ಇಂದಿನ ಯುಗದಲ್ಲಿ ಮೊಬೈಲ್ ನಲ್ಲೆ ಎಲ್ಲಾ ಕೆಲಸ ಕಾರ್ಯಗಳನ್ನು ನಂಬಿಕೊಂಡು ಇದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ, ಇನ್ನು ಸಾಮಾನ್ಯ ಜನರಂತೂ ಸ್ಮಾರ್ಟ್ ಫೋನಿನಲ್ಲೇ ಹೆಚ್ಚು ಸಮಯ ಮನರಂಜನೆ ಗಾಗಿ ಕಳೆಯುತ್ತಾರೆ. ಮೊದಲಿನ ಹಾಗೆ ಸುದ್ದಿ ಸಮಾಚಾರಗಳನ್ನು ತಿಳಿಯಲು ಈಗ ಪೇಪರ್, ಟಿವಿ ಇವುಗಳ ಮೊರೆ ಹೋಗಬೇಕೆಂದಿಲ್ಲ ಮತ್ತು ಇಂಟರ್ನೆಟ್ ಮೂಲಕ ಪ್ರತಿಯೊಂದನ್ನು ಮೊಬೈಲ್ ನಲ್ಲೆ ನೋಡಬಹುದು. ಆದರೆ ಈ ಮೊಬೈಲ್ ಇದ್ದವರಿಗೆ ಒಂದು ಅತಿದೊಡ್ಡ ಸಮಸ್ಯೆ ಎಂದರೆ ಫೋನ್ ಚಾರ್ಜ್ ಮಾಡುವುದು ಮತ್ತು ಅದು ದೀರ್ಘ ಕಾಲ ಬರುವಂತೆ ನೋಡಿಕೊಳ್ಳುವುದು. ಹೌದು ಕೆಲವೊಂದು ಸ್ಮಾರ್ಟ್ ಫೋನುಗಳು ಬ್ಯಾಟರಿ ಎಷ್ಟೇ ಉತ್ತಮವಾಗಿದ್ದರೂ ಕೂಡ ಚಾರ್ಜ್ ಮಾತ್ರ ಬೇಗನೆ ಖಾಲಿಯಾಗುತ್ತದೆ ಹಾಗೆ ಪುನಃ ಚಾರ್ಜ್ ಮಾಡಲೂ ಕೂಡ ಹೆಚ್ಚು ಸಮಯ ತಗೆದುಕೊಳ್ಳುತ್ತದೆ.

ಇದೊಂದು ಮೊಬೈಲ್ ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗಿದೆ, ಯಾವುದೊ ದೂರದ ಪ್ರಯಾಣ ಅಥವಾ ಒಂದು ದಿನದ ತುರ್ತು ಪ್ರವಾಸ ಬಂದಾಗ ಮೊಬೈಲ್ ಬ್ಯಾಟರಿ ಸಮಸ್ಯೆ ಹೆಚ್ಚು ಕಾಡುತ್ತದೆ, ಹೀಗಿರುವಾಗ ಸ್ಮಾರ್ಟ್ಫೋನ್ ನಲ್ಲಿ ಚಾರ್ಜ್ ನಿಲ್ಲುವಂತೆ ಹೇಗೆ ಮಾಡುವುದು ಮತ್ತು ಬೇಗನೆ ಚಾರ್ಜ್ ಆಗುವಂತೆ ಮಾಡಲು ಯಾವೆಲ್ಲ ಟ್ರಿಕ್ಸ್ ಇದೆ ಇವುಗಳ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಅಂತರ್ಜಾಲದಲ್ಲಿ ಈ ಬಗ್ಗೆ ಹೆಚ್ಚು ಹುಡುಕಿ ಅವಲೋಕಿಸಿದಾಗ ಕೆಲವೊಂದು ಸೆಟ್ಟಿಂಗ್ ಗಳನ್ನೂ ನೀವು ನಿಮ್ಮ ಮೊಬೈಲ್ ನಲ್ಲಿ ಮಾಡಿಕೊಂಡರೆ ಖಂಡಿತವಾಗಿ ಮೂರು ದಿನಗಳ ಬ್ಯಾಟರಿ ಲೈಫ್ ಕಂಡುಕೊಳ್ಳಬಹುದಾಗಿದೆ, ಹಾಗಿದ್ದರೆ ಆ ಸೆಟ್ಟಿಂಗ್ ಗಳು ಯಾವುದು ಮತ್ತು ಯಾವ ಸಲಹೆಗಳನ್ನು ಪಾಲಿಸಿದರೆ ಒಳ್ಳೆಯದು ಎಂದು ತಿಳಿದುಕೊಳ್ಳಿ.

mobile charging problem

ಮೊದಲ ಆಯ್ಕೆ ಏನೆಂದರೆ ಫೋನಿನಲ್ಲಿ ಲೊಕೇಶನ್ ಸರ್ವಿಸ್ ಅಥವಾ ಜಿಪಿಎಸ್ ಕಡಿಮೆ ಬಳಸಿ ಇದರಿಂದ ಫೋನ್ ಬ್ಯಾಟರಿ ದೀರ್ಘ ಕಾಲ ಬರುತ್ತದೆ ಮತ್ತು ಇದರ ಜೊತೆಗೆ ಫೋನಿನ ಬ್ರೈಟ್ನೆಸ್ ಕೂಡ ಸಾಕಷ್ಟು ಕಮ್ಮಿ ಇಡೀ. ನಿಮ್ಮ ಸಂಪೂರ್ಣ ಮೊಬೈಲ್ ಬ್ಯಾಟರಿಯ ಹೆಚ್ಚು ಭಾಗವನ್ನು ಬಳಸಿಕೊಳ್ಳುವುದೇ ಈ ಡಿಸ್ ಪ್ಲೆ ಆಯ್ಕೆ, ಇದರ ಜೊತೆಗೆ ಯಾವ ಜಾಗದಲ್ಲಿ ನಿಮಗೆ ಸಂಪೂರ್ಣವಾಗಿ ನೆಟ್ವರ್ಕ್ ಸಿಗುತ್ತಿಲ್ಲವೆಂದು ಖಚಿತವಾದಾಗ ತಿಳಿಯಿತೋ ಆಗ ಫೋನನನ್ನು ಫ್ಲೈಟ್ ಮೋಡ್ ಗೆ ಬದಲಾಯಿಸಿ ಇದರಿಂದ ಬ್ಯಾಟರಿ ಸೇವ್ ಆಗತ್ತದೆ, ಇದರ ಜೊತೆಗೆ ಒಮ್ಮೆ ಓಪನ್ ಮಾಡಿದ ಅಪ್ಲಿಕೇಶನ್ ಗಳನ್ನೂ ಸಂಪೂರ್ಣವಾಗಿಯೂ ಕ್ಲೋಸ್ ಮಾಡಿ ಇದರಿಂದ ಹಿಂಬದಿಯಲ್ಲಿ ಚಾರ್ಜ್ ವೆಸ್ಟೇಜ್ ಆಗುವುದು ತಪ್ಪುತ್ತದೆ.

ಇದಲ್ಲದೆ ಯಾವತ್ತೇ ಆಗಲಿ ನಿಮ್ಮ ಫೋನಿನ ಚಾರ್ಜರ್ ಬಿಟ್ಟು ಬೇರೆ ಚಾರ್ಜರ್ ಗಳನ್ನೂ ಯಾವತ್ತೂ ಕೂಡ ಬಳಸಲೇಬೇಡಿ, ಅದು ಯಾವ ಕಂಪೆನಿಯದ್ದೇ ಆಗಿರಲಿ. ಪ್ರತಿ ಫೋನಿಗೂ ಕೂಡ ಅದರದ್ದೇ ಆದ ವೋಲ್ಟೇಜ್ ಹಾಗು ಕರೆಂಟ್ ಬೇಕಿರುತ್ತದೆ, ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡಬೇಡಿ ಇದರಿಂದ ಬ್ಯಾಟರಿ ಬ್ಯಾಕಪ್ ಕ್ರಮೇಣವಾಗಿ ಕ್ಷೀಣಿಸುತ್ತದೆ. ಸ್ನೇಹಿತರೆ ನೀವು ಈ ಎಲ್ಲಾ ವಿಧಾನ ಅನುಸರಿಸಿದರೆ ಹಾಗು ಕಡಿಮೆ ಇಂಟರ್ನೆಟ್ ಸೇವೆಗಳನ್ನು ಬಳಸಿದರೆ ಖಂಡಿತವಾಗಿ ಈಗಿನ ಫೋವುಗಳು 72 ಗಂಟೆಗಳ ಬ್ಯಾಕಪ್ ನೀಡುತ್ತದೆ, ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಮೊಬೈಲ್ ಬಳಕೆದಾರನಿಗೆ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

mobile charging problem

Please follow and like us:
error0
http://karnatakatoday.in/wp-content/uploads/2019/11/Mobile-charging-problem-1024x576.jpghttp://karnatakatoday.in/wp-content/uploads/2019/11/Mobile-charging-problem-150x104.jpgKarnataka Trendingಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಇಂದಿನ ಯುಗದಲ್ಲಿ ಮೊಬೈಲ್ ನಲ್ಲೆ ಎಲ್ಲಾ ಕೆಲಸ ಕಾರ್ಯಗಳನ್ನು ನಂಬಿಕೊಂಡು ಇದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ, ಇನ್ನು ಸಾಮಾನ್ಯ ಜನರಂತೂ ಸ್ಮಾರ್ಟ್ ಫೋನಿನಲ್ಲೇ ಹೆಚ್ಚು ಸಮಯ ಮನರಂಜನೆ ಗಾಗಿ ಕಳೆಯುತ್ತಾರೆ. ಮೊದಲಿನ ಹಾಗೆ ಸುದ್ದಿ ಸಮಾಚಾರಗಳನ್ನು ತಿಳಿಯಲು ಈಗ ಪೇಪರ್, ಟಿವಿ ಇವುಗಳ ಮೊರೆ ಹೋಗಬೇಕೆಂದಿಲ್ಲ ಮತ್ತು ಇಂಟರ್ನೆಟ್ ಮೂಲಕ ಪ್ರತಿಯೊಂದನ್ನು ಮೊಬೈಲ್ ನಲ್ಲೆ ನೋಡಬಹುದು. ಆದರೆ ಈ ಮೊಬೈಲ್ ಇದ್ದವರಿಗೆ ಒಂದು ಅತಿದೊಡ್ಡ ಸಮಸ್ಯೆ ಎಂದರೆ ಫೋನ್...Film | Devotional | Cricket | Health | India