ಉತ್ತಮ ಆರೋಗ್ಯಕ್ಕೆ ನಮ್ಮ ದೇಹವೇ ಕೆಲವೊಮ್ಮೆ ನಮಗೆ ಹಲವಾರು ರೀತಿಯ ಮುನ್ಸೂಚನೆಗಳನ್ನು ನೀಡುತ್ತದೆ ಹೌದು ದೇಹದಲ್ಲಿ ಆಗುವ ಏರುಪೇರುಗಳಿಗೆ ನಮ್ಮ ಶರೀರದ ಅಂಗಗಳು ವಿವಿಧ ರೀತಿಯಲ್ಲಿ ನಮಗೆ ಮಾಹಿತಿ ನೀಡುತ್ತವೆ. ಇದನ್ನು ತಿಳಿದುಕೊಂಡು ನಾವು ಸ್ವಲ್ಪ ಎಚ್ಚರ ವಹಿಸಿದರೆ ಉತ್ತಮ ಅರೋಗ್ಯ ನಮ್ಮದಾಗುತ್ತದೆ. ಹಾಗಿದ್ದರೆ ಉಗುರಿನಲ್ಲಿರುವ ಅರ್ಧ ಚಂದ್ರ ಆಕ್ರತಿಯು ನಮ್ಮ ಆರೋಗ್ಯದ ಬೆಲೆ ಯಾವ ರೀತಿ ಪರಿಣಾಮ ಬೀಳುತ್ತದೆ ಗೊತ್ತಿದೆಯಾ ಅದರ ಬಗ್ಗೆ ಹೇಳುತ್ತೀವಿ ಸರಿಯಾಗಿ ಕೇಳಿ. ದೊಡ್ಡದಾಗಿ ಚಂದ್ರಾಕಾರದ ಮಚ್ಚೆ ಇದ್ದರೆ, ಆರೋಗ್ಯ ತುಂಬಾ ಚೆನ್ನಾಗಿದೆ ಎಂದರ್ಥ. ಚಂದ್ರ ಚಿಕ್ಕದಾಗಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆ ಎಂದರ್ಥ. ಇವರಿಗೆ ಪಚನ ಕ್ರಿಯೆ ನಿಧಾನವಾಗಿರುತ್ತದೆ.

ಚಂದ್ರಾಕಾರದ ಮಚ್ಚೆ ಇಲ್ಲದಿದ್ದರೆ, ಥೈರಾಯಿಡ್ ಗ್ರಂಥಿಗಳು ದುರ್ಬಲವಾಗಿದ್ದು, ದಪ್ಪ ಆಗುವುದು ಮತ್ತು ಕೂದಲು ಉದುರೋದು ಹೆಚ್ಚುತ್ತದೆ. ಇರುವ 10 ಬೆರಳುಗಳಲ್ಲಿ ಕನಿಷ್ಠ 8 ಉಗುರಿಗೆ ಚಂದ್ರದ ಗುರುತಿರಬೇಕು ಇಲ್ಲವಾದರೆ ವಿಟಮಿನ್ ಎ ಮತ್ತು ಅಗತ್ಯ ಪೌಷ್ಟಿಕಾಂಶಗಳ ಕೊರತೆ ಇದೆ ಎಂದರ್ಥ.

ಬಿಳಿ ಮಚ್ಚೆ ಒಂದು ಬಾರಿ ಕಾಣಿಸಿದರೆ ಮತ್ತೊಂದು ಬಾರಿ ಮಾಯವಾಗುತ್ತದೆ. ಇಂಥ ಸಮಸ್ಯೆ ಹೊಂದಿರುವವರು ದೇಹ ಕೇಳುವಷ್ಟು ಆಹಾರ ಸೇವಿಸುತ್ತಿಲ್ಲವೆಂದು ಪರಿಗಣಿಸಬೇಕು. ಉಗುರು ಅರಿಷಿಣ ಬಣ್ಣಕ್ಕೆ ತಿರುಗಿದರೆ, ಲಿವರ್ ಸಮಸ್ಯೆ ಇದೆ ಎನ್ನಬಹುದು. ಇದು ಕಾಮಾಲೆ ರೋಗದ ಲಕ್ಷಣವೂ ಆಗಿರಬಹುದು. ಉಗುರು ಬಿಳುಚಿಕೊಂಡಿದ್ದರೆ, ರಕ್ತ ಕಡಿಮೆ ಇದೆ ಎಂದರ್ಥ. ಇವರು ಹೃದಯ ಬಡಿತವೂ ಕಡಿಮೆ ಇರುತ್ತದೆ.

ಹಿಮೊಗ್ಲೋಬಿನ್ ಸಹ ಹೆಚ್ಚಾಗುವಂತೆ ನೋಡಿಕೊಳ್ಳುವುದು ಒಳ್ಳೆಯದು. ಕಪ್ಪು ಕಲೆ ಇದ್ದರೆ ಅವರಿಗೆ ಚರ್ಮ ಕ್ಯಾನ್ಸರ್ ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಉಗುರುಗಳನ್ನು ಇಂದಿಗೂ ನಿರ್ಲಕ್ಷ ಮಾಡಬೇಡಿ. ಯಾವುದೇ ರೀತಿಯ ಸಂದೇಶ ಕಂಡು ಬಂದರೂ ಕೂಡ ವೈದ್ಯರ ಬಳಿ ತೋರಿಸಿ ಅನುಮಾನ ಬಗೆ ಹರಿಸಿಕೊಳ್ಳಿ. ಉತ್ತಮ ಅರೋಗ್ಯ ನಿಮ್ಮದಾಗಲಿ ಮತ್ತು ನಿಮ್ಮವರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ, ಅರೋಗ್ಯ ಕಾಪಾಡಿರಿ.

Please follow and like us:
0
http://karnatakatoday.in/wp-content/uploads/2018/11/nail-secrets-1024x576.jpghttp://karnatakatoday.in/wp-content/uploads/2018/11/nail-secrets-150x104.jpgKarnataka Today's Newsಅಂಕಣಆರೋಗ್ಯಉತ್ತಮ ಆರೋಗ್ಯಕ್ಕೆ ನಮ್ಮ ದೇಹವೇ ಕೆಲವೊಮ್ಮೆ ನಮಗೆ ಹಲವಾರು ರೀತಿಯ ಮುನ್ಸೂಚನೆಗಳನ್ನು ನೀಡುತ್ತದೆ ಹೌದು ದೇಹದಲ್ಲಿ ಆಗುವ ಏರುಪೇರುಗಳಿಗೆ ನಮ್ಮ ಶರೀರದ ಅಂಗಗಳು ವಿವಿಧ ರೀತಿಯಲ್ಲಿ ನಮಗೆ ಮಾಹಿತಿ ನೀಡುತ್ತವೆ. ಇದನ್ನು ತಿಳಿದುಕೊಂಡು ನಾವು ಸ್ವಲ್ಪ ಎಚ್ಚರ ವಹಿಸಿದರೆ ಉತ್ತಮ ಅರೋಗ್ಯ ನಮ್ಮದಾಗುತ್ತದೆ. ಹಾಗಿದ್ದರೆ ಉಗುರಿನಲ್ಲಿರುವ ಅರ್ಧ ಚಂದ್ರ ಆಕ್ರತಿಯು ನಮ್ಮ ಆರೋಗ್ಯದ ಬೆಲೆ ಯಾವ ರೀತಿ ಪರಿಣಾಮ ಬೀಳುತ್ತದೆ ಗೊತ್ತಿದೆಯಾ ಅದರ ಬಗ್ಗೆ ಹೇಳುತ್ತೀವಿ ಸರಿಯಾಗಿ ಕೇಳಿ....Kannada News