never do these things in makara sankranthi

ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

never do these things in makara sankranthi

ಹೀಗಾಗಿ ಇಂತಹ ಪವಿತ್ರ ದಿನಗಳಲ್ಲಿ ನೀವು ಈ ಕೆಲವು ಕೆಲಸಗಳನ್ನು ಮಾಡಲೇಬಾರದು ಇದು ಸೂರ್ಯದೇವನ ಹಬ್ಬ ಆದ್ದರಿಂದ ಖಂಡಿತ ನಿಮಗೆ ಇದು ಕೆಡುಕನ್ನು ಮಾಡಬಹುದು. ಮೊದಲನೆಯದಾಗಿ ಈ ಹಬ್ಬದ ದಿನ ನೀವು ಮಾಂಸ, ಈರುಳ್ಳಿ, ಮೊಟ್ಟೆ ಇತ್ಯಾದಿಗಳನ್ನು ತಿನ್ನಲೇಬೇಡಿ.

never do these things in makara sankranthi

 

ಇಷ್ಟೇ ಅಲ್ಲದೆ ಈ ದಿನ ನೀವು ಯಾವುದೇ ಕೆಟ್ಟ ಹವ್ಯಾಸಗಳು ಇದ್ದರೆ ಅದನ್ನು ಕೂಡ ತ್ಯಜಿಸಿ, ಮದ್ಯಪಾನ ಧೂಮಪಾನ ಇವುಗಳನ್ನು ಬಿಡಿ ಏಕೆಂದರೆ ಈ ದಿನ ನಮ್ಮ ಪುರಾಣಗಳ ಪ್ರಕಾರ ಅತ್ಯಂತ ಶಕ್ತಿಯುತ ದಿನ ಸೌರಮಂಡಲದಲ್ಲಿ ಹಲವಾರು ರೀತಿಯ ಬದಲಾವಣೆಯಾಗುವ ದಿನ ಹೀಗಾಗಿ ಈ ದಿನ ನೀವು ಇಂತಹ ಹವ್ಯಾಸಗಳನ್ನು ಮಾಡಬೇಡಿ. ಈ ಪವಿತ್ರವಾದ ದಿನ ನಿಮ್ಮ ಮನೆಗೆ ಬರುವ ಅಸಹಾಯಕರನ್ನು ಭಿಕ್ಷುಕರನ್ನು ಬರಿಗೈ ಕಳುಹಿಸಬೇಡಿ.

never do these things in makara sankranthi

ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿ. ಮುಖ್ಯವಾಗಿ ಸಂಕ್ರಾಂತಿಯ ದಿನ ಸಾಧು ಸಂತರನ್ನು ಹಾಗೆ ಕಳಿಸಬೇಡಿ. ಈ ದಿನ ಮರಗಳನ್ನು ಕಡಿಯಬೇಡಿ ಮತ್ತು ಹೆಣ್ಣುಮಕ್ಕಳು ತಲೆ ಸ್ನಾನ ಮಾಡುವುದು ಕೂಡ ಉತ್ತಮವಲ್ಲ. ನಾವು ಕೊಟ್ಟ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗು ತಲುಪಿಸಿ.

Please follow and like us:
0
http://karnatakatoday.in/wp-content/uploads/2019/01/makara-sankranti-1024x576.pnghttp://karnatakatoday.in/wp-content/uploads/2019/01/makara-sankranti-150x104.pngKarnataka Today's Newsಎಲ್ಲಾ ಸುದ್ದಿಗಳುಜ್ಯೋತಿಷ್ಯಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ...Kannada News