ಹೌದು ಕಾರು ಖರೀದಿಸುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ ಆದರೆ ಇದು ಪೆಟ್ರೋಲ್ ಡಿಸೇಲ್ ಅಲ್ಲ ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಮಾತ್ರ. ಇಡೀ ವಿಶ್ವವೀಗ ಪೆಟ್ರೋಲ್ ಹಾಗೂ ಡಿಸೆಲ್ ಕಾರುಗಳನ್ನ ಬದಿಗಿಟ್ಟು ಎಲೆಕ್ಟ್ರಿಕಲ್ ಕಾರು ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.

ಭಾರತದಲ್ಲಿ ಎಲೆಕ್ಟ್ರಿಕಲ್ ಕಾರುಗಳನ್ನ ಜನಸಾಮಾನ್ಯರಿಗೆ ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂಪರ್ ಆಫರ್ ನೀಡಲು ಮುಂದಾಗಿದೆ. ಲೆಕ್ಟ್ರಿಕಲ್ ಕಾರು ಉತ್ಪಾದನೆ ಹಾಗೂ ಮಾರಾಟವನ್ನ ಹೆಚ್ಚಿಸಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಕಾರಿನ ಬ್ಯಾಟರಿಗೆ ಜಿಎಸ್‌ಟಿ ತೆರಿಗೆ ಕೂಡ ಕಡಿಮೆಗೊಳಿಸೋ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.

ಎಲೆಕ್ಟ್ರಿಕಲ್ ಕಾರು ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿ ಸಬ್ಸಿಡಿ ನೀಡಲು ಮೋದಿ ಸರ್ಕಾರ ನಿರ್ಧರಿಸಿದೆ. ಜೊತೆಗೆ ನಗರಗಳಲ್ಲಿ ಎಲೆಕ್ಟ್ರಿಕಲ್ ಕಾರಿನ ಚಾರ್ಜಿಂಗ್ ಸ್ಟೇಶನ್‌ಗಳನ್ನ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಬರೋಬ್ಬರಿ 9000 ಕೋಟಿ ರೂಪಾಯಿ ತೆಗೆದಿಡಲಿದೆ. ಷರತ್ತುಗಳು ಅನ್ವಯ: ಎಲೆಕ್ಟ್ರಿಕಲ್ ಕಾರುಗಳಿಗೆ ಕೇಂದ್ರ ಸರ್ಕಾರ ನೀಡೋ ಸಬ್ಸಿಡಿಗೆ ಕೆಲ ಷರತ್ತುಗಳನ್ನ ವಿಧಿಸಿದೆ.

 

ಪೆಟ್ರೋಲ್ ಅಥವಾ ಡೀಸೆಲ್ ಕಾರು ಹೊಂದಿದೆ ಗ್ರಾಹಕರಿಗೆ ಈ ಸಬ್ಸಿಡಿ ಅನ್ವಯವಾಗಲಿದೆ. ಹಳೆ ಪೆಟ್ರೋಲ್ ಅಥವಾ ಡೀಸೆಲ್ ಕಾರು ಹೊಂದಿದ ಗ್ರಾಹಕ ಈ ಕಾರನ್ನ ಗುಜರಿಗೆ ನೀಡಿ ನೂತನ ಎಲೆಕ್ಟ್ರಿಕಲ್ ಕಾರು ಖರೀದಿಸಬೇಕಿದೆ. ಇದು ಸರಿಯಾದ ನಿರ್ಧಾರವೇ ಎಂದು ತಿಳಿಸಿ.

Please follow and like us:
0
http://karnatakatoday.in/wp-content/uploads/2018/08/car-1024x576.pnghttp://karnatakatoday.in/wp-content/uploads/2018/08/car-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಹೌದು ಕಾರು ಖರೀದಿಸುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ ಆದರೆ ಇದು ಪೆಟ್ರೋಲ್ ಡಿಸೇಲ್ ಅಲ್ಲ ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಮಾತ್ರ. ಇಡೀ ವಿಶ್ವವೀಗ ಪೆಟ್ರೋಲ್ ಹಾಗೂ ಡಿಸೆಲ್ ಕಾರುಗಳನ್ನ ಬದಿಗಿಟ್ಟು ಎಲೆಕ್ಟ್ರಿಕಲ್ ಕಾರು ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಭಾರತದಲ್ಲಿ ಎಲೆಕ್ಟ್ರಿಕಲ್ ಕಾರುಗಳನ್ನ ಜನಸಾಮಾನ್ಯರಿಗೆ ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂಪರ್ ಆಫರ್ ನೀಡಲು ಮುಂದಾಗಿದೆ. ಲೆಕ್ಟ್ರಿಕಲ್ ಕಾರು ಉತ್ಪಾದನೆ ಹಾಗೂ ಮಾರಾಟವನ್ನ...Kannada News