New News of udyogini scheme

ನಮ್ಮ ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಈಗಾಗಲೇ ಹಲವು ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರಲಾಗಿದೆ, ಆದರೆ ಈ ಯೋಜನೆಯ ಮೂಲಕ ನಮ್ಮ ರಾಜ್ಯದ ಮಹಿಳೆಯರಿಗೆ 3 ಲಕ್ಷದ ವರೆಗೆ ಸಾಲ ಹಾಗು 90 ರೂಪಾಯಿಯ ಉಚಿತ ಸಬ್ಸಿಡಿಯನ್ನ ನೀಡಲಾಗುತ್ತಿದೆ.

ಹಾಗಾದರೆ ಈ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಬಡ ಕುಟುಂಬದ ಮಹಿಳೆಯರು ಸ್ವಾವಲಂಬಿಯಾಗಿ ಉದ್ಯೋಗವನ್ನ ಮಾಡಲು ರಾಜ್ಯ ಸರ್ಕಾರದಿಂದ ಉದ್ಯೋಗಿನಿ ಯೋಜನೆಯನ್ನ ಜಾರಿಗೆ ತರಲಾಗಿದೆ, ಹಾಗಾಗಿ ಬಡ ಕುಟುಂಬದ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನ ಆರಂಭಿಸಲು 3 ಲಕ್ಷದ ವರೆಗೆ ಸಾಲವನ್ನ ನೀಡಲಾಗುತ್ತಿದೆ.

New News of udyogini scheme

ಇನ್ನು ಈಗಾಗಲೇ ಮನೆಯಲ್ಲಿ ಬಟ್ಟೆ ಹೊಲಿಗೆ ಯಂತ್ರ, ಹಪ್ಪಳ ತಯಾರಿಕೆ, ಕೈ ಕುಶಲತೆಗಳು, ಸಾವಿಗೆ ತಯಾರಿಕೆ ಹೀಗೆ ಯಾವುದೇ ರೀತಿಯ ಕೆಲಸವನ್ನ ಈಗಾಗಲೇ ಮಾಡುತ್ತಾ ಇದ್ದರೂ ಅದರ ಅಭಿವೃದ್ಧಿಗೆ ಮತ್ತು 70 ರೀತಿಯ ಹೊಸ ಉದ್ಯೋಗಗಳಿಗೆ 3 ಲಕ್ಷದ ವರೆಗೆ ಸಾಲ ಸೌಲಭ್ಯವನ್ನ ನೀಡಲಾಗುತ್ತಿದೆ.

ಇನ್ನು ಈ ಯೋಜನೆಯಲ್ಲಿ ನಿಮಗೆ 90 ಸಾವಿರ ರೂಪಾಯಿಗಳ ಸಬ್ಸಿಡಿಯನ್ನ ಕೂಡ ನೀಡಲಾಗುತ್ತಿದೆ, ಇನ್ನು ನೀವು 2 ಲಕ್ಷದ 10 ಸಾವಿರ ರೂಪಾಯಿಯನ್ನ ಮಾತ್ರ ಕಂತುಗಳ ಮೂಲಕ ಮರುಪಾವತಿ ಮಾಡಬಹುದಾಗಿದೆ.

ಇನ್ನು ಈ ಯೋಜನೆಯ ಅರ್ಜಿಗಳು ನಿಮಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನಿಮಗೆ ಸಿಗುತ್ತದೆ, ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಬೇಕಾದರೆ ನಿಮ್ಮ ಹತ್ತಿರದ ಅಂಗವಾಡಿಯಲ್ಲಿ ವಿಚಾರಿಸಬಹುದಾಗಿದೆ.

New News of udyogini scheme

ಇನ್ನು ಇದಕ್ಕೆ ಅರ್ಜಿ ಸಲ್ಲಿಸಲು ನಿಮ್ಮ ಬಳಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಬ್ಯಾಂಕ್ ಪಾಶ್ ಬುಕ್, ಆದಾಯ ಪ್ರಮಾಣ ಪತ್ರ, ಇನ್ನು ಈ ಯೋಜನೆಯ ಲಾಭವನ್ನ ಪಡೆಯಲು ನಿಮ್ಮ ವಯಸ್ಸು 18 ರಿಂದ 20 ರ ಒಳಗೆ ಇರಬೇಕು ಮತ್ತು ನಿಮ್ಮ BPL ರೇಷನ್ ಕಾರ್ಡ್ ಮಹಿಳೆಯರು ಆಗಿರಬೇಕು.

ಮುಂದಿನ ಜೂನ್ ತಿಂಗಳಿನಲ್ಲಿ ಈ ಯೋಜನೆಗೆ ಅರ್ಜಿಯನ್ನ ಕರೆಯಲಾಗುತ್ತದೆ, ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

New News of udyogini scheme

Please follow and like us:
0
http://karnatakatoday.in/wp-content/uploads/2019/04/New-News-of-Udyogini-Scheme-1024x576.jpghttp://karnatakatoday.in/wp-content/uploads/2019/04/New-News-of-Udyogini-Scheme-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಈಗಾಗಲೇ ಹಲವು ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರಲಾಗಿದೆ, ಆದರೆ ಈ ಯೋಜನೆಯ ಮೂಲಕ ನಮ್ಮ ರಾಜ್ಯದ ಮಹಿಳೆಯರಿಗೆ 3 ಲಕ್ಷದ ವರೆಗೆ ಸಾಲ ಹಾಗು 90 ರೂಪಾಯಿಯ ಉಚಿತ ಸಬ್ಸಿಡಿಯನ್ನ ನೀಡಲಾಗುತ್ತಿದೆ. ಹಾಗಾದರೆ ಈ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಬಡ...Kannada News