ಯಾವುದೇ ಸರ್ಕಾರೀ ಹಾಗು ಖಾಸಗಿ ಬ್ಯಾಂಕಿನಲ್ಲಿ ನಿಮ್ಮ ಖಾತೆ ಇದ್ದರೆ ದಯವಿಟ್ಟು ಸರಕಾರದ ಈ ಸೂಚನೆಯನ್ನು ನೀವು ತಪ್ಪದೆ ಕೇಳಲೇಬೇಕು. ಹೌದು ಸರ್ಕಾರದ ಈಗ ಮೊದಲೇ ನಿರ್ಮಿಸಿದ್ದ್ದ ನಿಯಮಕ್ಕೆ ಮತ್ತಷ್ಟು ಬಲ ತುಂಬಿದೆ. ಕೇಂದ್ರದ ಮೋದಿ ಸರ್ಕಾರ ಡಿಜಿಟಲ್ ಕರೆನ್ಸಿಗೆ ಹೆಚ್ಚು ಮಹತ್ವ ನೀಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತಂಡ ವಿಷಯವನ್ನು ನಾವು ನೋಡಿದ್ದೇವೆ. ಮೊದಲಿನಂತೆ ಈಗ ಒಬ್ಬರಿಂದ ಮತ್ತೊಬ್ಬರಿಗೆ ಹಣ ಕಳಿಸುವುದು ಕೂತಲ್ಲೇ ಕ್ಷಣಮಾತ್ರದಲ್ಲಿ ಸಾಧ್ಯವಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಇದ್ದರು ಇದು ಸೈಬರ್ ಲೋಕ ಇಲ್ಲಿ ಏನು ಕೂಡ ನಡೆಯಬಹುದು, ಹೌದು ಇತ್ತೀಚಿಗೆ ನಗದು ರಹಿತ ವ್ಯವಹಾರ ಆರಂಭವಾದ ಬಳಿಕ ದೇಶದಲ್ಲಿ ಅದೆಷ್ಟೋ ಜನ ಸ್ವಲ್ಪ ಮಟ್ಟಿನ ತೊಂದರೆ ಅನುಭವಿಸಿದ್ದಾರೆ.

ಇದು ಅವರ ಸ್ವ ಇಚ್ಛೆಯಿಂದ ಆಗದಿದ್ದರೂ ಕೆಲವರು ಖದೀಮರು ಮಡಿದ ಮೋಸದಿಂದಾಗಿ ಅದೆಷ್ಟೋ ಜನರು ಇಂದು ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡಿದ್ದಾರೆ. ಹೌದು ನೀವು ಕೂಡ ಕೇಳಿರಬಹುದು ಯಾವುದೇ ಅಪರಿಚಿತ ಕರೆ ಬಂದು ಬ್ಯಾಂಕ್ ನಿಂದ ಎಂದು ಹೇಳಿ ನಿಮ್ಮ ಏಟಿಎಂ ಮಾಹಿತಿ ಅಕೌಂಟ್ ಡೀಟೇಲ್ಸ್ ಪಡೆದುಕೊಂಡು ಮೋಸದಿಂದ ಹಣ ವಂಚಿಸಿದ ಅದೆಷ್ಟೋ ಜನರ ಕಥೆ ಕೇಳಿದ್ದೀರಿ, ಇದನ್ನೇ ಈಗ ಸೂಕ್ಷ್ಮವಾಗಿ ತಗೆದುಕೊಂಡ ಸರ್ಕಾರ ಕಾನೂನು ಸ್ವಲ್ಪ ಬಿಗಿಗೊಳಿಸಿದೆ.

ಇನ್ನು ಮುಂದೆ ನಿಮ್ಮ ಖಾತೆಯಲ್ಲಿ ನಿಮಗೆ ಗೊತ್ತಿಲ್ಲದೇ ಯಾವುದೇ ವರ್ಗಾವಣೆ ನಡೆದರೆ ಅದು ಅಕ್ರಮವಾಗಿ ಅಂಥದ್ದರ ಜವಾಬ್ದಾರಿ ಸಂಪೂರ್ಣ ಬ್ಯಾಂಕ್ ಹೊರಲಿದೆ ಇದಕ್ಕಾಗಿ ಸರಕಾರ ನಿರ್ದೇಶನ ನೀಡಿದೆ. ಡಿಜಿಟಲ್ ಬ್ಯಾಂಕಿನಿಂದ ಕೆಲಸಗಳು ಸುಲಭವಾದರೂ ನಮ್ಮ ಸುರಕ್ಷತೆ ನಮಗೆ ಮೊದಲು ಬೇಕು ಆದ್ದರಿಂದ ಇಲ್ಲಿ ನೀವು ಮಾಡಬೇಕಾದ ಒಂದು ಮಹತ್ವದ ಕೆಲಸ ಏನಂದ್ರೆ ಒಂದು ವೇಳೆ ಇಂತಹ ಹಣ ಕಳೆದುಕೊಂಡ ಪರಿಸ್ಥಿತಿ ನಿಮಗೆ ಎದುರಾದ್ರೆ ಕೂಡಲೇ ಅಂದರೆ 3 ದಿನಗಳ ಒಳಗೆ ನಿಮಗಾದ ತೊಂದರೆಯನ್ನು ಬ್ಯಾಂಕಿಗೆ ತಿಳಿಸಲೇಬೇಕೆಂದು ನಿರ್ದೇಶಿಸಿದೆ.

ಇಲ್ಲವಾದ್ರೆ ನೀವು ಕಳೆದುಕೊಂಡ ಹಣವನ್ನು ಟ್ರಾಕ್ ಮಾಡುವುದು ಸ್ವಲ್ಪ ಕಷ್ಟವೆನಿಸುತ್ತದೆ. ಆದ್ದರಿಂದ ಇನ್ನು ಮುಂದೆ ಮೋಸ ಹೋದ ಕೂಡಲೇ ಶೀಘ್ರದಲ್ಲೇ ಬ್ಯಾಂಕಿಗೆ ಸಂಪರ್ಕ ನೀಡಿ ನಿಮ್ಮ ಕಂಪ್ಲೇಂಟ್ ನೀಡಿ. ದಯಾವುತ್ತು ಸಾರ್ವಜನಿಕರು ಯಾರು ಕೂಡ ತಮ್ಮ ಆಧಾರ್ ಒಟಿಪಿ, ಮುಂತಾದ ನಂಬರ್ ಗಳನ್ನೂ ಯಾವುದೇ ಕಾರಣಕ್ಕೂ ಇತರರೊಂದಿಗೆ ಹಂಚಿಕೊಳ್ಳಬೇಡಿ. ಸಾದ್ಯವಾಡಿಸ್ತು ಜನರಿಗೆ ಈ ಮಾಹಿತಿ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/09/bank-rules-1024x576.pnghttp://karnatakatoday.in/wp-content/uploads/2018/09/bank-rules-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಯಾವುದೇ ಸರ್ಕಾರೀ ಹಾಗು ಖಾಸಗಿ ಬ್ಯಾಂಕಿನಲ್ಲಿ ನಿಮ್ಮ ಖಾತೆ ಇದ್ದರೆ ದಯವಿಟ್ಟು ಸರಕಾರದ ಈ ಸೂಚನೆಯನ್ನು ನೀವು ತಪ್ಪದೆ ಕೇಳಲೇಬೇಕು. ಹೌದು ಸರ್ಕಾರದ ಈಗ ಮೊದಲೇ ನಿರ್ಮಿಸಿದ್ದ್ದ ನಿಯಮಕ್ಕೆ ಮತ್ತಷ್ಟು ಬಲ ತುಂಬಿದೆ. ಕೇಂದ್ರದ ಮೋದಿ ಸರ್ಕಾರ ಡಿಜಿಟಲ್ ಕರೆನ್ಸಿಗೆ ಹೆಚ್ಚು ಮಹತ್ವ ನೀಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತಂಡ ವಿಷಯವನ್ನು ನಾವು ನೋಡಿದ್ದೇವೆ. ಮೊದಲಿನಂತೆ ಈಗ ಒಬ್ಬರಿಂದ ಮತ್ತೊಬ್ಬರಿಗೆ ಹಣ ಕಳಿಸುವುದು ಕೂತಲ್ಲೇ ಕ್ಷಣಮಾತ್ರದಲ್ಲಿ ಸಾಧ್ಯವಾಗಿದೆ....Kannada News