ಬಡತನ ಅನಕ್ಷರತೆ ಇವೆಲ್ಲ ನಮ್ಮ ತಂದೆ ತಾಯಿ ಬೆಳೆದು ಬಂದಿರುವ ಆ ಕಾಲದಿಂದ ಹಿಡಿದು ಈಗಿನವರೆಗೂ ಕೂಡ ಇದರ ಪರಿಣಾಮ ಎಲ್ಲರಿಗು ಆಗಿದೆ. ಹೌದು ಕನಿಷ್ಠ ಶಿಕ್ಷಣ ಪಡೆಯದೇ ಅಂದು ಜನರು ಪರದಾಡುತ್ತಿದ್ದರು. ಓದುವ ಮನಸ್ಸಿದ್ದರೂ ಬಡತನ ಎನ್ನುವುದು ಕಿತ್ತು ತಿನ್ನುತ್ತಿತ್ತು. ಹೀಗಾಗಿ ಶಿಕ್ಷಣ ಕನಸಿನ ಮಾತಾಗಿತ್ತು. ಹೀಗಾಗಿ ಈಗಿನ ಕಾಲದಲ್ಲಿ ನೀವು ಡ್ರೈವಿಂಗ್ ಲೈಸನ್ಸ್ ಮಾಡಿಸಬೇಕೆಂದರು ಕನಿಷ್ಠ ಶಿಕ್ಷಣ ಎಂಟನೇ ತರಗತಿ ಆಗಿತ್ತು, ಹೀಗಾಗಿ ಹಲವಾರು ಮಂದಿ ಶಿಕ್ಷಣ ಇಲ್ಲದೆ ಲೈಸನ್ಸ್ ಪಡೆಯಲು ಪರದಾಡಿ ವಂಚಿತರಾಗಿದ್ದರು.

ಉದ್ಯೋಗಾವಕಾಶಗಳು ಕೂಡ ಕಡಿಮೆ ಆಗಿದ್ದವು. ಆದರೆ ಕೇಂದ್ರ ಸರ್ಕಾರ ಈಗ ಮತ್ತೆ ಈ ನಿಯಮವನ್ನು ಪರಿಶೀಲಿಸುತ್ತಿದೆ. ನೀವು ಎಷ್ಟೇ ಕಲ್ತ್ಮಕ ಡ್ರೈವರ್ ಆಗಿದ್ದರು ಕೂಡ ಶಾಲಾ ದಾಖಲಾತಿ ತೋರಿಸದೆ ನಿಮಗೆ ಲೈಸನ್ಸ್ ಸಿಗುತ್ತಿರಲಿಲ್ಲ. ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಠ ಶಿಕ್ಷಣ ಅರ್ಹತೆಯಿರಬೇಕು ಎಂಬ ನಿಯಮವನ್ನು ಕೈಬಿಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಚಲನಾ ಪರವಾನಗಿ ಮೇಲಿದ್ದ ಕನಿಷ್ಠ ಶಿಕ್ಷಣ ಅರ್ಹತೆ ನಿಯಮವನ್ನು ಹಿಂಪಡೆಯಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದೊಂದು ಭರ್ಜರಿ ಸಿಹಿಸುದ್ದಿ ಎನ್ನಬಹುದು ಇದುವರೆಗೂ ಡ್ರೈವಿಂಗ್ ಲೈಸನ್ಸ್ ಮಾಡದೇ ಇರುವವರಿಗೆ ಇದು ವರದಾನ ಆಗಲಿದೆ.

ಪ್ರಸ್ತುತ ನಿಯಮದ ಪ್ರಕಾರ ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಠ 8ನೇ ತರಗತಿ ಓದಿರಬೇಕು ಎಂಬ ನಿಯಮವಿದೆ. 1989ರ ಕೇಂದ್ರ ಮೋಟಾರು ವಾಹನಗಳ ನಿಯಮ (ರೂಲ್‌ 8)ರ ಅಧಿನಿಯಮದ ಪ್ರಕಾರ ಈ ನಿಯಮ ಚಾಲ್ತಿಯಲ್ಲಿದೆ.ಆರ್ಥಿಕವಾಗಿ ಹಿಂದುಳಿತ ಸಮಾಜದಲ್ಲಿರು ನುರಿತ ವ್ಯಕ್ತಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕನಿಷ್ಠ ಶಿಕ್ಷಣ ಅರ್ಹತೆ ನಿಯಮವನ್ನು ಸಡಿಲಿಸಲು ನಿರ್ಧಾರ ಕೈಗೊಂಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಕನಿಷ್ಠ ಶಿಕ್ಷಣ ಅರ್ಹತೆ ನಿಯಮವನ್ನು ಕೈಬಿಡುವುದರಿಂದ ಸಾರಿಗೆ ವಿಭಾಗದಲ್ಲಿ ಸುಮಾರು 22 ಲಕ್ಷ ಚಾಲಕರ ಕೊರತೆ ನೀಗಲಿದೆ ಎಂದು ಅಂದಾಜಿಸಲಾಗಿದೆ. ಈ ಸುದ್ದಿಯನ್ನು ಆದಷ್ಟು ಜನರಿಗೆ ತಲುಪಿಸಿ. ಆದ್ದರಿಂದ ಇನ್ನು ಮುಂದೆ ನೀವು ಪರವಾನಗಿ ಪಡೆಯಲು ಯಾವುದೇ ಶಿಕ್ಷಣದ ಅಗತ್ಯ ಇಲ್ಲ ನೀವೊಬ್ಬ ಉತ್ತಮ ಹಾಗು ಟ್ರಾಫಿಕ್ ನಿಯಮಗಳನ್ನು ಅರ್ಥೈಸಿಕೊಂಡು ವಾಹನ ಚಲಾಯಿಸುವ ಉತ್ತಮ ಚಾಲಕನಿಗಿದ್ದರೆ ಸಾಕು. ಈ ಸುದ್ದಿಯನ್ನು ನಿಮ್ಮ ಗೆಳೆಯರಿಗೂ ತಲುಪಿಸಿ.

Please follow and like us:
error0
http://karnatakatoday.in/wp-content/uploads/2019/06/driving-license-update-1024x576.jpghttp://karnatakatoday.in/wp-content/uploads/2019/06/driving-license-update-150x104.jpgKarnataka Trendingಬೆಂಗಳೂರುಮಂಗಳೂರುಬಡತನ ಅನಕ್ಷರತೆ ಇವೆಲ್ಲ ನಮ್ಮ ತಂದೆ ತಾಯಿ ಬೆಳೆದು ಬಂದಿರುವ ಆ ಕಾಲದಿಂದ ಹಿಡಿದು ಈಗಿನವರೆಗೂ ಕೂಡ ಇದರ ಪರಿಣಾಮ ಎಲ್ಲರಿಗು ಆಗಿದೆ. ಹೌದು ಕನಿಷ್ಠ ಶಿಕ್ಷಣ ಪಡೆಯದೇ ಅಂದು ಜನರು ಪರದಾಡುತ್ತಿದ್ದರು. ಓದುವ ಮನಸ್ಸಿದ್ದರೂ ಬಡತನ ಎನ್ನುವುದು ಕಿತ್ತು ತಿನ್ನುತ್ತಿತ್ತು. ಹೀಗಾಗಿ ಶಿಕ್ಷಣ ಕನಸಿನ ಮಾತಾಗಿತ್ತು. ಹೀಗಾಗಿ ಈಗಿನ ಕಾಲದಲ್ಲಿ ನೀವು ಡ್ರೈವಿಂಗ್ ಲೈಸನ್ಸ್ ಮಾಡಿಸಬೇಕೆಂದರು ಕನಿಷ್ಠ ಶಿಕ್ಷಣ ಎಂಟನೇ ತರಗತಿ ಆಗಿತ್ತು, ಹೀಗಾಗಿ ಹಲವಾರು ಮಂದಿ...Film | Devotional | Cricket | Health | India