New Changes in Ration Card

ರಾಜ್ಯ ಸರ್ಕಾರದಿಂದ BPL ರೇಷನ್ ಕಾರ್ಡ್ ಇದ್ದವರಿಗೆ ಕೆಲವು ಹೊಸ ಬದಲಾವಣೆಗಳನ್ನ ಮಾಡಲಾಗಿದೆ, ನಿಮ್ಮ ಬಳಿ BPL ರೇಷನ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನ ಕೊನೆಯ ತನಕ ಓದಿ.

ಸರ್ಕಾವರು ಇತ್ತೀಚಿಗೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ BPL ಕಾರ್ಡ್ ಗಳನ್ನ ತಡೆಗಟ್ಟಲು ಈಗಾಗಲೇ E-KYC ಯನ್ನ ಜಾರಿಗೆ ತಂದಿದೆ, ನಿಮ್ಮ ಬಳಿ BPL ರೇಷನ್ ಕಾರ್ಡ್ ಇದ್ದರೆ ನಿಮ್ಮ ಮನೆಯ ಮಹಿಳೆಯ ಮನೆಯ ಮುಖ್ಯಸ್ಥೆ ಎನ್ನುವ ಹೊಸ ಕಾನೂನನ್ನ ಜಾರಿಗೆ ತರಲಾಗಿದೆ, ಹಾಗಾಗಿ ನಿಮ್ಮ ಮನೆಯ ಯಜಮಾನ ಸ್ಥಾನವನ್ನ ಮನೆಯ ಮಹಿಳೆಗೆ ನೀಡಲಾಗುತ್ತದೆ.

BPL ಕುಟುಂಬಗಳಿಗೆ ಸ್ತ್ರೀ ನೇ ಮನೆಯ ಯಜಮಾನಿ ಒಂದುವೇಳೆ ನಿಮ್ಮ BPL ರೇಷನ್ ಕಾರ್ಡ್ ನಲ್ಲಿ ಪುರಷ ಮನೆಯ ಯಜಮಾನ ಸ್ಥಾನವನ್ನ ಅದನ್ನ ಬದಲಾಯಿಸಿಕೊಳ್ಳಬೇಕಾಗಿದೆ, ಹೌದು E -KYC ಮಾಡಿಸಿಕೊಳ್ಳುವಾಗ ರೇಷನ್ ಅಂಗಡಿಗಳಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ.

New Changes in Ration Card

BPL ಕಾರ್ಡ್ ಹೊಂದಿರುವ ಸ್ತ್ರೀ ಅಂದರೆ ತಾಯಿ, ಪತ್ನಿ ಅಥವಾ 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಇದ್ದರೂ ಅವರೇ ಯಜಮಾನಿ ಆಗುತ್ತಾರೆ, ಒಂದುವೇಳೆ ಸ್ತ್ರೀ ಇಲ್ಲ ಅಂದರೆ ಮಾತ್ರ ಪುರುಷರು ಮನೆಯ ಯಜಮಾನ ಆಗಿರುತ್ತಾರೆ.

ಇನ್ನು ಎರಡನೆಯದಾಗಿ BPL ಹೊಂದಿರುವ ಯಾವುದೇ ವ್ಯಕ್ತಿಯು ಪಡೆದುಕೊಂಡಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯವು 1.20 ಲಕ್ಷಕ್ಕಿಂತ ಅಧಿಕವಾಗಿದ್ದರೆ ನಿಮ್ಮ BPl ಕಾರ್ ನ್ನ ರದ್ದು ಮಾಡಲಾಗುತ್ತದೆ.

ಇನ್ನು ಇನ್ನೊಂದು ವಿಚಾರ ಏನು ಅಂದರೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಬೈಯೋಮೆಟ್ರಿಕ್ ಇರುವುದಿಲ್ಲ ಹಾಗು ವಯಸ್ಸಾದವರಿಗೆ, ಕುಷ್ಠ ರೋಗಿಗಳಿಗೆ, ಆಸ್ಪತ್ರೆಗಳಲ್ಲಿ ಅಡ್ಮಿಟ್ ಆದವರು ಸೂಕ್ತ ಧಾಖಲೆಗಳನ್ನ ತೆಗೆದುಕೊಂಡು ತಶೀಲ್ ಕಚೇರಿಯಲ್ಲಿ ಇರುವ ಆಹಾರ ನಿರೀಕ್ಷಕರ ಲಾಗ್ ಇನ್ ನಲ್ಲಿ ನೇರವಾಗಿ E -KYC ಮಾಡಿಸಿಕೊಳ್ಳಬೇಕು.

New Changes in Ration Card

ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡವರು ರೇಷನ್ ಅಂಗಡಿಗೆ E -KYC ಮಾಡಲು ಹೋಗುವ ಸಮಯದಲ್ಲಿ ನಿಮ್ಮ ಮನೆಯಲ್ಲಿನ ಒಬ್ಬ ಸದಸ್ಯನ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನ ತೆಗೆದುಕೊಂಡು ಹೋಗಬೇಕು.

ಇನ್ನು ಇನ್ನುಳಿದ ಎಲ್ಲರೂ ರೇಷನ್ ಅಂಗಡಿಗೆ E -KYC ಮಾಡಲು ಹೋದಾಗ ನಿಮ್ಮ ಆಧಾರ್ ಕಾರ್ಡ್ ನ್ನ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು, ಇನ್ನು ಇದಕ್ಕೆ ಎರಡು ತಿಂಗಳ ಕಾಲಾವಕಾಶವನ್ನ ಮಾತ್ರ ನೀಡಲಾಗಿದೆ.

ಇನ್ನು ನಿಮ್ಮ ಕಾರ್ಡ್ ನಲ್ಲಿ ಯಾರಾದರೂ ಮರಣ ಹೊಂದಿದ್ದರೆ ಅಥವಾ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರೆ ಅಥವಾ ಮನೆಯಲ್ಲಿನ ಸದಸ್ಯರು ಬೇರೆ ಕುಟುಂಬವನ್ನ ಮಾಡಿದ್ದರೆ ಅಂತವರ ಹೆಸರುಗಳನ್ನ ತೆಗೆದು ಹಾಕಬೇಕು, ಇಲ್ಲವಾದರೆ ದಂಡದ ಜೊತೆಗೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ.

ಸ್ನೇಹಿತರೆ ರೇಷನ್ ಕಾರ್ಡ್ ನಲ್ಲಿ ಬದಲಾಗಿರುವ ಬದಲಾವಣೆಯ ಬಗ್ಗೆ ನಿಮ್ಮ ಗೆಳೆಯರಿಗೂ ಮತ್ತು ಸಂಬಂಧಿಕರಿಗೂ ಈ ಮಾಹಿತಿಯನ್ನ ತಪ್ಪದೆ ತಲುಪಿಸಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

New Changes in Ration Card

Please follow and like us:
0
http://karnatakatoday.in/wp-content/uploads/2019/06/New-Changes-in-Ration-card-1024x576.jpghttp://karnatakatoday.in/wp-content/uploads/2019/06/New-Changes-in-Ration-card-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲರಾಜ್ಯ ಸರ್ಕಾರದಿಂದ BPL ರೇಷನ್ ಕಾರ್ಡ್ ಇದ್ದವರಿಗೆ ಕೆಲವು ಹೊಸ ಬದಲಾವಣೆಗಳನ್ನ ಮಾಡಲಾಗಿದೆ, ನಿಮ್ಮ ಬಳಿ BPL ರೇಷನ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನ ಕೊನೆಯ ತನಕ ಓದಿ. ಸರ್ಕಾವರು ಇತ್ತೀಚಿಗೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ BPL ಕಾರ್ಡ್ ಗಳನ್ನ ತಡೆಗಟ್ಟಲು ಈಗಾಗಲೇ E-KYC ಯನ್ನ ಜಾರಿಗೆ ತಂದಿದೆ, ನಿಮ್ಮ ಬಳಿ BPL ರೇಷನ್ ಕಾರ್ಡ್ ಇದ್ದರೆ ನಿಮ್ಮ ಮನೆಯ ಮಹಿಳೆಯ ಮನೆಯ ಮುಖ್ಯಸ್ಥೆ ಎನ್ನುವ ಹೊಸ ಕಾನೂನನ್ನ ಜಾರಿಗೆ ತರಲಾಗಿದೆ,...Kannada News