Netravati Bridge

ಸಿದ್ದಾರ್ಥ್ ಅವರ ಸಾವಿನ ಕಹಿ ನೆನಪುಗಳು ಮಾಸುವ ಮುನ್ನವೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ನೇತ್ರಾವತಿ ನದಿಯ ಆ ಸ್ಥಳಕ್ಕೆ ಬಂದ ಒಬ್ಬ ಚಿಕ್ಕಮಗಳೂರಿನ ವ್ಯಕ್ತಿ ನೇತ್ರಾವತಿ ನದಿಗೆ ಹಾರಿದ್ದಾನೆ.

ಹಾಗಾದರೆ ಆ ವ್ಯಕ್ತಿ ಯಾರು ಮತ್ತು ನಂತರ ಅಲ್ಲಿ ನಡೆದ ಆಶ್ಚರ್ಯಕರ ಘಟನೆ ಏನು ಅನ್ನುವುದರ ಬಗ್ಗೆ ನಿಮಗೆ ನಾವು ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Netravati Bridge

ಮಂಗಳೂರು ಮತ್ತು ಉಳ್ಳಾಲ ನಡುವೆ ಇರುವ ನೇತ್ರಾವತಿ ಸೇತುವೆಯನ್ನ ಸಿದ್ದಾರ್ಥ್ ಅವರ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ, ಇನ್ನು ಈ ಸ್ಥಳಕ್ಕೆ ಬಂದ ವ್ಯಕ್ತಿ ನೇತ್ರಾವತಿ ನದಿಗೆ ಬಿದ್ದಿದ್ದಾನೆ, ಇನ್ನು ಆತನ ಹೆಸರು ಗಿರೀಶ್ ಎಂದು ತಿಳಿದು ಬಂದಿದೆ, ಇನ್ನು ಆತ ಚಿಕ್ಕಮಗಳೂರಿನ ಕಡೂರಿನವರು.

ಇನ್ನು ಮಂಗಳೂರಿನ ಉರ್ವ ಸ್ಟೋರ್ ನಲ್ಲಿ ಈತ ಕೆಲಸವನ್ನ ಮಾಡುತ್ತಿದ್ದಾನೆ ಮತ್ತು ಈತನ ಪತ್ನಿ ನಗರದ ಕೋರ್ಟ್ ನಲ್ಲಿ ಉದ್ಯೋಗವನ್ನ ಮಾಡುತ್ತಿದ್ದಾರೆ. ಇನ್ನು ಮಂಗಳೂರಿನಿಂದ ಉಳ್ಳಾಲದ ಕಡೆಗೆ ತೆರಳುತ್ತಿದ್ದ ಗಿರೀಶ್ ಉಳ್ಳಾಲ ಸೇತುವೆ ಮೇಲೆ ಅಂದರೆ ಸಿದ್ದಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳಕ್ಕೆ ಬಂದ ತಕ್ಷಣ ಆತ್ಮಹತ್ಯೆ ಮಾಡಿಕೊಳ್ಳಲು ನೇತ್ರಾವತಿ ನದಿಗೆ ಹಾರಿದ್ದಾರೆ.

Netravati Bridge

ಇನ್ನು ನೀರಿಗೆ ಜಿಗಿದ ನಂತರ ಗಿರೀಶ್ ಗೆ ಪತ್ನಿ ಮತ್ತು ಮಕ್ಕಳ ನೆನಪಾಗಿದೆ ಮತ್ತು ಬದುಕಬೇಕು ಎನ್ನುವ ಆಸೆ ಕೂಡ ಹುಟ್ಟಿದೆ, ಇನ್ನು ಬದುಕಬೇಕು ಅನ್ನುವ ಆಸೆಯಿಂದ ಈಜುತ್ತಾ ದಡವನ್ನ ಸೇರಲು ಪ್ರಯತ್ನ ಮಾಡುತ್ತಿದ್ದರು, ಇನ್ನು ಗಿರೀಶ್ ನದಿಗೆ ಹಾರಿದ್ದನ್ನ ಅಲ್ಲಿನ ಒಬ್ಬ ಮೀನುಗಾರ ನೋಡಿದ್ದಾನೆ. ಇನ್ನು ಗಿರೀಶ್ ಈಜುತ್ತಾ ದಡಕ್ಕೆ ಬರುತ್ತಿದ್ದನ್ನ ನೋಡಿದ ಮೀನುಗಾರರು ಗಿರೀಶ್ ಅವರನ್ನ ರಕ್ಷಣೆ ಮಾಡಿದ್ದಾರೆ, ಇನ್ನು ನಂತರ ಪೊಲೀಸರು ಮತ್ತು ಸ್ಥಳೀಯ ಜನರು ಗಿರೀಶ್ ಅವರನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇನ್ನು ಗಿರೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಇನ್ನು ಸಿದ್ದಾರ್ಥ್ ಅವರ ಆತ್ಮಹತ್ಯೆ ಮಾಡಿಕೊಂಡ ಬಳಿಕ ನೇತ್ರಾವತಿ ಈಗ ಆತ್ಮಹತ್ಯೆಯ ತಾಣವಾಗಿ ಬದಲಾಗುತ್ತಿದೆ, ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಯ ಮೇಲೆ ಸಿಸಿಟಿವಿ ಅಳವಡಿಕೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

Netravati Bridge

Please follow and like us:
0
http://karnatakatoday.in/wp-content/uploads/2019/08/Netravati-Bridge1.-1024x576.jpghttp://karnatakatoday.in/wp-content/uploads/2019/08/Netravati-Bridge1.-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಸಿದ್ದಾರ್ಥ್ ಅವರ ಸಾವಿನ ಕಹಿ ನೆನಪುಗಳು ಮಾಸುವ ಮುನ್ನವೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ನೇತ್ರಾವತಿ ನದಿಯ ಆ ಸ್ಥಳಕ್ಕೆ ಬಂದ ಒಬ್ಬ ಚಿಕ್ಕಮಗಳೂರಿನ ವ್ಯಕ್ತಿ ನೇತ್ರಾವತಿ ನದಿಗೆ ಹಾರಿದ್ದಾನೆ. ಹಾಗಾದರೆ ಆ ವ್ಯಕ್ತಿ ಯಾರು ಮತ್ತು ನಂತರ ಅಲ್ಲಿ ನಡೆದ ಆಶ್ಚರ್ಯಕರ ಘಟನೆ ಏನು ಅನ್ನುವುದರ ಬಗ್ಗೆ ನಿಮಗೆ ನಾವು ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಮಂಗಳೂರು ಮತ್ತು ಉಳ್ಳಾಲ ನಡುವೆ...Kannada News