ಸಮಾಜದಲ್ಲಿ ಅಪರಾಧಗಳನ್ನ ಮಾಡಿ ಕಾನೂನಿನ ಪ್ರಕಾರ ಅಪರಾಧಿಯಾಗಿ ಜೈಲು ಸೇರಿದ ಖೈದಿಗಳು ಇದೀಗ ಆಂಧ್ರ ಪ್ರದೇಶದ ನೆಲ್ಲೂರ್ ಜೈಲಿನಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ. ಹೌದು ಕಾನೂನಿನ ಪ್ರಕಾರ ಇವರು ಅಪರಾಧಿಗಳಾದರೂ ಜೈಲಿನ ಒಳಗೆ ಇದ್ದುಕೊಂಡೇ ಈಗ ಹೊರಗಿನ ಸಮಾಜಕ್ಕೆ ಮಾದರಿಯಾಗಿದ್ದಾರೆ.

ನೆಲ್ಲೂರು ಜಿಲ್ಲೆಯ ವಿಶಾಲವಾದ 45 ಎಕರೆ ಜೈಲಿನ ಜಾಗವನ್ನು ಇದೀಗ ಖೈದಿಗಳ ನೆರವಿನಿಂದ ಕೃಷಿ ಭೂಮಿಯನ್ನಾಗಿ ಮಾಡಿಸಿದ್ದಾರೆ. ಹೌದು ವಿಚಿತ್ರ ಎಂದರು ಸತ್ಯ.

ಜೈಲಿನ ಅಧಿಕಾರಿಗಳು ನಡೆಸಿದ ಈ ಪ್ರಯೋಗ ಇದೀಗ ಯಶಸ್ಸಿನ ಹಾದಿ ಹಿಡಿದಿದೆ, ಸೆರೆಮನೆಯಲ್ಲಿರುವ ಕೈದಿಗಳನ್ನು ಅವರ ಕಲೆಯನ್ನ ಗುರುತಿಸಿ, ಆಯ್ಕೆ ಮಾಡಿ ಜೈಲಿನ ವಿಶಾಲ ಜಾಗದ ವ್ಯಾಪ್ತಿಯಲ್ಲೇ ಸಹಕಾರಿ ಬ್ಯಾಂಕುಗಳಿಂದ ಲೋನ್ ಮಾಡಿಸಿಕೊಟ್ಟು 10 ಎಮ್ಮೆ, 25 ಹೈಬ್ರಿಡ್ ಆಕಳು ಮತ್ತು 89 ಕುರಿಗಳ ಪಾಲನೆ ಮಾಡುವುದರ ಮೂಲಕ ಆರಂಭವಾದ ಈ ಕೃಷಿ ಇದೀಗ ಹಾಲು ಉತ್ಪನ್ನ ಮತ್ತು ಇನ್ನಿತರ ಬೆಳೆಗಳನ್ನು ಬೆಳೆಯುವುದರ ಮೂಲಕ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ.

ಬ್ಯಾಂಕಿನ ಸಾಲವನ್ನು ತೀರಿಸಿ ಮತ್ತೆ ಕೃಷಿ ಆರಂಭಿಸಿ ವಿವಿಧ ಬಗೆಯ ಔಷದಿಯ ಗುಣವುಳ್ಳ ಸಸ್ಯಗಳನ್ನು ಹಾಗು ಉತ್ತಮ ಕಂಪನಿಗಳಿಗೆ ಮಾರ್ಕೆಟ್ ಸ್ರಷ್ಟಿಸಿದ್ದಾರೆ.

ಜೈಲಿನಲ್ಲಿ ಇದ್ದ 450 ಕ್ಕೂ ಹೆಚ್ಚು ಖೈದಿಗಳ ಕೃಷಿ ಪ್ರತಿಭೆ ಗುರುತಿಸಿ ಅವರ ಕಲೆಗೆ ಪ್ರೋತ್ಸಾಹ ನೀಡಿ ಜೈಲಿನ ಅಧಿಕಾರಿಗಳು ಕೈದಿಗಳಿಗೆ ಬದುಕನ್ನು ರೂಪಿಸಿದ್ದಾರೆ. ಇಲ್ಲಿ ಉತ್ಪನ್ನವಾಗುವ ಆಹಾರಗಳು ಬೆಳೆಗಳು, ಮತ್ತ್ತು ಹಾಲಿನ ಉತ್ಪನ್ನಗಳು ಸ್ವಲ್ಪಮಟ್ಟಿಗೆ ಜೈಲಿನ ಎಲ್ಲಾ ಅಧಿಕಾರಿಗಳು ಮತ್ತು ಕೈದಿಗಳ ದಿನನಿತ್ಯದ ಬಳಕೆಗೆ ಉಪಯೋಗವಾದರೆ ಇನ್ನು ಉಳಿದದ್ದು ಹೊರಗಿನ ಮಾರ್ಕೆಟ್ ಗೆ ರಫ್ತಾಗುತ್ತದೆ.

ಕುರಿ ಮತ್ತು ಆಕಳು ಸಾಕಾಣಿಕೆಯಿಂದ ಬರುವ ಅಪಾರ ಪ್ರಮಾಣದ ಹಾಲು ಡೈರಿಗೆ ನೀಡಲಾಗುತ್ತದೆ. ಇಷ್ಟೇ ಅಲ್ಲದೆ ಜೈಲಿನ ಇನ್ನುಳಿದ ಎಲ್ಲಾ ಭಾಗವನ್ನು ಕೃಷಿ ಭೂಮಿಯನ್ನಾಗಿ ಮಾಡಿ ಆದಾಯ ಸ್ರಷ್ಟಿ ಮಾಡುವ ಯೋಜನೆ ಹೊಂದಿದ್ದಾರೆ.

ದುಡಿದು ಬರುವ ಖೈದಿಗಳ ರೂಮಿನಲ್ಲಿ ಎಸಿ, ಫ್ರಿಡ್ಜ್ ಟಿವಿ ಮುಂತಾದ ಸೇವೆ ನೀಡಲಾಗಿದೆ. ಅಧಿಕಾರಿಗಳ ಈ ಹೊಸ ಕ್ರಮ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಅನಿಸಿಕೆ ತಿಳಿಸಿ ಮತ್ತು ಹಂಚಿಕೊಳ್ಳಿ.

nellore andhra jail

Please follow and like us:
0
http://karnatakatoday.in/wp-content/uploads/2018/10/jail-india-1024x576.jpghttp://karnatakatoday.in/wp-content/uploads/2018/10/jail-india-150x104.jpgeditorಅಂಕಣಎಲ್ಲಾ ಸುದ್ದಿಗಳುಸುದ್ದಿಜಾಲಸಮಾಜದಲ್ಲಿ ಅಪರಾಧಗಳನ್ನ ಮಾಡಿ ಕಾನೂನಿನ ಪ್ರಕಾರ ಅಪರಾಧಿಯಾಗಿ ಜೈಲು ಸೇರಿದ ಖೈದಿಗಳು ಇದೀಗ ಆಂಧ್ರ ಪ್ರದೇಶದ ನೆಲ್ಲೂರ್ ಜೈಲಿನಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ. ಹೌದು ಕಾನೂನಿನ ಪ್ರಕಾರ ಇವರು ಅಪರಾಧಿಗಳಾದರೂ ಜೈಲಿನ ಒಳಗೆ ಇದ್ದುಕೊಂಡೇ ಈಗ ಹೊರಗಿನ ಸಮಾಜಕ್ಕೆ ಮಾದರಿಯಾಗಿದ್ದಾರೆ. ನೆಲ್ಲೂರು ಜಿಲ್ಲೆಯ ವಿಶಾಲವಾದ 45 ಎಕರೆ ಜೈಲಿನ ಜಾಗವನ್ನು ಇದೀಗ ಖೈದಿಗಳ ನೆರವಿನಿಂದ ಕೃಷಿ ಭೂಮಿಯನ್ನಾಗಿ ಮಾಡಿಸಿದ್ದಾರೆ. ಹೌದು ವಿಚಿತ್ರ ಎಂದರು ಸತ್ಯ. ಜೈಲಿನ ಅಧಿಕಾರಿಗಳು ನಡೆಸಿದ ಈ ಪ್ರಯೋಗ...Kannada News