ಹೊಸ ವರ್ಷ ಆರಂಭವಾದ ಬಳಿಕ ಇದೀಗ ಬಾಲಿವುಡ್ ನಲ್ಲಿ ಸಿನೆಮಾಗಳ ಪೈಪೋಟಿ ಕೂಡ ಭರದಿಂದ ಸಾಗಿದೆ. ವರ್ಷದ ಮೊದಲ ಹಿಟ್ ಚಿತ್ರ ಯಾರು ಕೊಡುವುತ್ತಾರೆ ಎನ್ನುವ ನಿರೀಕ್ಷೆ ಕೂಡ ಎಲ್ಲರಲ್ಲೂ ಇತ್ತು ಈಗ ಅದರಂತೆ ಈ ವರ್ಷದ ಅರಂಭದಲ್ಲಿ ಬಿಡುಗಡೆಯಾದ ಎರಡು ಮಹಾನ್ ನಿರೀಕ್ಷೆಯ ಚಿತ್ರಗಳು ಈಗಾಗಲೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ. ಬಾಲಿವುಡ್ ಅಜಯ್ ದೇವ್ಗನ್ ಹಾಗು ದೀಪಿಕಾ ಪಡುಕೋಣೆ ನಡುವೆ ವರ್ಷದ ಮೊದಲ ಬಾಲಿವುಡ್ ಫೈಟ್ ಆರಂಭವಾಗಿದೆ, ಹಾಗಿದ್ದರೆ ಚಿತ್ರ ಪ್ರದರ್ಶನವಾದ ಆರು ದಿನಕ್ಕೆ ಕಲೆಕ್ಷನ್ ಎಷ್ಟು ಹಾಗೂ ಜನರ ರಿಯಾಕ್ಷನ್ ಹೇಗಿತ್ತು ಎನ್ನುವುದನ್ನು ತಿಳಿಯೋಣ ಬನ್ನಿ.

ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಅವರ ನೂರನೇ ಚಿತ್ರ ‘ತಾನಾಜಿ-ದಿ ಅನ್ಸಂಗ್ ವಾರಿಯರ್’ ಬಾಕ್ಸ್ ಆಫೀಸ್ ಮೇಲೆ ಈಗಾಗಲೆ ಧೂಳೆಬ್ಬಿಸಿದೆ ಎಂದರೆ ತಪ್ಪಾಗಲ್ಲ. ಇದೀಗ ಬಂದ  ಬಲ್ಲ ಮೂಲಗಳ ಸುದ್ದಿಯ ಪ್ರಕಾರ ಈ ಚಿತ್ರ ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ 100 ಕೋಟಿ ಹಣ ಸಂಪಾದನೆ ಮಾಡಿದೆ, ಈ ಚಿತ್ರದ ಗಳಿಕೆಯ ಅಂಶಗಳನ್ನು ಸಿನೆಮಾ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

News of Bollywood

ಅಷ್ಟೇ ಅಲ್ಲ ತಮ್ಮ ಖಾತೆಯಲ್ಲಿ ಬರೆದುಕೊಂಡಿರುವ ತರಣ್ ಆದರ್ಶ್, “ಅಜಯ್ ದೇವಗನ್ ಅವರ 100 ನೇ ಚಿತ್ರ, 100 ಕೋಟಿ ರೂತಲುಪುವಲ್ಲಿ ಯಶಸ್ವಿಯಾಗಿದೆ, ಬಿಡುಗಡೆಯಾದ ಆರನೇ ದಿನಕ್ಕೆ ಈ ಚಿತ್ರ 100 ಕೋಟಿ ಕ್ಲಬ್ ಗೆ ಎಂಟ್ರಿ ನೀಡಿದೆ” ಎಂದಿದ್ದಾರೆ. ಈ ವರ್ಷ 2020ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ 100 ಕೋಟಿ ರೂ ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ‘ತಾನಾಜಿ’ ಪಾತ್ರವಾಗಿದೆ. ಬರೋಬ್ಬರಿ 150 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನೆಮಾ ಇದೀಗ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸೌಂಡ್ ಮಾಡಿದೆ.

ಇನ್ನು ಹಲವು ವಿವಾದಗಳಿಗೆ ಕಾರಣವಾಗಿದ್ದ ಚಪಾಕ್ ಸಿನೆಮಾದ ಬಗ್ಗೆ ಹೇಳುವುದಾದರೆ ಛಪಾಕ್’ ಚಿತ್ರ ಬಾಕ್ಸ್ ಆಫೀಸ್ ಮೇಲೆ ಆರನೇ ದಿನವೂ ಕೂಡ ನೆಲಕಚ್ಚಿದ್ದು ಐದು ದಿನಗಳಲ್ಲಿ ಒಟ್ಟು 23 ಕೋಟಿ ರೂ ಗಳಿಕೆ ಮಾಡಿದೆ, ಮೊದಲ ವಾರಾಂತ್ಯಕ್ಕೆ ಒಟ್ಟು 26 ಕೋಟಿ ರೂಗಳ ವ್ಯಾಪಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಚಿತ್ರದ ಬಗ್ಗೆ ವಿರೋಧ ಇದ್ದರೂ ಕೂಡ ಚಿತ್ರ ಬಹಳಷ್ಟು ಕಲೆಕ್ಷನ್ ಮಾಡುತ್ತೆ ಎಂದು ಅಂದಾಜಿಸಲಾಗಿತ್ತು. ದೀಪಿಕಾ ಅಭಿನಯದ ಈ ಚಿತ್ರ ತಾನಾಜಿ ಚಿತ್ರಕ್ಕೆ ಹೋಲಿಸಿದರೆ ಪ್ರೇಕ್ಷಕ ಮಹಾಶಯ ಚಿತ್ರಕ್ಕೆ ಯಾವುದೇ ಉತ್ತಮ ಪ್ರತಿಕ್ರಿಯೆ ನೀಡಲೇ ಇಲ್ಲ. ಇನ್ನು ಹಬ್ಬದ ದಿನಗಳ ಲಾಭವನ್ನು ತಾನಾಜಿ ಚಿತ್ರತಂಡ ಹೆಚ್ಚು ಪಡೆದುಕೊಂಡಿದೆ. ಚಿತ್ರದ ಪ್ರತಿಯೊಂದು ಪಾತ್ರದ ಬಗ್ಗೆಯೂ ಜನರ ರಿಯಾಕ್ಷನ್ ಉತ್ತಮವಾಗಿದೆ, ಇನ್ನು ನಟ ಸೈಫ್ ಅಲಿ ಖಾನ್ ಕೂಡ ರೇಸ್ 3 ನಂತರ ಮತ್ತೊಂದು ಹಿಟ್ ಸಿನೆಮಾ ನೀಡಿದ್ದಾರೆ, ಈ ಚಿತ್ರದ ಅಭಿನಯದ ಮೂಲಕ ಸೈಫ್ ಇನ್ನಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

News of Bollywood

 

Please follow and like us:
error0
http://karnatakatoday.in/wp-content/uploads/2020/01/tanaji-and-chapaak-1024x576.jpghttp://karnatakatoday.in/wp-content/uploads/2020/01/tanaji-and-chapaak-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹೊಸ ವರ್ಷ ಆರಂಭವಾದ ಬಳಿಕ ಇದೀಗ ಬಾಲಿವುಡ್ ನಲ್ಲಿ ಸಿನೆಮಾಗಳ ಪೈಪೋಟಿ ಕೂಡ ಭರದಿಂದ ಸಾಗಿದೆ. ವರ್ಷದ ಮೊದಲ ಹಿಟ್ ಚಿತ್ರ ಯಾರು ಕೊಡುವುತ್ತಾರೆ ಎನ್ನುವ ನಿರೀಕ್ಷೆ ಕೂಡ ಎಲ್ಲರಲ್ಲೂ ಇತ್ತು ಈಗ ಅದರಂತೆ ಈ ವರ್ಷದ ಅರಂಭದಲ್ಲಿ ಬಿಡುಗಡೆಯಾದ ಎರಡು ಮಹಾನ್ ನಿರೀಕ್ಷೆಯ ಚಿತ್ರಗಳು ಈಗಾಗಲೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ. ಬಾಲಿವುಡ್ ಅಜಯ್ ದೇವ್ಗನ್ ಹಾಗು ದೀಪಿಕಾ ಪಡುಕೋಣೆ ನಡುವೆ ವರ್ಷದ ಮೊದಲ ಬಾಲಿವುಡ್ ಫೈಟ್ ಆರಂಭವಾಗಿದೆ,...Film | Devotional | Cricket | Health | India