vikram

ಬಹುಕೋಟಿ ಭಾರತೀಯರ ಕನಸು ಚಂದ್ರಯಾನ 2 ಇನ್ನೇನು ಚಂದ್ರನ ಮೇಲ್ಮೈ ಸ್ಪರ್ಶಿಸುತ್ತದೆ ಎನ್ನುವಷ್ಟರಲ್ಲಿ ಎಲ್ಲವು ನುಚ್ಚು ನೂರಾಗಿತ್ತು, ಹೌದು ಚಂದ್ರನ ಮೇಲೆ ಇಳಿಯುವ ಲ್ಯಾಂಡಿಂಗ್ ವಾಹನ ತನ್ನ ಸಂಪರ್ಕವನ್ನು ಕಳೆದುಕೊಂಡು ಬಿಟ್ಟಿತ್ತು. ಇವೆಲ್ಲದರ ನಡುವೆ ಇಸ್ರೋ ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡ ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲೇ ಇರಲಿಲ್ಲ. ಇತ್ತ ಪ್ರತಿಯೊಬ್ಬ ಭಾರತೀಯನು ಕೂಡ ವಿಕ್ರಮ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ನೆಲ ಸ್ಪರ್ಶಿಸಲಿ ಎಂದು ಬೇಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಭಾರತದ ಈ ಮಿಷನ್ ಬಹಳಷ್ಟು ಶ್ಲಾಘಿಸಲಾಗಿತ್ತು, ಏಕೆಂದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಹಸವನ್ನು ಪ್ರಪಂಚದ ಬೇರೆ ಯಾವ ದೇಶವು ಕೂಡ ಮಾಡಿರಲಿಲ್ಲ ಆದರೆ ಭಾರತ ಈ ವಿಷಯದಲ್ಲಿ ಮೊದಲ ಪ್ರಯತ್ನದಲ್ಲೇ ಬಹುತೇಕ ಯಶಸ್ಸು ಸಾಧಿಸಿತ್ತು.

ಆದರೆ ಲ್ಯಾಂಡರ್ ಇಳಿದಿದೆಯೋ ಇಲ್ಲವೋ ಎನ್ನುವುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಈಗಲೂ ಕೂಡ ಇಸ್ರೋ ಗೆ ವಿಕ್ರಮ ಲ್ಯಾಂಡರ್ ಹಾರ್ಡ್ ಆಗಿ ಲ್ಯಾಂಡಿಂಗ್ ಮಾಡಿಲ್ಲ ಎನ್ನುತ್ತಿದೆ, ಆದರೆ ಇದಕ್ಕಿನ್ನು ಸರಿಯಾದ ಸಾಕ್ಷಿ ಮಾತ್ರ ದೊರೆತಿಲ್ಲ. ಇಸ್ರೋದ ಈ ಅದ್ಬುತ ಕಾರ್ಯವನ್ನು ಮೆಚ್ಚಿದ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಭೇಷ್ ಎಂದಿತ್ತು. ಚಂದ್ರಯಾನ್ -2 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಇಸ್ರೋ ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ.

ನೀವು ನಮಗೆ ಸ್ಫೂರ್ತಿ ನೀಡಿದ್ದೀರಿ ಮತ್ತು ಭವಿಷ್ಯದಲ್ಲಿ ನಾವು ಸೌರಮಂಡಲವನ್ನು ಅನ್ವೇಷಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ, ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಸದ್ಯಕ್ಕೆ ಇದೆ ನಾಸಾ ಈಗ ವಿಕ್ರಮ ಲ್ಯಾಂಡರ್ ಅನ್ನು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನ ಭಾರತದ ಜೊತೆ ಸೇರಿ ಮಾಡುತ್ತಿದೆ. ಪಟ್ಟು ಬಿಡದ ಇಸ್ರೋ ಅಧ್ಯಕ್ಷ ಶಿವನ್ ಲ್ಯಾಂಡರ್ ‘ವಿಕ್ರಮ್’ ನೊಂದಿಗೆ ಯಾವುದೇ ಸಂಪರ್ಕವನ್ನು ಸ್ಥಾಪಿಸಲಾಗಿಲ್ಲವಾದರೂ ಚಂದ್ರಯಾನ್ -2 ರ ಆರ್ಬಿಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಿವನ್ ಹೇಳುತ್ತಾರೆ.

ಲ್ಯಾಂಡರ್‌ನೊಂದಿಗಿನ ಅವಾಂತರಗಳನ್ನು ಕಂಡುಹಿಡಿಯಲು ರಾಷ್ಟ್ರೀಯ ಮಟ್ಟದ ಸಮಿತಿಯು ವಿಶ್ಲೇಷಣೆ ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ವರದಿಯನ್ನು ಸ್ವೀಕರಿಸಿದ ನಂತರವೇ, ಬಾಹ್ಯಾಕಾಶ ಸಂಸ್ಥೆ ತನ್ನ ಯೋಜನೆಯನ್ನು ಮುಂದಕ್ಕೆ ಪ್ರಾರಂಭಿಸುತ್ತದೆ ಎಂದಿದ್ದಾರೆ. ಇನ್ನು ಹಲವು ಮೂಲಗಳ ಪ್ರಕಾರ ನಾಸಾ ಇದೀಗ ಚಂದ್ರನ ಮೇಲ್ಮೈನ ಫೋಟೋಗಳನ್ನು ಕ್ಲಿಕ್ ಮಾಡುತ್ತಿದೆ, ಅದು ಕಳಿಸಿರುವ ಫೋಟೋಗಳಲ್ಲಿ ಎಲ್ಲಿಯೂ ಕೂಡ ವಿಕ್ರಮನ ಪತ್ತೆಯಾಗಿಲ್ಲ.

ಮೂಲಗಳ ಪ್ರಕಾರ ಇಂದು ಅಂದರೆ ಈ ಶನಿವಾರ ವಿಕ್ರಮನ ಪಾಲಿಗೆ ಮಹತ್ವದ ದಿನವಾಗಲಿದೆ, ಏಕೆಂದರೆ ಇಸ್ರೋ ಲ್ಯಾಂಡರ್ ವಿಕ್ರಮ್ ಅವರ ಸಾಫ್ಟ್ ಲ್ಯಾಂಡಿಂಗ್ ಸುದ್ದಿ ನಮಗೆ ಸಿಗದಿದ್ದರೂ, ಈಗ ನಾಸಾ ಕೂಡ ಈ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಸಹಾಯ ಮಾಡುತ್ತಿದೆ, ಇದಕ್ಕಾಗಿ ಅದು ಆರ್ಬಿಟರ್ ಅನ್ನು ಕಳುಹಿಸಿದೆ, ಅದರ ಸಹಾಯದಿಂದ ಕೆಲವು ಚಿತ್ರಗಳನ್ನು ನಾಸಾ ಬಹಿರಂಗಪಡಿಸಿದೆ. ಈ ಚಿತ್ರಗಳು ಬಹಳ ಮಸುಕಾಗಿದೆ ಏಕೆಂದರೆ ಚಂದ್ರನಲ್ಲಿ ಈಗ ನಿಧಾನವಾಗಿ ಕತ್ತಲು ಆವರಿಸುತ್ತಿದೆ ಹೀಗಾಗಿ ನಾಸಾದ ಆರ್ಬಿಟರ್ ತಗೆಯುವ ಫೋಟೋಗಳಲ್ಲಿ ವಿಕ್ರಮನನ್ನು ಹುಡುಕುವುದು ಅಸಾಧ್ಯ. ಇಷ್ಟೇ ಅಲ್ಲದೆ ಈ ಶನಿವಾರ ಕಳೆದರೆ ಮುಂದೆ ಚಂದ್ರನ ಬಳಿ ಒಳ್ಳೆಯ ಬೆಳಕು ಬರುವ ದಿನ ಎಂದರೆ ಅದು ಅಕ್ಟೊಬರ್ ನಂತರವೇ ಅಂತೇ , ಹೀಗಾಗಿ ಚಂದ್ರಯಾನದ ಬಗ್ಗೆ ಒಳ್ಳೆಯ ಸುದ್ದಿಯನ್ನು ನಾವು ಇಂದೇ ಕೇಳಬೇಕಾಗಿದೆ.

Please follow and like us:
error0
http://karnatakatoday.in/wp-content/uploads/2019/09/vikram-lander-news-1024x576.jpghttp://karnatakatoday.in/wp-content/uploads/2019/09/vikram-lander-news-150x104.jpgKarnataka Trendingಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ಬಹುಕೋಟಿ ಭಾರತೀಯರ ಕನಸು ಚಂದ್ರಯಾನ 2 ಇನ್ನೇನು ಚಂದ್ರನ ಮೇಲ್ಮೈ ಸ್ಪರ್ಶಿಸುತ್ತದೆ ಎನ್ನುವಷ್ಟರಲ್ಲಿ ಎಲ್ಲವು ನುಚ್ಚು ನೂರಾಗಿತ್ತು, ಹೌದು ಚಂದ್ರನ ಮೇಲೆ ಇಳಿಯುವ ಲ್ಯಾಂಡಿಂಗ್ ವಾಹನ ತನ್ನ ಸಂಪರ್ಕವನ್ನು ಕಳೆದುಕೊಂಡು ಬಿಟ್ಟಿತ್ತು. ಇವೆಲ್ಲದರ ನಡುವೆ ಇಸ್ರೋ ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡ ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲೇ ಇರಲಿಲ್ಲ. ಇತ್ತ ಪ್ರತಿಯೊಬ್ಬ ಭಾರತೀಯನು ಕೂಡ ವಿಕ್ರಮ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ನೆಲ ಸ್ಪರ್ಶಿಸಲಿ ಎಂದು ಬೇಡಿಕೊಂಡಿದ್ದರು. ಸಾಮಾಜಿಕ...Film | Devotional | Cricket | Health | India