ಜೀವನ ಸಾಗಿಸಲು ಹಣ ಎಷ್ಟು ಮುಖ್ಯ ಎನ್ನುವುದನ್ನು ನಾವು ತಿಳಿದುಕೊಂಡಿರುತ್ತೇವೆ. ಅದು ಈಗಿನ ಜಗತ್ತಿನಲ್ಲಿ ಹಣವಿಲ್ಲದೆ ಜೀವನ ನಿಭಾಯಿಸುವುದು ಎಷ್ಟು ಕಷ್ಟ ಎನ್ನುವ ವಿಷಯ ನಾವು ಅರಿತಿದ್ದೇವೆ. ಜೀವನದಲ್ಲಿ ಹಣವೇ ಎಲ್ಲವು ಅಲ್ಲ ಆದರೆ ಎಲ್ಲವನ್ನು ಪಡೆಯಲು ಹಣ ಬೇಕೇ ಬೇಕು ಹೀಗೆ ದೈನಂದಿನ ಜೀವನದಲ್ಲಿ ನಮಗೆ ಹಣದ ವಿಚಾರಕಾಗಿ ಅನೇಕ ಅನುಭವಗಳು ಆಗಿರುತ್ತವೆ ಇದೆ ರೀತಿ ಒಮ್ಮೊಮ್ಮೆ ರಸ್ತೆ, ಮಾರ್ಕೆಟ್, ಈ ಕಡೆ ಎಲ್ಲಾ ಹೋಗುವಾಗ ಹಣ ಸಿಕ್ಕಿರುವ ಅನುಭವ ಎಲ್ಲರಿಗು ಆಗಿರುತ್ತದೆ, ಹೌದು ಎಷ್ಟೇ ಬಡವನಿರಲಿ ಅಥವಾ ಶ್ರೀಮಂತನಿರಲಿ ನಡೆದುಕೊಂಡು ಹೋಗುವಾಗ ಹಣ ಸಿಕ್ಕಿತೆಂದರೆ ಆತನ ಸಂತೋಷಕ್ಕೆ ಪಾರವೇ ಇರಲ್ಲ. ಅದೇ ರೀತಿ ಹೀಗೆ ಸಿಗುವ ಹಣದಲ್ಲಿ ಅದೆಷ್ಟು ಸತ್ಯಗಳು ಇವೆ ಎಂದರೆ ನಿಮಗೆ ಗೊತ್ತಿದೆಯಾ ಅದರ ಬಗ್ಗೆ ಹೇಳುತ್ತೇವೆ ಕೇಳಿ.

ಹಣ ಎನ್ನುವುದು ಒಬ್ಬರಿಂದ ಇನ್ನೊಬ್ಬರಿಗೆ ವಿನಿಮಯವಾಗುತ್ತ ಇರುತ್ತದೆ. ರಸ್ತೆಯಲ್ಲಿ ಸಿಕ್ಕ ಹಣವನ್ನು ಕೆಲವರು ಬಡವರಿಗೆ, ಭಿಕ್ಷುಕರಿಗೆ ದಾನ ಮಾಡಿದರೆ ಇನ್ನು ಕೆಲವರು ಅದನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಾರೆ, ಆದರೆ ಇದರ ಇಂದೇ ಸೂಕ್ಷ್ಮ ಸಂಗತಿಯೊಂದು ಅಡಗಿದೆ . ಆದ್ಯಾತ್ಮದ ಪ್ರಕಾರ ನಮಗೆ ಒಂದುವೇಳೆ ರಸ್ತೆ ಬದಿಯಲ್ಲಿ ದುಡ್ಡು ಸಿಕ್ಕಿದ್ದರೆ ಅಂತ ಧನವನ್ನು ಉಪಯೋಗಿಸಲೇಬಾರದು.

ಒಂದು ವೇಳೆ ಹಣವನ್ನು ನೀವು ತಗೆದುಕೊಂಡಿದ್ದರು ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಲೇಬಾರದು ಯಾಕೆಂದರೆ ಆ ಹಣವನ್ನು ಕಳೆದುಕೊಂಡ ವ್ಯಕ್ತಿ ಯಾವ ಪರಿಸ್ಥಿಯಲ್ಲಿ ಇರುತ್ತಾನೆ ಎಂದು ನಮಗೆ ತಿಳಿದಿರುವುದಿಲ್ಲ. ಒಂದು ವೇಳೆ ಹಣ ಕಳೆದುಕೊಂಡ ವ್ಯಕ್ತಿ ಶ್ರೀಮಂತನಾಗಿದ್ದರೆ ಆತ ಸಂತೋಷದಿಂದ ಇದ್ದರೆ ಆತನ ಸಂತೋಷ ಕೂಡ ನಮಗೆ ಒಲಿದು ಬರುತ್ತದೆ.

ಅದೇ ಹಣ ಕಳೆದುಕೊಂಡ ವ್ಯಕ್ತಿ ಬಡವನಾಗಿದ್ದರೆ ಆತನ ದಾರಿದ್ರ್ಯ ಕೂಡ ನಮಗೆ ಒಲಿದು ಬರುತ್ತದೆ ಆದ್ದರಿಂದ ಈ ವಿಚಾರದಲ್ಲಿ ಸ್ವಲ್ಪ ಗಮನವಿಡೀ. ಆದ್ದರಿಂದ ಇನ್ನು ಮುಂದೆ ಇಂತಹ ಧನದ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಮುಂದೆ ಸಾಗಿ ಯಾಕೆಂದರೆ ಕೆಲವೊಮ್ಮೆ ಸಿಕ್ಕ ಹಣದಿಂದ ನಾವು ದಾರಿದ್ರ್ಯತನ ಅನುಭವಿಸಬೇಕಾಗುತ್ತದೆ.

Please follow and like us:
0
http://karnatakatoday.in/wp-content/uploads/2018/10/road-side-money-1024x576.pnghttp://karnatakatoday.in/wp-content/uploads/2018/10/road-side-money-150x104.pngKarnataka Today's Newsಅಂಕಣಆಟೋಹಣಜೀವನ ಸಾಗಿಸಲು ಹಣ ಎಷ್ಟು ಮುಖ್ಯ ಎನ್ನುವುದನ್ನು ನಾವು ತಿಳಿದುಕೊಂಡಿರುತ್ತೇವೆ. ಅದು ಈಗಿನ ಜಗತ್ತಿನಲ್ಲಿ ಹಣವಿಲ್ಲದೆ ಜೀವನ ನಿಭಾಯಿಸುವುದು ಎಷ್ಟು ಕಷ್ಟ ಎನ್ನುವ ವಿಷಯ ನಾವು ಅರಿತಿದ್ದೇವೆ. ಜೀವನದಲ್ಲಿ ಹಣವೇ ಎಲ್ಲವು ಅಲ್ಲ ಆದರೆ ಎಲ್ಲವನ್ನು ಪಡೆಯಲು ಹಣ ಬೇಕೇ ಬೇಕು ಹೀಗೆ ದೈನಂದಿನ ಜೀವನದಲ್ಲಿ ನಮಗೆ ಹಣದ ವಿಚಾರಕಾಗಿ ಅನೇಕ ಅನುಭವಗಳು ಆಗಿರುತ್ತವೆ ಇದೆ ರೀತಿ ಒಮ್ಮೊಮ್ಮೆ ರಸ್ತೆ, ಮಾರ್ಕೆಟ್, ಈ ಕಡೆ ಎಲ್ಲಾ ಹೋಗುವಾಗ ಹಣ...Kannada News