ಐಪಿಎಲ್ ಕಳೆದು ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದೆ ತಿಂಗಳುಗಳೇ ಕಳೆದಿವೆ, ಆದರೆ ಅದಾದ ನಂತರ ಈಗ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಹೌದು ಬಿಸಿಸಿಐ ಇಂದು ನೀಡಿರುವ ಸುದ್ದಿಗೋಷ್ಠಿಯಲ್ಲಿ ಖ್ಯಾತ ಆಟಗಾರನೊಬ್ಬನ ನಿಷೇಧದ ಬಗ್ಗೆ ಸ್ಪಷ್ಟ ಪಡಿಸಿದೆ. ಮುಂಬೈಯ ತಂಡದ ಯುವ ಪ್ರತಿಭೆಗೆ ಈ ಶಿಕ್ಷೆ ನೀಡಲಾಗಿದೆ. ಸಂಪೂರ್ಣ ಘಟನಾ ವಿವರವನ್ನು ನಿಮಗೆ ನೀಡಲಿದ್ದೇವೆ ಕೇಳಿ.

ನಕಲಿ ಜನನ ಪ್ರಮಾಣ ಪತ್ರ ನೀಡಿದ ಆರೋಪದ ಮೇರೆಗೆ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿಗೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ. ಟೀಂ ಇಂಡಿಯಾದ ಅಂಡರ್ 19 ಕ್ರಿಕೆಟ್ ತಂಡದ ಉದಯೋನ್ಮಖ ಆಟಗಾರ ರಸೀಖ್ ಸಲಾಂ ತನ್ನ ಜನನ ಪ್ರಮಾಣ ಪತ್ರವನ್ನೇ ನಕಲು ಮಾಡಿ ಇದೀಗ ಸಿಕ್ಕಿ ಬಿದ್ದಿದ್ದಾರೆ. ಪ್ರಕರಣದಲ್ಲಿ ಅವರ ಅಪರಾಧ ಸಾಬೀತಾಗಿದ್ದು, ಇದೇ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರದ ಆಟಗಾರನಿಗೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ.

ಈ ಬಗ್ಗೆ ಬಿಸಿಸಿಐ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದೆ.2018ರಲ್ಲಿ ಸಲಾಂ ಜಮ್ಮು ಮತ್ತು ಕಾಶ್ಮೀರ ತಂಡದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಬಳಿಕ 2019ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸಲಾಂ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಗಮನ ಸೆಳೆದು ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸಲಾಂ 45 ರನ್ ಗಳಿಸಿ 7 ವಿಕೆಟ್ ಪಡೆದಿದ್ದಾರೆ.

ಇನ್ನು ಈ ಹಿಂದೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಅಂಡರ್ 19 ತ್ರಿಕೋನ ಏಕದಿನ ಸರಣಿಗೆ ಸಲಾಂ ಆಯ್ಕೆಯಾಗಿದ್ದರು. ಆದರೆ ಪ್ರಸ್ತುತ ಬಿಸಿಸಿಐ ನಿಷೇಧ ಹೇರಿರುವದರಿಂದ ಆತನ ಬದಲಿಗೆ ಪ್ರಭಾತ್ ಮೌರ್ಯಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಜುಲೈ 21ರಿಂದ ಇಂಗ್ಲೆಂಡ್ ನಲ್ಲಿ ತ್ರಿಕೋನ ಏಕದಿನ ಸರಣಿ ಆರಂಭವಾಗಲಿದೆ.

ಇನ್ನು ವರ್ಲ್ಡ್ ಕಪ್ ಸುದ್ದಿ ಬಗ್ಗೆ ಗಮನ ಹರಿಸುವುದಾದರೆ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಗಾಯಾಳು ಶಿಖರ್ ಧವನ್ ಸ್ಥಾನವನ್ನು ಉದಯೋನ್ಮುಖ ರಿಷಬ್ ಪಂತ್ ತುಂಬಿಕೊಂಡಿದ್ದಾರೆ. ಇದರೊಂದಿಗೆ 21ರ ಹರೆಯದ ಪಂತ್ ವಿಶ್ವಕಪ್ ಕನಸು ನನಸಾಗಿದೆ. ಈ ಹಂತದಲ್ಲಿ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಶಿಖರ್ ಧವನ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇದೀಗ ನಿಗದಿತ ಅವಧಿಯೊಳಗೆ ಗಾಯ ಗುಣಮುಖರಾಗುವುದು ಅಸಾಧ್ಯವೆನಿಸಿದ್ದರಿಂದ ಧವನ್ ಅನಿವಾರ್ಯವಾಗಿ ತಾಯ್ನಾಡಿಗೆ ಹಿಂತಿರುಗಿದ್ದಾರೆ.

Please follow and like us:
error0
http://karnatakatoday.in/wp-content/uploads/2019/06/mumbai-player-ban-1024x576.jpghttp://karnatakatoday.in/wp-content/uploads/2019/06/mumbai-player-ban-150x104.jpgKarnataka Trendingಎಲ್ಲಾ ಸುದ್ದಿಗಳುಕ್ರಿಕೆಟ್ಐಪಿಎಲ್ ಕಳೆದು ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದೆ ತಿಂಗಳುಗಳೇ ಕಳೆದಿವೆ, ಆದರೆ ಅದಾದ ನಂತರ ಈಗ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಹೌದು ಬಿಸಿಸಿಐ ಇಂದು ನೀಡಿರುವ ಸುದ್ದಿಗೋಷ್ಠಿಯಲ್ಲಿ ಖ್ಯಾತ ಆಟಗಾರನೊಬ್ಬನ ನಿಷೇಧದ ಬಗ್ಗೆ ಸ್ಪಷ್ಟ ಪಡಿಸಿದೆ. ಮುಂಬೈಯ ತಂಡದ ಯುವ ಪ್ರತಿಭೆಗೆ ಈ ಶಿಕ್ಷೆ ನೀಡಲಾಗಿದೆ. ಸಂಪೂರ್ಣ ಘಟನಾ ವಿವರವನ್ನು ನಿಮಗೆ ನೀಡಲಿದ್ದೇವೆ ಕೇಳಿ. ನಕಲಿ ಜನನ ಪ್ರಮಾಣ ಪತ್ರ ನೀಡಿದ ಆರೋಪದ ಮೇರೆಗೆ ಮುಂಬೈ ಇಂಡಿಯನ್ಸ್ ತಂಡದ...Film | Devotional | Cricket | Health | India