ಜಗತ್ತಿನಲ್ಲೆ ಆಧ್ಯಾತ್ಮಿಕತೆಗೆ ಪ್ರಸಿದ್ದಿಯಾದ ದೇಶ ನಮ್ಮದು, ನಮ್ಮ ದೇಶದ ಪ್ರತಿಯೊಂದು ಭಾಗವು ಕೂಡ ಅಳಿದು ಹೋದ ನಮ್ಮ ಸಂಸ್ಕ್ರತಿಯ ಬಗ್ಗೆ ಮತ್ತು ಗತವೈಭವ ಸಾರುತ್ತಿದ್ದ ಅಂದಿನ ವೈಭವೋಪೇತ ವಿಷಯಗಳ ಬಗ್ಗೆ ತಿಳಿಸಿ ಹೇಳುತ್ತವೆ. ಆಪಾರ ಕಲೆ ಸಂಸ್ಕ್ರತಿಗಳ ಬೀಡಾದ ಈ ನಾಡಲ್ಲಿ ಅದೆಷ್ಟೋ ಧಾರ್ಮಿಕ ಜಾಗಗಳಿವೆ. ಆ ಜಾಗಗಳಲ್ಲಿ ಪ್ರತಿನಿತ್ಯ ಭಗವಂತನ ಆರಾಧನೆ ನಡೆಯುತ್ತದೆ. ದೇಶದ ಮೂಲೆ ಮೂಲೆಯಲ್ಲೂ ಕೂಡ ಇಂತಹ ಶಕ್ತಿ ಕೇಂದ್ರಗಳಿವೆ, ಇವುಗಳನ್ನು ನೋಡಲು ಕೇವಲ ಭಾರತೀಯರು ಮಾತ್ರವಲ್ಲ ವಿದೇಶಿಯರು ಕೂಡ ಬಿಡುವು ಮಾಡಿಕೊಂಡು ಬರುತ್ತಾರೆ.

ಅಂತಹ ಅದ್ಬುತ ಸ್ಥಳದ ಬಗ್ಗೆ ನಾವಿಂದು ನಿಮಗೆ ತಿಳಿಸಿ ಹೇಳಲಿದ್ದೇವೆ. ಪ್ರಪಂಚವೇ ಬೆರಗಾಗಿ ನೋಡುವ ಈ ಪ್ರದೇಶದಲ್ಲಿ ಇರುವ ಆ ರಾಶ್ಯದ ಬಗ್ಗೆ ಇಂದು ನೀವು ಕೇಳಲೇಬೇಕು. ಆ ಪವಿತ್ರ ಸ್ಥಳ ಬೇರಾವುದೂ ಅಲ್ಲ  ಜಗತ್ತಿನ ಅತೀ ಎತ್ತರದಲ್ಲಿರುವ ಪವಿತ್ರ ಸ್ಥಳ ಕೈಲಾಸ ಪರ್ವತ, ಇದು ಶಿವನ ಆವಾಸಸ್ಥಾನ ಎಂದು ಹಿಂದೂಗಳು ನಂಬಿದ್ದಾರೆ. ಅದರ ತಟದಲ್ಲಿರುವ ಮಾನಸ ಸರೋವರದಲ್ಲಿ ಇಂದಿಗೂ ದೇವಾನುದೇವತೆಗಳು ಸ್ನಾನ ಮಾಡುತ್ತಾರೆಂಬುದು ಆಸ್ತಿಕರ ನಂಬಿಕೆ. ಕೈಲಾಸ ಪರ್ವತ ಹಿಂದೂಗಳಿಗಷ್ಟೇ ಅಲ್ಲದೆ ಬೌದ್ಧ, ಜೈನ, ಬಾನಪೋ ಧರ್ಮೀಯರಿಗೂ ಪವಿತ್ರ ಕ್ಷೇತ್ರ. ಸಿಂಧೂ, ಬ್ರಹ್ಮಪುತ್ರಾ, ಸಟ್ಲೇಜ್, ಗಂಗಾ ಸೇರಿದಂತೆ ಹಲವು ನದಿಗಳ ಉಗಮಸ್ಥಾನವಿದು.

ಕೈಲಾಸ ಪರ್ವತ ಸಮುದ್ರ ಮಟ್ಟದಿಂದ 22,028 ಅಡಿ ಎತ್ತರದಲ್ಲಿದೆ. ಏಷ್ಯಾದ ಮೂರು ಎತ್ತರದ ಪರ್ವತ ಶ್ರೇಣಿಗಳಾದ ಹಿಮಾಲಯ, ಕಾರಾಕೋರಂ ಮತ್ತು ನಾಗಪರ್ವತಗಳ ಮಧ್ಯೆ ಕೈಲಾಸ ಹಿಮಾವೃತವಾಗಿ ಶಂಖಾಕಾರದಲ್ಲಿದೆ. ಇದನ್ನು ‘ಸುಮೇರು’ ಎಂದೂ ಕರೆಯುತ್ತಾರೆ. ಟಿಬೇಟಿಯನ್ನರು ಈ ಪರ್ವತವನ್ನು ‘ಘಾಂಗೆ ರಿಂ ಪೋಚೆ’ (ಹಿಮ ವೈಡೂರ್ಯ) ಎನ್ನುತ್ತಾರೆ. ನಿಜವಾದ ಅರ್ಥದಲ್ಲಿ ನಯನ ಮನೋಹರವಾದ, ವರ್ಣನೆಗೆ ನಿಲುಕದ ಈ ಕೈಲಾಸ-ಮಾನಸ ಸರೋವರಗಳು ಪ್ರಕೃತಿಪ್ರಿಯರನ್ನು ಮತ್ತು ಸಾಹಸಿಗಳನ್ನು ಕೈಬೀಸಿ ಕರೆಯುತ್ತದೆ.

ಈ ಕೈಲಾಸ ಪರ್ವತದ ಬಗ್ಗೆ ಇರುವ ರೋಚಕ ವಿಷಯವೆಂದರೆ ಭೂಮಿಯ ಒಂದು ಬದಿ ಉತ್ತರ ಧ್ರುವ ಮತ್ತು ಇನ್ನೊಂದು ಕಡೆ ದಕ್ಷಿಣ ಧ್ರುವ. ಇವೆರಡರ ಮಧ್ಯದಲ್ಲಿ ಹಿಮಾಲಯ ಮತ್ತು ಹಿಮಾಲಯದ ಮಧ್ಯಭಾಗ ಕೈಲಾಶ್ ಪರ್ವತವಾಗಿದೆ. ವಿಜ್ಞಾನಿಗಳ ಪ್ರಕಾರ, ಇದು ಭೂಮಿಯ ಕೇಂದ್ರವಾಗಿದೆ. ಕೈಲಾಶ್ ಪರ್ವತವು ಹಿಂದೂ, ಜೈನ, ಬೌದ್ಧ ಮತ್ತು ಸಿಖ್‌ನ 4 ಪ್ರಮುಖ ಧರ್ಮಗಳ ಕೇಂದ್ರವಾಗಿದೆ.ಈ ಕೈಲಾಸ ಪರ್ವತವೂ ಒಂದು ರೀತಿಯ ಪಿರಮಿಡ್ ಆಕಾರದಲ್ಲಿದ್ದು ಬಹು ದೊಡ್ಡದಾಗಿ ನಿರ್ಮಿತಗೊಂಡಿದೆ. ಇದರ ಬಳಿ ಬೇರೆ ಯಾವ ಪರ್ವತಗಳು ಇಲ್ಲದ ಜಾಗದಲ್ಲಿ ಏಕಾಂತವಾಗಿ ಇದೆ ಈ ಪವಿತ್ರ ತಾಣ.

ಈ ಎತ್ತರವಾದ ಕೈಲಾಸ ಪರ್ವತವನ್ನು ಇದುವರೆಗೂ ಯಾರು ಕೂಡ ಹತ್ತಿಲ್ಲ ಮತ್ತು ಹತ್ತಲು ಸಾಧ್ಯವಾಗಿಲ್ಲ. ಈ ಕೈಲಾಸ ಪರ್ವತದ ಬಳಿ ಒಮ್ಮೊಮ್ಮೆ ಆಗಸದಲ್ಲಿ ಏಳು ಬಗೆಯ ಬಣ್ಣಗಳು ಮಿಂಚುವುದನ್ನ ಕಾಣಬಹುದಾಗಿದೆ. ನಾಸಾದ ವಿಜ್ಞಾನಿಗಳ ಪ್ರಕಾರ ಇಲ್ಲಿ ಕಾಂತಿಯ ಬಲ ಹೆಚ್ಚಿರುವುದರಿಂದ ಈ ರೀತಿಯ ಪ್ರಕ್ರಿಯೆಗಳು ಕಾಣಸಿಗುತ್ತದೆ ಎಂದಿದ್ದಾರೆ. ಪೂರ್ವದಲ್ಲಿ ಅಶ್ವಮುಖ, ಪಶ್ಚಿಮದಲ್ಲಿ ಆನೆಯ ಮುಖ, ಉತ್ತರದಲ್ಲಿ ಸಿಂಹದ ಮುಖ, ದಕ್ಷಿಣದಲ್ಲಿ ನವಿಲಿನ ಮುಖ ಹೊಂದಿದೆ ಈ ಪರ್ವತ. ಈ ಅಪರೂಪದ ಸಂಗತಿಯನ್ನು ಎಲ್ಲರ ಬಳಿ ಹಂಚಿಕೊಳ್ಳಿ.

Please follow and like us:
error0
http://karnatakatoday.in/wp-content/uploads/2019/10/mount-kailash-1024x576.pnghttp://karnatakatoday.in/wp-content/uploads/2019/10/mount-kailash-150x104.pngKarnataka Trendingಎಲ್ಲಾ ಸುದ್ದಿಗಳುಜಗತ್ತಿನಲ್ಲೆ ಆಧ್ಯಾತ್ಮಿಕತೆಗೆ ಪ್ರಸಿದ್ದಿಯಾದ ದೇಶ ನಮ್ಮದು, ನಮ್ಮ ದೇಶದ ಪ್ರತಿಯೊಂದು ಭಾಗವು ಕೂಡ ಅಳಿದು ಹೋದ ನಮ್ಮ ಸಂಸ್ಕ್ರತಿಯ ಬಗ್ಗೆ ಮತ್ತು ಗತವೈಭವ ಸಾರುತ್ತಿದ್ದ ಅಂದಿನ ವೈಭವೋಪೇತ ವಿಷಯಗಳ ಬಗ್ಗೆ ತಿಳಿಸಿ ಹೇಳುತ್ತವೆ. ಆಪಾರ ಕಲೆ ಸಂಸ್ಕ್ರತಿಗಳ ಬೀಡಾದ ಈ ನಾಡಲ್ಲಿ ಅದೆಷ್ಟೋ ಧಾರ್ಮಿಕ ಜಾಗಗಳಿವೆ. ಆ ಜಾಗಗಳಲ್ಲಿ ಪ್ರತಿನಿತ್ಯ ಭಗವಂತನ ಆರಾಧನೆ ನಡೆಯುತ್ತದೆ. ದೇಶದ ಮೂಲೆ ಮೂಲೆಯಲ್ಲೂ ಕೂಡ ಇಂತಹ ಶಕ್ತಿ ಕೇಂದ್ರಗಳಿವೆ, ಇವುಗಳನ್ನು ನೋಡಲು ಕೇವಲ...Film | Devotional | Cricket | Health | India