣವಂತರು, ರಾಣಿಯಂತೆ ಜೀವಿಸುತ್ತಾರೆ. ಇವರದು ಸುಪ್ತ ಸ್ವಭಾವ. ಹಾಗಾಗಿ ಈ ರಾಶಿಯ ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಮನಸ್ಸಿಗೆ ಹೊಂದಿಕೊಂಡವರಿಗಾಗಿ ವಿಶೇಷ ಗಮನ ಹರಿಸುತ್ತಾರೆ.

ಇನ್ನು ಇವೆಲ್ಲ ಕೂಡ ಜಾತಕ ಫಲದ ಕೆಲ ದಿಕ್ಸೂಚಿಗಳು, ಸಾಮಾನ್ಯವಾಗಿ ಮದುವೆಯಾದವರಲ್ಲಿ ಬೇಕಿರುವುದು ಹೊಂದಾಣಿಕೆಯ ಜೀವನ, ಪ್ರತಿ ಹಂತದಲ್ಲೂ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಒಬ್ಬರ ಮಾತಿಗೆ ಇನ್ನೊಬ್ಬರು ಬೆಲೆ ಕೊಟ್ಟು ಬದುಕುವ ಸಮರಸದ ಬಾಳು. ಹೀಗಾಗಿ ಎಷ್ಟು ವೈಭವದಿಂದ ಮದುವೆಯಾಗುತ್ತಾರೆ ಎನ್ನುವುದು ಮುಖ್ಯವಲ್ಲ ಆದರೆ ಮದುವೆಯಾದವರು ಹೇಗೆ ಬಾಳಿ ಬದುಕಿದರು ಎನ್ನುವುದು ಮುಖ್ಯವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಒಂದು ತಿರುವು, ಈ ತಿರುವು ಒಮ್ಮೊಮ್ಮೆ ಹೊಸ ದಿಶೆಗೆ ಕೊಂಡೊಯುತ್ತದೆ ಹಾಗೆ ಒಮ್ಮೊಮ್ಮೆ ಹಲವರ ಬದುಕಲ್ಲಿ ಹೊಂದಾಣಿಕೆಯ ಕೊರತೆಯಿಂದ ಬಿರುಗಾಳಿ ಎಬ್ಬಿಸುತ್ತದೆ.

Please follow and like us:
error0
http://karnatakatoday.in/wp-content/uploads/2019/10/ZODAIC-RELATION-1024x576.pnghttp://karnatakatoday.in/wp-content/uploads/2019/10/ZODAIC-RELATION-150x104.pngKarnataka Trendingಆರೋಗ್ಯಎಲ್ಲಾ ಸುದ್ದಿಗಳುಪ್ರೇಮ ವಿವಾಹವಾಗಲೀ ಅಥವಾ ಮನೆಯಲ್ಲಿ ನೋಡಿ ಮಾಡಿದ ವಿವಾಹವಾಗಲೀ, ಕೊನೆಗೆ ಬದುಕಿನುದ್ದಕ್ಕೂ ಒಟ್ಟಿಗೆ ಇರುವುದು ಗಂಡ ಹೆಂಡತಿ ಮಾತ್ರ. ಇಷ್ಟವಿಲ್ಲದ ಮನಸ್ಸಿನಿಂದಲೋ ಅಥವಾ ಬಲವಂತವಾಗಿಯೋ ಮದುವೆ ಮಾಡಿಕೊಂಡಾಗ ಜೀವನಪೂರ್ತಿ ಆ ಕೊರಗಿನಿಂದ ಜೀವನ ಮಾಡುವುದು ಬಹಳ ಕಷ್ಟ. ಜೀವನವನ್ನು ಖುಷಿಯಾಗಿ ಕಳೆಯಬೇಕೆಂದರೆ ನಾವು ಪ್ರೀತಿಸುವ ಜೀವ ನಮ್ಮ ಜೊತೆಗಿರಬೇಕು, ಪ್ರತೀ‌ ಕ್ಷಣವೂ ನಮ್ಮ ಕಾಳಜಿ ವಹಿಸಬೇಕು, ಉಸಿರುಗಟ್ಟಿಸುವಷ್ಟು ಪ್ರೀತಿಸಬೇಕು. ಹೌದು ಈಗಿನ ಕಾಲದಲ್ಲಿ ವಿವಾಹ ಎನ್ನುವ ಪವಿತ್ರ ಬಂಧನಕ್ಕೆ...Film | Devotional | Cricket | Health | India