Modi and Childrens

1 ರಿಂದ 10 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಕೇಂದ್ರ ಸರ್ಕಾರವು 4 ಹೊಸ ನಿಯಮಗಳನ್ನ ಜಾರಿಗೆ ತಂದಿದೆ ಮತ್ತು ಇದರ ಜೊತೆಗೆ ಖಾಸಗಿ ಶಾಲೆಗಳಿಗೆ ಶಾಕ್ ನೀಡಿದೆ ಕೇಂದ್ರ ಸರ್ಕಾರ. ನಿಮ್ಮ ಮನೆಯಲ್ಲಿ, ನಿಮ್ಮ ಸಂಬಂಧಿಕರಲ್ಲಿ ಅಥವಾ ನಿಮ್ಮ ಗೆಳೆಯರ ಬಳಗದಲ್ಲಿ ಯಾರಾದರೂ ಶಾಲೆಗೆ ಹೋಗುವ ಮಕ್ಕಳಿದ್ದಾರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಖಾಸಗಿ ಶಾಲೆಗಳಲ್ಲಿ ಶುಲ್ಕ ಅಂದರೆ ಫೀಸ್ ಕಟ್ಟದೆ ಇದ್ದರೆ ಪರೀಕ್ಷೆಗಳಿಗೆ ಕೂರಲು ಬಿಡಿವುದಿಲ್ಲ ಮತ್ತು ತರಗತಿಗಳಿಗೆ ಬರಲು ಬಿಡುವುದಿಲ್ಲ, ಇನ್ನು ಇದರ ಕುರಿತು ಚರ್ಚೆ ನೋಡಿದ ಕೇಂದ್ರ ಸರ್ಕಾರವು ಇನ್ನುಮುಂದೆ ಹೀಗೆ ಮಾಡಬಾರದು ಎಂದು ಕಟ್ಟುನಿಟ್ಟಿನ ಆದೇಶವನ್ನ ಹೊರಡಿಸಿದೆ.

Modi and Childrens

ಇನ್ನು ಎಲ್ಲಾ ಸರ್ಕಾರೀ ಶಾಲೆಗಳಿಗೆ ಖಾಸಗಿ ಶಾಲೆಗಳಂತೆ ಶನಿವಾರ ರಜೆ ನೀಡುವ ಆಲೋಚನೆಯನ್ನ ಮಾಡಿದೆ ನಮ್ಮ ಕೇಂದ್ರ ಸರ್ಕಾರ, ಇನ್ನು ಈಗ ಕೇಂದ್ರ ಸರ್ಕಾರವು 1 ರಿಂದ 10 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ಗಳ ತೂಕವನ್ನ ನಿರ್ಧಾರ ಮಾಡಿದೆ ಮತ್ತು ಈ ತೂಕಕ್ಕಿಂತ ಹೆಚ್ಚಿನ ಹೊರೆಯನ್ನ ಮಕ್ಕಳು ತೆಗೆದುಕೊಂಡು ಹೋಗುವಂತಿಲ್ಲ ಅದೂ ಪ್ರೈವೇಟ್ ಅಥವಾ ಸರ್ಕಾರೀ ಶಾಲೆಗಳೇ ಆಗಲಿ.

ಸ್ನೇಹಿತರೆ 1-2 ನೇ ತರಗತಿಯ ಮಕ್ಕಳ ಬ್ಯಾಗ್ ನ ತೂಕ 1.5 ಕೆಜಿ ಗಿಂತ ಕಡಿಮೆ ಇರಬೇಕು, ಇನ್ನು 3-5 ನೇ ತರಗತಿಯ ಮಕ್ಕಳ ಬ್ಯಾಗ್ ತೂಕ 2-3 ಕೆಜಿ ಒಳಗೆ ಇರಬೇಕು.

Modi and Childrens

ಇನ್ನು 6 ಮತ್ತು 7 ನೇ ತರಗತಿ ಮಕ್ಕಳ ಬ್ಯಾಗ್ ತೂಕ 4 ಕೆಜಿ ಇರಬೇಕು, 8 ಮತ್ತು 9 ನೇ ತರಗತಿಯ ಮಕ್ಕಳ ಬ್ಯಾಗ್ ತೂಕ 4.5 ಕೆಜಿ ಮತ್ತು 10 ನೇ ತರಗತಿಯ ಮಕ್ಕಳ ಬ್ಯಾಗ್ ತೂಕ 5 ಕೆಜಿಯ ಒಳಗೆ ಇರಬೇಕು, ಇದಕ್ಕಿಂತ ಹೆಚ್ಚಿನ ತೂಕವನ್ನ ಮಕ್ಕಳು ಹೊರುವಂತಿಲ್ಲ ಮತ್ತು ಮಕ್ಕಳು ಜಾಸ್ತಿ ತೂಕ ಹೊಂದಿರುವ ಬ್ಯಾಗ್ ತೆಗೆದುಕೊಂಡು ಬಂದರೆ ಶಾಲೆ ಮತ್ತು ಅಧ್ಯಾಪಕರ ಮೇಲೆ ಕ್ರಮವನ್ನ ತೆಗೆದುಕೊಳ್ಳಲಾಗುವುದು.

ಇನ್ನು ಇದರ ಜೊತೆಗೆ 1 ಮತ್ತು 2 ನೇ ತರಗತಿಯ ಮಕ್ಕಳಿಗೆ ಯಾವುದೇ ಹೋಂ ವರ್ಕ್ ನೀಡುವ ಹಾಗೆ ಇಲ್ಲ ಮತ್ತು ಉಳಿದ ತರಗತಿಯ ಮಕ್ಕಳಿಗೆ ಎರಡು ವಿಷಯಕ್ಕಿಂತ ಹೆಚ್ಚಿನ ಹೋಂ ವರ್ಕ್ ನೀಡುವ ಹಾಗೆ ಇಲ್ಲ. ಹೋಂ ವರ್ಕ್ ಗಳು ಜಾಸ್ತಿ ಆದರೆ ಬ್ಯಾಗ್ ಗಳ ತೂಕ ಜಾಸ್ತಿ ಆಗುತ್ತದೆ ಮತ್ತು ಬ್ಯಾಗ್ ಗಳ ತೂಕ ಜಾಸ್ತಿ ಆದರೆ ಮಕ್ಕಳ ಬೆನ್ನಿನ ಮೇಲೆ ಭಾರಿ ಒತ್ತಡ ಬೀಳುತ್ತದೆ ಅನ್ನುವ ಕಾರಣದಿಂದ ಈ ನಿಯವನ್ನ ಜಾರಿಗೆ ತರಲಾಗಿದೆ.

Modi and Childrens

Please follow and like us:
0
http://karnatakatoday.in/wp-content/uploads/2019/07/Modi-and-School-childrans-1024x576.jpghttp://karnatakatoday.in/wp-content/uploads/2019/07/Modi-and-School-childrans-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲ1 ರಿಂದ 10 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಕೇಂದ್ರ ಸರ್ಕಾರವು 4 ಹೊಸ ನಿಯಮಗಳನ್ನ ಜಾರಿಗೆ ತಂದಿದೆ ಮತ್ತು ಇದರ ಜೊತೆಗೆ ಖಾಸಗಿ ಶಾಲೆಗಳಿಗೆ ಶಾಕ್ ನೀಡಿದೆ ಕೇಂದ್ರ ಸರ್ಕಾರ. ನಿಮ್ಮ ಮನೆಯಲ್ಲಿ, ನಿಮ್ಮ ಸಂಬಂಧಿಕರಲ್ಲಿ ಅಥವಾ ನಿಮ್ಮ ಗೆಳೆಯರ ಬಳಗದಲ್ಲಿ ಯಾರಾದರೂ ಶಾಲೆಗೆ ಹೋಗುವ ಮಕ್ಕಳಿದ್ದಾರೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಖಾಸಗಿ ಶಾಲೆಗಳಲ್ಲಿ ಶುಲ್ಕ...Kannada News