Minister Shivalli

ಸಿಡಿಲಂತೆ ದೊಡೆದ ತಂದೆ ಸಾವು, ತಂದೆಯ ಮುದ್ದಿನ ಮಗಳು, ಅಪ್ಪ ಅಂದರೆ ಪ್ರಾಣಕ್ಕಿಂತ ಹೆಚ್ಚು, ಕಣ್ಣೀರು ಇನ್ನು ನಿಂತಿಲ್ಲ, ರಾತ್ರಿ ಪೂರ್ತಿ ಅಪ್ಪನ ನೆನಪಿನಲ್ಲಿ ಕಣ್ಣು ಮುಚ್ಚಿಲ್ಲ, ಬೆಳಿಗ್ಗೆ ತನ್ನ SSLC ಪರೀಕ್ಷೆ, ಅಪ್ಪ ಹೇಳಿಕೊಟ್ಟ ಆದರ್ಶಗಳನ್ನ ಪಾಲಿಸಬೇಕು, ಇದು ನಿನ್ನೆ ಸಡನ್ ಆಗಿ ಹೃದಯಾಘಾತಕ್ಕೆ ತುತ್ತಾಗಿ ನಿಧನ ಹೊಂದಿದ ಸಚಿವ ಶಿವಳ್ಳಿ ಮಗಳ ಸ್ಥಿತಿ.

ಶಿವಳ್ಳಿ ಅವರ ಎರಡನೆಯ ಮಗಳು ರೂಪ ಅವರು ಹುಬ್ಬಳ್ಳಿಯ ಕೆ ಎಲ್ ಇ ಶಾಲೆಯಲ್ಲಿ SSLC ಓದುತ್ತಿದ್ದು ಇಂದು ಪರೀಕ್ಷೆ ಇದ್ದಿತ್ತು. ತಂದೆ ಮೃತದೇಹ ಮನೆಯ ಮುಂದೆ ಇದ್ದರು ಯುನಿಫಾರ್ಮ್ ಹಾಕಿಕೊಂಡು ಶಾಲೆಗೆ ಬಂದು ಪರೀಕ್ಷೆ ಬರೆಯುವ ಒಂದು ದೊಡ್ಡ ಸವಾಲು ರೂಪಾಳಿಗೆ ಎದುರಾಯಿಯಿತು.

Minister Shivalli

ತಂದೆ ಹೇಳಿಕೊಟ್ಟ ಜೀವನ ಪಾಠ ಮತ್ತು ಆದರ್ಶಗಳನ್ನ ಪಾಲಿಸುವುದೇ ಅವರಿಗೆ ಕೊಡುವ ಗೌರವ ಎಂದು ಭಾವಿಸಿದ ರೂಪ ಇಂದು ಬೆಳಿಗ್ಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಕಣ್ಣೀರು ಹಾಕುತ್ತ ಪರೀಕ್ಷೆ ಬರೆದಿದ್ದಾಳೆ.

ಅಪ್ಪನ ನೆನಪಿನಲ್ಲಿ ಅತ್ತು ಅತ್ತು ಆಕೆಯ ಕಣ್ಣು ಊದಿಕೊಂಡಿತ್ತು, ಪರೀಕ್ಷೆ ಬರೆಯುವಾಗಲೂ ಆಕೆಯ ಕಣ್ಣೀರು ನಿಂತಿಲ್ಲ, ಆದರೆ ಅಪ್ಪನ ಮಾತುಗಳನ್ನ ಪಾಲಿಸುತ್ತೇನೆ ಅನ್ನುವ ಸ್ಥೈರ್ಯ ಆಕೆಯಲ್ಲಿತ್ತು.

ಇಂತಹ ಸಂದರ್ಭದಲ್ಲಿಯೂ ಯಾರೊಬ್ಬರೂ ಪರೀಕ್ಷೆಯ ಬಗ್ಗೆ ತಲೆಯನ್ನ ಕೆಡಿಸಿಕೊಳ್ಳುವುದಿಲ್ಲ ಆದರೆ ಸಚಿವ ಶಿವಳ್ಳಿ ಅವರು ತಮ್ಮ ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಎಷ್ಟು ಘಾಡವಾಗಿ ಹೇಳಿಕೊಟ್ಟಿದ್ದಾರೆ ಅನ್ನುವುದು ಇಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ.

Minister Shivalli

ರೂಪಾಳ ಸ್ಥೈರ್ಯಕ್ಕೆ ನಾವು ಮೆಚ್ಚಲೇಬೇಕು, ಪರೀಕ್ಷೆಯ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾಳೆ ಮಗಳು ರೂಪ, ರೂಪಾಳಿಗೆ ನೋವನ್ನ ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡಬೇಕು.

ಧಾರವಾಡ ಕಟ್ಟಡ ಕುಸಿತ ಕಾರ್ಯಾಚರಣೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದ ಕಾರಣ ಸಚಿವ ಶಿವಳ್ಳಿ ಅವರು ಬಳಲುತ್ತಿದ್ದರು ಅದೇ ಕಾರಣಕ್ಕೆ ಅವರಿಗೆ ಹೃದಯಾಘಾತವಾಗಿ ನಿನ್ನೆ ಮರಣ ಹೊಂದಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ, ಸ್ನೇಹಿತರೆ ಶಿವಳ್ಳಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Minister Shivalli

Please follow and like us:
0
http://karnatakatoday.in/wp-content/uploads/2019/03/MInister-Shivalli-1024x576.jpghttp://karnatakatoday.in/wp-content/uploads/2019/03/MInister-Shivalli-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಸಿಡಿಲಂತೆ ದೊಡೆದ ತಂದೆ ಸಾವು, ತಂದೆಯ ಮುದ್ದಿನ ಮಗಳು, ಅಪ್ಪ ಅಂದರೆ ಪ್ರಾಣಕ್ಕಿಂತ ಹೆಚ್ಚು, ಕಣ್ಣೀರು ಇನ್ನು ನಿಂತಿಲ್ಲ, ರಾತ್ರಿ ಪೂರ್ತಿ ಅಪ್ಪನ ನೆನಪಿನಲ್ಲಿ ಕಣ್ಣು ಮುಚ್ಚಿಲ್ಲ, ಬೆಳಿಗ್ಗೆ ತನ್ನ SSLC ಪರೀಕ್ಷೆ, ಅಪ್ಪ ಹೇಳಿಕೊಟ್ಟ ಆದರ್ಶಗಳನ್ನ ಪಾಲಿಸಬೇಕು, ಇದು ನಿನ್ನೆ ಸಡನ್ ಆಗಿ ಹೃದಯಾಘಾತಕ್ಕೆ ತುತ್ತಾಗಿ ನಿಧನ ಹೊಂದಿದ ಸಚಿವ ಶಿವಳ್ಳಿ ಮಗಳ ಸ್ಥಿತಿ. ಶಿವಳ್ಳಿ ಅವರ ಎರಡನೆಯ ಮಗಳು ರೂಪ ಅವರು ಹುಬ್ಬಳ್ಳಿಯ ಕೆ ಎಲ್ ಇ...Kannada News