ಸ್ನೇಹಿತರೆ ಇಂದು ನವರಾತ್ರಿಯ ಕೊನೆಯ ದಿನ ಮತ್ತು ಆಯುಧ ಪೂಜೆ, ಸ್ನೇಹಿತರೆ ಇಂದು ನೀವು ಗೋಮೂತ್ರದಿಂದ ಈ ಚಿಕ್ಕ ಕೆಲಸವನ್ನ ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆ, ಕುಟುಂಬದಲ್ಲಿ ಇರುವ ಸಮಸ್ಯೆ ಮತ್ತು ವ್ಯಾಪಾರ ವ್ಯವಹಾರದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ ಹಾಗೆ ಅರ್ಧನಾರೇಶ್ವರನ ಆಶೀರ್ವಾದ ನಿಮಗೆ ಸಿಗಲಿದೆ. ಹಾಗಾದರೆ ಗೋಮೂತ್ರದಿಂದ ನೀವು ಮಾಡಬೇಕಾದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಚಿಕ್ಕ ಕೆಲಸವನ್ನ ಮಾಡಿ ಅರ್ಧನಾರೇಶ್ವರನ ಸಂಪೂರ್ಣ ಆಶೀರ್ವಾದವನ್ನ ತೆಗೆದುಕೊಳ್ಳಿ.

ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವ ಸಮಸ್ಯೆಗಳಾದ ನಿರುದ್ಯೋಗ, ಹಣಕಾಸಿನ ಸಮಸ್ಯೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ವ್ಯಾಪಾರದಲ್ಲಿ ಅಭಿವೃದ್ಧಿ ಕಾಣದೆ ಇರುವುದು ಹೀಗೆ ಇಂತಹ ಎಲ್ಲಾ ಸಮಸ್ಯೆಗಳಿಗೂ ಕೂಡ ಗೋವಿನ ಮೂತ್ರದಿಂದ ಈ ಚಿಕ್ಕ ಕೆಲಸವನ್ನ ಮಾಡುವುದರ ಮೂಲಕ ನಿವಾರಣೆ ಮಾಡಿಕೊಳ್ಳಬಹುದು. ಸ್ನೇಹಿತರೆ ನೀವು ಇಂದು ತಲೆಸ್ನಾನವನ್ನ ಮಾಡಿ ನಂತರ ಗೋಮೂತ್ರವನ್ನ ಒಂದು ಲೋಟದಲ್ಲಿ ತೆಗೆದುಕೊಂಡು ಅದಕ್ಕೆ ನೀರನ್ನ ಮಿಶ್ರಣ ಮಾಡಬೇಕು ಮತ್ತು ಈ ಮಿಶ್ರಣದ ನೀರನ್ನ ಮನೆಯ ಎಲ್ಲಾ ಮೂಲೆಗೂ ಸಿಂಪಡಿಸಬೇಕು.

Navaratri Go pooja

ಸ್ನೇಹಿತರೆ ಹೀಗೆ ಗೋಮೂತ್ರವನ್ನ ಮನೆಯ ಎಲ್ಲಾ ಭಾಗಗಳಿಗೆ ಸಿಂಪಡಿಸುವುದರಿಂದ ನಿಮ್ಮ ಮನೆಯಲ್ಲಿ ಇರುವ ಕೌಟುಂಬಿಕ ಕಲಹಗಳು ಮತ್ತು ಮನೆಯಲ್ಲಿ ಇರುವ ಎಲ್ಲಾ ನಗೆಟಿವ್ ಎನೆರ್ಜಿ ಗಳು ನಿಮ್ಮ ಮನೆಯಿಂದ ಹೊರಹೋಗುತ್ತದೆ. ಸ್ನೇಹಿತರೆ ಲಕ್ಷ್ಮಿ ದೇವಿಗೆ ಅರಿಸಿನ ತುಂಬಾ ಇಷ್ಟವಾದದ್ದು, ಈ ಕಾರಣದಿಂದ ಗೋಮೂತ್ರಕ್ಕೆ ಸ್ವಲ್ಪ ಅರಿಶಿಣವನ್ನ ಮಿಶ್ರಣ ಮಾಡಿ ಮನೆಗೆ ಪ್ರೋಕ್ಷಣೆ ಮಾಡಬೇಕು, ಇನ್ನು ನವರಾತ್ರಿಯ ಕೊನೆಯ ದಿನವಾದ ಇಂದು ಹೀಗೆ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ಮತ್ತು ನೀವು ಮಾಡುವ ವ್ಯಾಪಾರ ಮತ್ತು ವ್ಯಹಾರಗಳಲ್ಲಿನ ಸಮಸ್ಯೆಗಳು ಬಹುಬೇಗನೇ ನಿವಾರಣೆ ಆಗಲಿದೆ ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯ ಪಂಡಿತರು.

ಇನ್ನು ಇಂದಿನ ದಿನ ನೀವು ಗಂಗಾಜಲವನ್ನ ತೆಗೆದುಕೊಂಡು ಬಂದು ಅದರಿಂದ ದೇವರ ಮೂರ್ತಿ ಅಥವಾ ಫೋಟೋಗಳನ್ನ ತೊಳೆಯಬೇಕು ಮತ್ತು ಮನೆಯಲ್ಲಿ ಆ ನೀರನ್ನ ಸಿಂಪಡಿಸಿ ಮನೆಯನ್ನ ಸ್ವಚ್ಛ ಮಾಡಿದರೆ ನಿಮ್ಮ ಮನೆಯ ಮೇಲೆ ಬಿದ್ದಿರುವ ಎಲ್ಲಾ ಕೆಟ್ಟ ಕಣ್ಣುಗಳು ನಿವಾರಣೆ ಆಗಲಿದೆ. ಇನ್ನು ಸಂಜೆ ಅಥವಾ ಮದ್ಯಾಹ್ನದ ಸಮಯದಲ್ಲಿ ಗೋವಿಗೆ ಆಹಾರವನ್ನ ಬಾಳೆಯ ಎಳೆಯಲ್ಲಿ ನೀಡಬೇಕು ಮತ್ತು ಬವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಧನಸಹಾಯ ಅಥವಾ ಅವರಿಗೆ ಆಹಾರಗಳನ್ನ ನೀಡಬೇಕು, ಹೀಗೆ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ. ಇನ್ನು ಈ ದಿನ ನಿಮ್ಮ ಮನೆ ದೇವರಿಗೆ ಹಣ್ಣು ಕಾಯಿಯನ್ನ ಅರ್ಪಿಸಿ ಪೂಜೆ ಮಾಡಿಸುವುದರಿಂದ ಮನೆಯಲ್ಲಿ ಇರುವ ಸಮಸ್ಯೆಗಳು ದೂರವಾಗಿ ಮುಂದಿನ ದಿನಗಳನ್ನ ನೀವು ಬಹಳ ಸಂತೋಷಮಯವಾಗಿ ಕಳೆಯಲಿದ್ದೀರಿ.

Navaratri Go pooja

Please follow and like us:
error0
http://karnatakatoday.in/wp-content/uploads/2019/10/Navaratri-Go-Pooja-1024x576.jpghttp://karnatakatoday.in/wp-content/uploads/2019/10/Navaratri-Go-Pooja-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಇಂದು ನವರಾತ್ರಿಯ ಕೊನೆಯ ದಿನ ಮತ್ತು ಆಯುಧ ಪೂಜೆ, ಸ್ನೇಹಿತರೆ ಇಂದು ನೀವು ಗೋಮೂತ್ರದಿಂದ ಈ ಚಿಕ್ಕ ಕೆಲಸವನ್ನ ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆ, ಕುಟುಂಬದಲ್ಲಿ ಇರುವ ಸಮಸ್ಯೆ ಮತ್ತು ವ್ಯಾಪಾರ ವ್ಯವಹಾರದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ ಹಾಗೆ ಅರ್ಧನಾರೇಶ್ವರನ ಆಶೀರ್ವಾದ ನಿಮಗೆ ಸಿಗಲಿದೆ. ಹಾಗಾದರೆ ಗೋಮೂತ್ರದಿಂದ ನೀವು ಮಾಡಬೇಕಾದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ...Film | Devotional | Cricket | Health | India