ಹಬ್ಬಗಳ ಆಚರಣೆ ಪುರಾಣಗಳಿಂದ ಬಂದಿದ್ದರೂ ದೇವಿ ಆರಾಧನೆ ವೇದಗಳ ಕಾಲದಿಂದಲೂ ರೂಢಿಯಲ್ಲಿತ್ತು. ಋಗ್ವೇದದ ಕಾಲದಲ್ಲಿ ದೈವಿಕ ಸಾಧನೆಗಾಗಿ ಶಕ್ತಿಯನ್ನು ದೇವಿ ಸೂಕ್ತ, ಈಶಾ ಸೂಕ್ತದ ಮೂಲಕ ಪೂಜಿಸುತ್ತಿದ್ದರು. ಮಹಾಭಾರತದಲ್ಲಿ ಪಾಂಡವ-ಕೌರವರ ನಡುವೆ ಧರ್ಮ ಯುದ್ಧ ನಡೆಯುವ ಮುನ್ನ, ದಶಾವತಾರಗಳಲ್ಲಿ ಒಂದು ಅವತಾರವಾದ ಕೃಷ್ಣಾವತಾರದಲ್ಲಿ ಪರಮಾತ್ಮನು ಕೂಡ ಶಕ್ತಿ ಸ್ವರೂಪಿ ದುರ್ಗಾ ದೇವಿಯ ಪೂಜೆ ಮಾಡಿ ಯುದ್ಧಕ್ಕೆ ಮುಂದಾದರೆಂಬ ಕಥೆಯಿದೆ. ಚತುರ್ಮುಖ ಬ್ರಹ್ಮನು ಋಷಿ ಮಾರ್ಕಾಂಡೇಯನಿಗೆ ಪುರಾಣವನ್ನು ಹೇಳುವಾಗ ಹೇಗೆ ನವ ದುರ್ಗೆಯರು ಸೃಷ್ಟಿಯಾದರು ಎಂಬುದನ್ನು ವಿವರಿಸಿದ್ದಾನೆ.

ಪುರಾಣದ ಪ್ರಕಾರ ಆದಿ ಶಕ್ತಿಯ ಮೊದಲ ಅವತಾರ ಶೈಲಪುತ್ರಿ, ನಂತರ ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಶ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ, ಕೊನೆಯದಾಗಿ ಸಿದ್ಧಿಧಾತ್ರಿ. ಈ ಒಂಭತ್ತು ಅವತಾರಗಳನ್ನು ನವದುರ್ಗೆಯರೆಂದು ಪೂಜಿಸುತ್ತೇವೆ. ಶಿವಪುರಾಣದ ರುದ್ರಸಂಹಿತೆಯ ಐದನೇ ಅಧ್ಯಾಯ ಕೂಡ ದುರ್ಗಾದೇವಿಯ ಅವತಾರಗಳು ಮತ್ತು ಶಕ್ತಿಯನ್ನು ವರ್ಣಿಸಿದೆ. ನವರಾತ್ರಿಯ ದಿನಗಳಲ್ಲಿ ತಾಯಿಯನ್ನು ಹಾಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥ ನೆರವೇರುತ್ತದೆ.

ಅಲ್ಲದೆ ಈ ನವರಾತ್ರಿಯ ಅಂತ್ಯದಲ್ಲಿ ಈ ರಾಶಿಯವರು ಅಪಾರ ಹಣವಂತರಾಗಲಿದ್ದಾರೆ ಆದ್ದರಿಂದ ಅವರ ಫಲಾಫಲ ಹೇಗಿದೆ ತಿಳಿಯೋಣ. ಮಿಥುನ ರಾಶಿಗೆ ಈ ನವರಾತ್ರಿ ಬಹಳ ಲಾಭ ತರಲಿದೆ ಸಂಬಂಧಗಳು ಗಟ್ಟಿಗೊಂಡು ಕಷ್ಟಗಳು ದೂರವಾಗಲಿದೆ. ಸಿಂಹ ರಾಶಿಗೆ ಕೂಡ ಈ ಬಾರಿ ಸಂಪೂರ್ಣ ತಾಯಿಯ ಆಶೀರ್ವಾದ ಇದೆ.

ನವರಾತ್ರಿ ಸಮಯದಲ್ಲಿ ನೀವು ಕೈಗೂಳ್ಳುವ ಎಲ್ಲ ಕಾರ್ಯದ ಮೇಲೂ ದೇವತಾ ಅನುಗ್ರಹ ಇರುತ್ತದೆ. ಇನ್ನು ರಾಜಯೋಗ ಬಂದಷ್ಟು ಅದ್ರಷ್ಟ ತುಲಾ ರಾಶಿಗಿದೆ. ಹೊಸ ಕೆಲಸ ಕೈಗೊಳ್ಳಲು ಸರಿಯಾದ ಸಮಯ ಅರೋಗ್ಯ ಸುಧಾರಿಸಲಿದೆ.ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸಗಳು ಕನ್ಯಾ ರಾಶಿಗೆ ಈಡೇರಲಿದೆ. ಕುಂಭದವರಿಗೆ ಧಿಡೀರ್ ಧನಲಾಭವಿದೆ. ಸಮಾಜದಲ್ಲಿ ನಿಮಗೆ ಗೌರವಯುತ ಸ್ಥಾನ ದೊರೆಯಲಿದೆ. ಮಾಹಿತಿ ಇಷ್ಟ ಆಗಿದ್ದರೆ ಹಂಚಿಕೊಳ್ಳಿ.

Please follow and like us:
0
http://karnatakatoday.in/wp-content/uploads/2018/09/NAVARATRI-1024x576.pnghttp://karnatakatoday.in/wp-content/uploads/2018/09/NAVARATRI-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಹಬ್ಬಗಳ ಆಚರಣೆ ಪುರಾಣಗಳಿಂದ ಬಂದಿದ್ದರೂ ದೇವಿ ಆರಾಧನೆ ವೇದಗಳ ಕಾಲದಿಂದಲೂ ರೂಢಿಯಲ್ಲಿತ್ತು. ಋಗ್ವೇದದ ಕಾಲದಲ್ಲಿ ದೈವಿಕ ಸಾಧನೆಗಾಗಿ ಶಕ್ತಿಯನ್ನು ದೇವಿ ಸೂಕ್ತ, ಈಶಾ ಸೂಕ್ತದ ಮೂಲಕ ಪೂಜಿಸುತ್ತಿದ್ದರು. ಮಹಾಭಾರತದಲ್ಲಿ ಪಾಂಡವ-ಕೌರವರ ನಡುವೆ ಧರ್ಮ ಯುದ್ಧ ನಡೆಯುವ ಮುನ್ನ, ದಶಾವತಾರಗಳಲ್ಲಿ ಒಂದು ಅವತಾರವಾದ ಕೃಷ್ಣಾವತಾರದಲ್ಲಿ ಪರಮಾತ್ಮನು ಕೂಡ ಶಕ್ತಿ ಸ್ವರೂಪಿ ದುರ್ಗಾ ದೇವಿಯ ಪೂಜೆ ಮಾಡಿ ಯುದ್ಧಕ್ಕೆ ಮುಂದಾದರೆಂಬ ಕಥೆಯಿದೆ. ಚತುರ್ಮುಖ ಬ್ರಹ್ಮನು ಋಷಿ ಮಾರ್ಕಾಂಡೇಯನಿಗೆ ಪುರಾಣವನ್ನು ಹೇಳುವಾಗ ಹೇಗೆ...Kannada News