ನಮ್ಮ ಬಳಿ ಹಣ ಇದ್ದರೆ ಅದನ್ನ ಯಾರು ಬೇಕಾದರೂ ಕದ್ದುಕೊಂಡು ಹೋಗಬಹುದು ಆದರೆ ನಮ್ಮ ಬಳಿ ಇರುವ ಬುದ್ದಿವಂತಿಕೆಯನ್ನ ಪ್ರಪಂಚದ ಯಾವ ಶಕ್ತಿಯಿಂದ ಕೂಡ ಕದ್ದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಬುದ್ಧಿಶಕ್ತಿಯಿಂದ ಇಡೀ ಪ್ರಪಂಚವನ್ನ ಆಳಬಹುದು, ತನ್ನ ಬುದ್ದಿಶಕ್ತಿಯಿಯನ್ನ ಬಳಸಿಕೊಂಡ ಈ ಭಾರತದ ಹುಡುಗಿ ಇಡೀ ಪ್ರಪಂಚವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ. ಇನ್ನು ಈಕೆ ಮಾಡಿದ ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಶಾಕ್ ಆಗಿದ್ದು ಈಕೆಯನ್ನ ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೊಡ್ಡ ದೊಡ್ಡ ಕಂಪನಿಗಳು ತುದಿಗಾಲಿನಲ್ಲಿ ನಿಂತಿದೆ. ಸ್ನೇಹಿತರೆ ಭಾರತ ಮೂಲದ ಈ 19 ವರ್ಷದ ಹುಡುಗಿಯ ಹೆಸರು ಇಶಾ ಕಾರೆ, ಕ್ಯಾಲಿಫೋರ್ನಿಯಾದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಈ ಹುಡುಗಿ ಪ್ರಪಂಚವೇ ಶಾಕ್ ಆಗುವಂತಹ ಕೆಲಸವನ್ನ ಮಾಡಿದ್ದಾಳೆ.

ಹಾಗಾದರೆ ಈಕೆ ಮಾಡಿದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಮೊಬೈಲ್ ಅನ್ನುವುದು ಈಗಿನ ಕಾಲದಲ್ಲಿ ನಮ್ಮ ದೇಹದ ಒಂದು ಭಾಗವಾಗಿದೆ, ಏನಾದರು ಬಿಟ್ಟಿರುತ್ತೇವೆ ಆದರೆ ಮೊಬೈಲ್ ಬಿಟ್ಟು ಒಂದು ಕ್ಷಣ ಕೂಡ ನಮ್ಮಿಂದ ಇರಲು ಸಾಧ್ಯವಿಲ್ಲ. ಇಷ್ಟೊಂದು ಮೊಬೈಲ್ ಬಳಕೆ ಮಾಡುವ ನಮಗೆ ಮೊಬೈಲ್ ಚಾರ್ಜ್ ಮಾಡುವಾಗ ತುಂಬಾ ಕಿರಿ ಕಿರಿ ಆಗುತ್ತದೆ ಮತ್ತು ಇದಕ್ಕೆ ಕಾರಣ ನಮ್ಮ ಮೊಬೈಲ್ ಬ್ಯಾಟರಿ ಫುಲ್ ಚಾರ್ಜ್ ಆಗಬೇಕು ಅಂದರೆ ಏನಿಲ್ಲ ಅಂದರು ಎರಡು ಘಂಟೆ ಸಮಯ ಬೇಕು.

super capacitor charging device

ಇನ್ನು ನಾವು ಯಾವುದಾದರೂ ಅರ್ಜೆಂಟ್ ಕೆಲಸಕ್ಕೆ ಹೋಗಬೇಕಾದ ಸಮಯದಲ್ಲಿ ನಮ್ಮ ಮೊಬೈಲ್ ಗೆ ಬೇಗ ಚಾರ್ಜ್ ಆಗಲಿಲ್ಲ ಅಂದರೆ ನಿಮಗೆ ತಲೆಬಿಸಿ ಉಂಟಾಗುತ್ತದೆ, ಇನ್ನು ಈ ಸಮಸ್ಯೆಯನ್ನ ಯಾವಾಗಲೂ ಎದುರಿಸುತ್ತಿದ್ದ ಇಶಾ ಈ ಚಾರ್ಗಿಂಗ್ ಸಮಸ್ಯೆಯಿಂದ ಪಾರಾಗಲು ಒಂದು ಡಿವೈಸ್ ಕಂಡುಹಿಡಿಯಲು ಮುಂದಾದಳು. ಹೌದು ಮೊಬೈಲ್ ಚಾರ್ಜ್ ಗೆ ಹಾಕಿದರೆ ಸೆಕೆಂಡ್ ಗಳಲ್ಲಿ ಚಾರ್ಜ್ ಆಗಬೇಕು ಅನ್ನುವುದು ಇಶಾ ಗುರಿಯಾಗಿತ್ತು, ತನ್ನ ಗುರಿಯ ಬೆನ್ನಟ್ಟಿ ಹಗಲು ರಾತ್ರಿ ಕೆಲಸ ಮಾಡಿದ ಇಶಾ ಕೊನೆಗೂ ತಾನು ಅಂದುಕೊಂಡಿದ್ದನ್ನ ಸಾಧಿಸಿದ್ದಾಳೆ ಮತ್ತು ಸೂಪರ್ ಕ್ಯಪಾಸಿಟರ್ ಅನ್ನುವ ಡಿವೈಸ್ ಕಂಡುಹಿಡಿದ್ದಾಳೆ ಇಶಾ.

ಇನ್ನು ಡಿವೈಸ್ ಮೂಲಕ ಮೊಬೈಲ್ ಕೇವಲ 30 ಸೆಕೆಂಡ್ ನಲ್ಲಿ ಚಾರ್ಜ್ ಮಾಡಬಹುದು, ಇನ್ನು ಈ ಡಿವೈಸ್ ಗಾತ್ರ ಕೂಡ ಬಹಳ ಚಿಕ್ಕದಾಗಿದ್ದು ಇದನ್ನ ಮೊಬೈಲ್ ಒಳಗೆ ಇಡಬಹುದಾಗಿದೆ. ಮೊಬೈಲ್ ಚಾರ್ಜರ್ ಅನ್ನು ಈ ಡಿವೈಸ್ ಗೆ ಕನೆಕ್ಟ್ ಮಾಡಿದರೆ ಸಾಕು 30 ಸೆಕೆಂಡ್ ನಲ್ಲಿ ನಮ್ಮ ಮೊಬೈಲ್ ಫುಲ್ ಚಾರ್ಜ್ ಆಗುತ್ತದೆ, ಇನ್ನು ಈ ಡಿವೈಸ್ ನ ಮಹಿಮೆಯನ್ನ ತೋರಿಸಿದ ಇಷಾಗೆ ಇಂಟರ್ನ್ಯಾಷನಲ್ ಯಂಗ್ ಸೈನ್ಟಿಸ್ಟ್ ಅವಾರ್ಡ್ ಜೊತೆಗೆ 30 ಲಕ್ಷ ಬಹುಮಾನವನ್ನ ಕೂಡ ಗೆದ್ದಿದ್ದಾಳೆ. ಇನ್ನು ಈಕೆಯ ಅನ್ವೇಷಣೆಯನ್ನ ನೋಡಿ ಬೆರಗಾಗಿರುವ ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳು ಓದು ಮುಗಿಸಿದ ನಂತರ ನಮ್ಮ ಕಂಪನಿಗೆ ಬರುವಂತೆ ಆಹ್ವಾನ ಕೊಡುತ್ತಿವೆ.

super capacitor charging device

ಇನ್ನು ಈ ಹುಡುಗಿಗೆ ಒಳ್ಳೆಯ ಸಪೋರ್ಟ್ ಸಿಕ್ಕಿದರೆ ಆದಷ್ಟು ಬೇಗ ಈ ಸೂಪರ್ ಕ್ಯಪಾಸಿಟರ್ ನಮ್ಮ ಕೈ ಸೇರಲಿದೆ, ಏನೇ ಆದರೂ ಯುವಜನತೆಗೆ ಅಮೇರಿಕಾದಲ್ಲಿ ಸಿಗುವ ಪ್ರೋತ್ಸಹ ನಮ್ಮ ಭಾರತದಲ್ಲಿ ಸಿಗುತ್ತಿದ್ದರೆ ಈ ಸಮಯದಲ್ಲಿ ಭಾರತ ನಮ್ಮ ಪ್ರಪಂಚವನ್ನ ಆಳುತ್ತಿತ್ತು, ಆದರೆ ನಮ್ಮಲ್ಲಿ ಪ್ರೋತ್ಸಹ ನೀಡುವವರಿಗಿಂತ ಕಾಲನ್ನ ಎಳೆಯುವವರೇ ಜಾಸ್ತಿ. ಇಡೀ ಪ್ರಪಂಚವೇ ಬೆರಗಾಗುವಂತೆ ಡಿವೈಸ್ ಕಂಡುಹಿಡಿದ ಇಶಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/Super-Capasitor-charging-device-1024x576.jpghttp://karnatakatoday.in/wp-content/uploads/2020/03/Super-Capasitor-charging-device-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ಬಳಿ ಹಣ ಇದ್ದರೆ ಅದನ್ನ ಯಾರು ಬೇಕಾದರೂ ಕದ್ದುಕೊಂಡು ಹೋಗಬಹುದು ಆದರೆ ನಮ್ಮ ಬಳಿ ಇರುವ ಬುದ್ದಿವಂತಿಕೆಯನ್ನ ಪ್ರಪಂಚದ ಯಾವ ಶಕ್ತಿಯಿಂದ ಕೂಡ ಕದ್ದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಬುದ್ಧಿಶಕ್ತಿಯಿಂದ ಇಡೀ ಪ್ರಪಂಚವನ್ನ ಆಳಬಹುದು, ತನ್ನ ಬುದ್ದಿಶಕ್ತಿಯಿಯನ್ನ ಬಳಸಿಕೊಂಡ ಈ ಭಾರತದ ಹುಡುಗಿ ಇಡೀ ಪ್ರಪಂಚವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ. ಇನ್ನು ಈಕೆ ಮಾಡಿದ ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಶಾಕ್ ಆಗಿದ್ದು...Film | Devotional | Cricket | Health | India