ಸ್ನೇಹಿತರೆ ನಮ್ಮ ದೇಶದಲ್ಲಿ ದಸರಾ ಹಬ್ಬವನ್ನ ಬಹಳ ವಿಶೇಷವಾಗಿ ಆಚರಣೆ ಮಾಡುತ್ತಾರೆ ಮತ್ತು ಮೈಸೂರಿನ ದಸರಾ ವಿಶ್ವ ವಿಖ್ಯಾತಿಯನ್ನ ಗಳಿಸಿದೆ, ಇನ್ನು ದಸರಾ ಹಬ್ಬದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದೂ 750 ಕೆಜಿ ತೂಕದ ಚಿನ್ನದ ಅಂಬಾರಿ. ಇನ್ನು ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯನ್ನ ನೋಡಲು ದೇಶದ ಮಾತ್ರವಲ್ಲದೆ ವಿದೇಶದಿಂದ ಕೂಡ ಜನರ ಬರುತ್ತಾರೆ.

ಸಾಮಾನ್ಯವಾಗಿ ಮೈಸೂರು ದಸರಾ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇರುತ್ತದೆ ಆದರೆ ಚಿನ್ನದ ಅಂಬಾರಿಯ ಬಗ್ಗೆ ಹೆಚ್ಚಿನ ಜನರಿಗೆ ಇನ್ನು ತಿಳಿದಿಲ್ಲ, ಹಾಗಾದರೆ ಮೊದಲ ಭಾರಿಗೆ ಈ ಚಿನ್ನದ ಅಂಬಾರಿ ಹುಟ್ಟಿದ್ದು ಎಲ್ಲಿ ಮತ್ತು ಈ ಚಿನ್ನದ ಅಂಬಾರಿಯನ್ನ ಯಾರು ತಯಾರು ಮಾಡಿದರು ಹಾಗೆ ಚಿನ್ನದ ಅಂಬಾರಿ ಎಲ್ಲೆಲ್ಲ ಓಡಾಡಿ ಇಲ್ಲಿಗೆ ಬಂದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಅಂಬಾರಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಅಂಬಾರಿಯ ನಂಟು ಕೇವಲ ಮೈಸೂರಿನಿಂದ ಮಾತ್ರ ಆರಂಭ ಆಗುವುದಿಲ್ಲ, ಹೌದು ಮೈಸೂರು ಅಂಬಾರಿಯ ನಂಟು ಕೊಪ್ಪಳದ ಕುಮ್ಮಟ ದುರ್ಗಕ್ಕೂ ಇದೆ.

Mysore Dasara

ಅಂಬಾರಿಯು 14 ಶತಮಾನದಲ್ಲಿ ಕಂಪಿಲರಾಯನ ಆಡಳಿತದ ಸಮಯದಲ್ಲಿ ಕುಮ್ಮಟ ದುರ್ಗದಲ್ಲಿ ಇತ್ತು ಎಂದು ಇತಿಹಾಸ ವರದಿಯನ್ನ ಮಾಡಿದೆ, ಇನ್ನು ಮಹಾರಾಷ್ಟ್ರದ ದೇವಗಿರಿಯಲ್ಲಿ ಈ ರತ್ನಖಚಿತ ಇತ್ತಂತೆ ಮತ್ತು ದೇವಗಿರಿ ನಾಶವಾದ ಬಳಿಕ ಇದನ್ನ ದೇವಗಿರಿಯ ರಾಜ ಗೊಮ್ಮಡಿಸಿಂಗ ನಾಯಕನಿಗೆ ಹಸ್ತಾಂತರ ಮಾಡುತ್ತಾನೆ ಮತ್ತು ಈ ಅಂಬಾರಿಯನ್ನ ಕಾಪಾಡುವ ಜವಾಬ್ದಾರಿ ನಿನ್ನದು ಎಂದು ಗೊಮ್ಮಡಿಸಿಂಗನಿಗೆ ಆಜ್ಞೆಯನ್ನ ಮಾಡುತ್ತಾನೆ. ಇನ್ನು ಗೊಮ್ಮಡಿಸಿಂಗ ನಾಯಕ ಇದನ್ನ ಬಳ್ಳಾರಿ ಬಳಿಯ ರಾಮದುರ್ಗ ಕೋಟೆಯಲ್ಲಿ ಇಟ್ಟು ಬಚ್ಚಿಟ್ಟಿರುತ್ತಾನೆ ಇನ್ನು ಇದಾದ ನಂತರ 1327 ರಲ್ಲಿ ದೆಹಲಿ ಸುಲ್ತಾನರ ದಾಳಿಗೆ ಕಂಪಿಲ ರಾಜ್ಯ ನಾಶವಾಗುತ್ತದೆ, ಇನ್ನು ಈ ಸಮಯದಲ್ಲಿ ಬಂಡಾರ ಸಂರಕ್ಷಣೆ ಮಾಡುತ್ತಿದ್ದ ಅಕ್ಕ ಬುಕ್ಕಾ ಸಹೋದರರು ಚಿನ್ನದ ಅಂಬಾರಿಯನ್ನ ಹುತ್ತ ಒಂದರಲ್ಲಿ ಮುಚ್ಚಿಟ್ಟು ಹೋಗುತ್ತಾರೆ.

ಇನ್ನು ಇದಾದ ನಂತರ 1336 ರಲ್ಲಿ ದೆಹಲಿ ಸುಲ್ತಾನರ ನಾಶದ ನಂತರ ಪುನಃ ರಾಜ್ಯ ಅಕ್ಕ ಬುಕ್ಕರು ಮುಂದಾಗುತ್ತಾರೆ ಮತ್ತು ಆನೆಗುಂದಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನ ಸ್ಥಾಪನೆ ಮಾಡಲಾಗುತ್ತದೆ ಮತ್ತು ಹಂಪೆಯನ್ನ ವಿಜಯನಗರ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡುತ್ತಾರೆ ಹಾಗೆ ಚಿನ್ನದ ಅಂಬಾರಿಯನ್ನ ಹಂಪೆಗೆ ತರಲಾಗುತ್ತದೆ. ಇನ್ನು ವಿಜಯನಗರ ಸಾಮ್ರಾಜ್ಯದ ನಾಶದ ನಂತರ ಈ ಅಂಬಾರಿಯನ್ನ ಸಂರಕ್ಷಣೆ ಮಾಡುವ ಉದ್ದೇಶದಿಂದ ಅಂಬಾರಿಯನ್ನ ಆಂಧ್ರ ಪ್ರದೇಶದ ಬೆನುಗುಂದಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

ಇನ್ನು ಕೆಲವು ವರ್ಷಗಳ ನಂತರ ಶ್ರೀರಂಗಪಟ್ಟಣ ಮತ್ತು ಕೊನೆಯದಾಗಿ ಮೈಸೂರಿಗೆ ಬಂದು ಸೇರುತ್ತದೆ ಈ ಚಿನ್ನದ ಅಂಬಾರಿ. ಹೀಗೆ ಎಲ್ಲಾ ಕಡೆ ಓಡಾಡಿದ 750 ಕೆಜಿ ತೂಕದ ಈ ಚಿನ್ನದ ಅಂಬಾರಿ ಕೊನೆಗೆ ಮೈಸೂರಿಗೆ ಬಂದು ಅದರಲ್ಲಿ ತಾಯಿ ಚಾಮುಂಡೇಶ್ವರಿಯ ಜಂಬೂ ಸವರಿ ಉತ್ಸವ ನೆರವೇರುವುದರ ಮೂಲಕ ಅಂಬಾರಿ ಸಾರ್ಥಕತೆಯನ್ನ ಹೊಂದುತ್ತದೆ.

Mysore Dasara

Please follow and like us:
error0
http://karnatakatoday.in/wp-content/uploads/2019/10/Mysore-Dasara-1024x576.jpghttp://karnatakatoday.in/wp-content/uploads/2019/10/Mysore-Dasara-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ನಮ್ಮ ದೇಶದಲ್ಲಿ ದಸರಾ ಹಬ್ಬವನ್ನ ಬಹಳ ವಿಶೇಷವಾಗಿ ಆಚರಣೆ ಮಾಡುತ್ತಾರೆ ಮತ್ತು ಮೈಸೂರಿನ ದಸರಾ ವಿಶ್ವ ವಿಖ್ಯಾತಿಯನ್ನ ಗಳಿಸಿದೆ, ಇನ್ನು ದಸರಾ ಹಬ್ಬದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆ ಅಂದರೆ ಅದೂ 750 ಕೆಜಿ ತೂಕದ ಚಿನ್ನದ ಅಂಬಾರಿ. ಇನ್ನು ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯನ್ನ ನೋಡಲು ದೇಶದ ಮಾತ್ರವಲ್ಲದೆ ವಿದೇಶದಿಂದ ಕೂಡ ಜನರ ಬರುತ್ತಾರೆ. ಸಾಮಾನ್ಯವಾಗಿ ಮೈಸೂರು ದಸರಾ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ...Film | Devotional | Cricket | Health | India