mothilal found stone in panna

ಈತನ ಹೆಸರು ಮೋತಿಲಾಲ್ ಪ್ರಜಾಪತಿ, ಮಧ್ಯಪ್ರದೇಶದ ರಾಜ್ಯದ ಪನ್ನಾದಲ್ಲಿ ವಾಸವಿದ್ದ ಈತ ದಿನ ಕೂಲಿ ಕೆಲಸ ಮಾಡಿ ತನಗಿದ್ದ ದೊಡ್ಡ ಕುಟುಂಬವನ್ನ ಪೋಷಣೆ ಮಾಡುತ್ತಿದ್ದ.

ಬಡತನದಿಂತ ರೋಸಿಹೋಗಿದ್ದ ಮೋತಿಲಾಲ್ ಕಷ್ಟಗಳನ್ನ ನೋಡಿ ಪ್ರತಿ ದಿನ ದೇವರನ್ನ ಬೈಯುತ್ತಿದ್ದ, ಮಧ್ಯಪ್ರದೇಶ ರಾಜ್ಯದ ಪನ್ನಾ ಪ್ರದೇಶ ಹೇಳಿಕೇಳಿ ವಜ್ರದ ಗಣಿಯ ಪ್ರದೇಶ, ಇಲ್ಲಿ ಮೋತಿಲಾಲ್ ಗೆ ಸ್ವಲ್ಪ ಭೂಮಿ ಇತ್ತು.

mothilal found stone in panna

ಸಮಯ ಸಿಕ್ಕಾಗಲೆಲ್ಲ ಆ ಹೊಲಕ್ಕೆ ಹೋಗಿ ಭೂಮಿ ಅಗೆದು ವಜ್ರಕಾಗಿ ಹುಡಕಾಡುತ್ತಿದ್ದ ಆದರೆ ಆತನಿಗೆ 30 ವರ್ಷಗಳಿಂದ ಏನು ಸಿಕ್ಕಿರಲಿಲ್ಲ ಮೋತಿಲಾಲ್ ಗೆ. ಆದರೆ ಈ ಬಾರಿ ಮೋತಿಲಾಲ್ ಗೆ ಅದೃಷ್ಟ ತುಂಬಾ ಚೆನ್ನಾಗಿತ್ತು, ತನ್ನ ಭೂಮಿಗೆ ಹೋಗಿ ಅಗೆಯುತ್ತಿದ್ದ ಮೋತಿಲಾಲ್ ಗೆ 42.59 ಕ್ಯಾರೆಟ್ ನ ವಜ್ರ ಸಿಕ್ಕೇ ಬಿಟ್ಟಿತ್ತು, ಮಧ್ಯಪ್ರದೇಶ ಇತಿಹಾಸದಲ್ಲೇ ದೊರೆತ ಎರಡನೇ ಅತಿ ದೊಡ್ಡ ವಜ್ರ ಮೋತಿಲಾಲ್ ಗೆ ಸಿಕ್ಕಿದೆ.

ವಜ್ರ ಸಿಕ್ಕಿದ ತಕ್ಷಣ ಕುಣಿದು ಕುಪ್ಪಳಿಸಿದ್ದಾರೆ ಮೋತಿಲಾಲ್, ಈಗ ಆ ವಜ್ರವನ್ನ ಜಿಲ್ಲಾಧಿಕಾರಿಗೆ ಕೊಟ್ಟಿದ್ದು, ಸರ್ಕಾರ ಆ ವಜ್ರವನ್ನ ಹರಾಜಿನಲ್ಲಿ ಇಟ್ಟು ಬಂದ ಹಣದಲ್ಲಿ 10% ಟ್ಯಾಕ್ಸ್ ಕಡಿತಗೊಳಿಸಿ ಉಳಿದ ಹಣವನ್ನ ಮೋತಿಲಾಲ್ ಗೆ ಕೊಡಲಾಗುತ್ತದೆ.

mothilal found stone in panna

ಮೋತಿಲಾಲ್ ಗೆ ಸಿಕ್ಕಿರುವ ವಜ್ರ ಏನಿಲ್ಲ ಅಂದರು ಸುಮಾರು 1.5 ಕೋಟಿಯಿಂದ 2 ಕೋಟಿ ಬೆಲೆಬಾಳುತ್ತದೆ ಎಂದು ವಜ್ರದ ವ್ಯಾಪಾರಿಗಳು ಹೇಳಿದ್ದಾರೆ, ಈ ಹಣದಿಂದ ಬಡತನವನ್ನ ತೊಲಗಿಸುತ್ತೇವೆ ಎಂದು ಹೇಳಿದ್ದಾರೆ ಮೋತಿಲಾಲ್.

ಸ್ನೇಹಿತರೆ ನಿಮಗೂ ಕೂಡ ಈ ತರಹದ ವಜ್ರ ಸಿಕ್ಕಿದರೆ ಏನು ಮಾಡುತ್ತೀರಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಮೋತಿಲಾಲ್ ಗೆ ವಿಶ್ ಮಾಡಿ.

mothilal found stone in panna

Please follow and like us:
0
http://karnatakatoday.in/wp-content/uploads/2018/10/motilal-1024x576.jpghttp://karnatakatoday.in/wp-content/uploads/2018/10/motilal-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣಈತನ ಹೆಸರು ಮೋತಿಲಾಲ್ ಪ್ರಜಾಪತಿ, ಮಧ್ಯಪ್ರದೇಶದ ರಾಜ್ಯದ ಪನ್ನಾದಲ್ಲಿ ವಾಸವಿದ್ದ ಈತ ದಿನ ಕೂಲಿ ಕೆಲಸ ಮಾಡಿ ತನಗಿದ್ದ ದೊಡ್ಡ ಕುಟುಂಬವನ್ನ ಪೋಷಣೆ ಮಾಡುತ್ತಿದ್ದ. ಬಡತನದಿಂತ ರೋಸಿಹೋಗಿದ್ದ ಮೋತಿಲಾಲ್ ಕಷ್ಟಗಳನ್ನ ನೋಡಿ ಪ್ರತಿ ದಿನ ದೇವರನ್ನ ಬೈಯುತ್ತಿದ್ದ, ಮಧ್ಯಪ್ರದೇಶ ರಾಜ್ಯದ ಪನ್ನಾ ಪ್ರದೇಶ ಹೇಳಿಕೇಳಿ ವಜ್ರದ ಗಣಿಯ ಪ್ರದೇಶ, ಇಲ್ಲಿ ಮೋತಿಲಾಲ್ ಗೆ ಸ್ವಲ್ಪ ಭೂಮಿ ಇತ್ತು. ಸಮಯ ಸಿಕ್ಕಾಗಲೆಲ್ಲ ಆ ಹೊಲಕ್ಕೆ ಹೋಗಿ ಭೂಮಿ ಅಗೆದು ವಜ್ರಕಾಗಿ ಹುಡಕಾಡುತ್ತಿದ್ದ ಆದರೆ...Kannada News