ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ನ ಎರಡನೇ ಭಾಗ ಇದೀಗ ಮತ್ತಷ್ಟು ಹೆಚ್ಚು ಸುದ್ದಿ ಮಾಡಿದೆ. ಕೇವಲ 21 ನಿಮಿಷಗಳ ಕಾಲ ಗಡಿ ದಾಟಿ ಹರಡಿದ ನಮ್ಮ ವಿಮಾನಗಳು ಮಡಿದ ದಾಖಲೆ ಏನು ನೋಡಿ ಒಮ್ಮೆ.
1971ರ ಇಂಡೋ-ಪಾಕ್ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಯುದ್ಧ ವಿಮಾನ ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಹಿಂತಿರುಗಿವೆ.  ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಬರೋಬ್ಬರಿ ನಾಲ್ಕು ದಶಕಗಳ ನಂತರ ಭಾರತದ ಗಡಿಯಾಚೆ ರೆಕ್ಕೆ ಬಿಚ್ಚುವ ಅವಕಾಶ ಸಿಕ್ಕಿದೆ. ಇನ್ನು ಕಾರ್ಗಿಲ್ ನಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭ ಆಗಿದ್ದ ಸಂದರ್ಭದಲ್ಲೂ ವಾಯುಪಡೆಗೆ ಗಡಿ ದಾಟುವ ಅವಕಾಶವನ್ನು ಭಾರತ ಸರ್ಕಾರ ನೀಡಿರಲಿಲ್ಲ. ಆದರೆ ಈಗ ಬರೋಬ್ಬರಿ 40 ವರ್ಷಗಳ ಬಳಿಕ ಎಲ್ಒಸಿ ದಾಟಿದ ನಮ್ಮ ಲೋಹದ ಹಕ್ಕಿಗಳ ಪಾಕ್ ಗಡಿಯಲ್ಲಿ ಅವಿತಿದ್ದ ಉಗ್ರರ ನೆಲೆಯನ್ನು ಧ್ವಂಸಗೊಳಿಸಿದೆ.

ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಉಗ್ರ ದಾಳಿ ನಡೆಸಿ 40ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಹತ್ಯೆಗೈದಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಇದೀಗ ಪಾಕಿಸ್ತಾನಕ್ಕೆ ನುಗ್ಗಿ ಹಲವು ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದೆ. ಇತ್ತ ಪಾಕ್ ತಬ್ಬಿಬ್ಬಾಗಿ ಯಾವುದೇ ಹೇಳಿಕೆ ಕೊಡಲು ಕೂಡ ಮುಂದಾಗದೆ ಅಸಹಾಯಕತೆ ಇಂದ ಎಲ್ಲವನ್ನು ನೋಡುತ್ತಿದೆ.

ಪಾಕಿಸ್ತಾನದ ಉಗ್ರರ ಅಡಗುದಾಣಗಳನ್ನು ಭಸ್ಮ ಮಾಡಲು ಭಾರತದ ವಾಯುಪಡೆ ಆಯ್ಕೆ ಮಾಡಿಕೊಂಡಿದ್ದು ಮಿರಾಜ್-2000 ಫೈಟರ್ ಜೆಟ್, ಎಲ್ಲಾ ರೀತಿಯ ವಾತಾವರಣದಲ್ಲೂ ಪ್ರತಿಬಂಧಕ ಸಾಮರ್ಥ್ಯ ಹೊಂದಿರುವ ಮಿರಾಜ್-2000 ಫೈಟರ್ ಜೆಟ್, ಕಾರ್ಗಿಲ್ ಯುದ್ಧದ ವಿಜಯದಲ್ಲೂ ಮಹತ್ವದ ಪಾತ್ರ ವಹಿಸಿತ್ತು. ಥೇಲ್ಸ್ RDY 2 ರೇಡಾರ್ ನ್ನು ಹೊಂದಿರುವ ಮಿರಾಜ್-2000 ಟಾರ್ಗೆಟ್ ನ್ನು ಸ್ವಯಂ ಚಾಲಿತವಾಗಿ ಟ್ರಾಕ್ ಮಾಡುವ ಸಾಮರ್ಥ್ಯ ಹೊಂದಿದೆ.

ಸುಮಾರು 500 ಮೀಟರ್ ಗಳ ರೇಡಿಯಸ್ ವ್ಯಾಪ್ತಿಯಲ್ಲಿ ನಿಖರವಾಗಿ ಲೇಸರ್ ಗೈಡೆಡ್ ಬಾಂಬಿಂಗ್ ಮಾಡಬಹುದಾಗಿದೆ. ಜೊತೆಗೆ ಟಾರ್ಗೆಟ್ ಗಳನ್ನು ಮ್ಯಾಪಿಂಗ್ ಮಾಡುವುದಕ್ಕೆ ಡೋಪ್ಲರ್ ಬೀಮ್-ಶಾರ್ಪೆನಿಂಗ್ ತಂತ್ರಜ್ಞಾನ ಹಾಗೂ ಹಾರಾಟದ ಸಮಯದಲ್ಲಿ ಪ್ರತಿ ಗಂಟೆಗೆ 900 ಕಿಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದ್ದು, ಎಂಬಿಡಿಎ ಅರ್ಮಾತ್ ರಾಡಾರ್ ಕ್ಷಿಪಣಿ ಪ್ರತಿಬಂಧಕ ಸಾಮರ್ಥ್ಯ ಹೊಂದಿರುವ ಕಾರಣಕ್ಕಾಗಿ ಮಿರಾಜ್-2000 ನ್ನು ವೈಮಾನಿಕ ದಾಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

Please follow and like us:
error0
http://karnatakatoday.in/wp-content/uploads/2019/02/indian-force-1024x576.jpghttp://karnatakatoday.in/wp-content/uploads/2019/02/indian-force-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ನ ಎರಡನೇ ಭಾಗ ಇದೀಗ ಮತ್ತಷ್ಟು ಹೆಚ್ಚು ಸುದ್ದಿ ಮಾಡಿದೆ. ಕೇವಲ 21 ನಿಮಿಷಗಳ ಕಾಲ ಗಡಿ ದಾಟಿ ಹರಡಿದ ನಮ್ಮ ವಿಮಾನಗಳು ಮಡಿದ ದಾಖಲೆ ಏನು ನೋಡಿ ಒಮ್ಮೆ. 1971ರ ಇಂಡೋ-ಪಾಕ್ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಯುದ್ಧ ವಿಮಾನ ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ...Film | Devotional | Cricket | Health | India