ಸ್ನೇಹಿತರೆ ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇರಳ ಮಾದರಿಯ ಸ್ಥಳೀಯ ಸರ್ಕಾರ ವ್ಯವಸ್ಥೆಯನ್ನ ಜಾರಿಗೆ ತರಲು ಮುಂದಾಗಿದೆ. ಹೌದು ಸ್ನೇಹಿತರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ ಎಸ್ ಈಶ್ವರಪ್ಪನವರ ನೇತೃತ್ವದ ತಂಡ ಕೇರಳದಲ್ಲಿ ಸ್ಥಳೀಯ ಸರ್ಕಾರದ ಮಾದರಿ ಅಧ್ಯಯನವನ್ನ ನಡೆಸಿದ್ದು ಈ ಬಜೆಟ್ ನಲ್ಲಿ ನಮ್ಮ ರಾಜ್ಯದಲ್ಲಿ ಅದನ್ನ ಘೋಷಣೆ ಮಾಡುವ ಸಾಧ್ಯತೆ ಇದೆ. ಕೇರಳ ಮಾದರಿಯ ಬಲವನ್ನ ತುಂಬುವ ಮೂಲಕ ಗ್ರಾಮ ಪಂಚಾಯತಿಗಳಿಗೆ ಅನೇಕ ಸೌಲಭ್ಯವನ್ನ ಕಲ್ಪಿಸಿ ಕೊಡಲಾಗುವುದು.

ಹಾಗಾದರೆ ಎಂತಹ ಸೌಲಭ್ಯವನ್ನ ಕಲ್ಪಿಸಲಾಗುತ್ತದೆ ಮತ್ತು ಗ್ರಾಮ ಪಂಚಾಯತಿಗಳಿಗೆ ಹಲವು ಸೇವೆಗಳನ್ನ ಒದಗಿಸಲಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕಂದಾಯ ಇಲಾಖೆ ನಿರ್ವಹಿಸುತ್ತಿರುವ ಜನನ ಮತ್ತು ಮರಣ ಪತ್ರವನ್ನ ಪಡೆಯಲು ನಾವು ಹಲವು ಕಚೇರಿಗಳಿಗೆ ಅಲಿಯಬೇಕಾಗಿತ್ತು ಆದರೆ ಈಗ ಅದನ್ನ ಸಡಿಲ ಮಾಡುವ ಸಲುವಾಗಿ ಅದನ್ನ ಗ್ರಾಮ ಪಂಚಾಯತಿಯಲ್ಲೇ ನೀಡಲು ಸಿದ್ಧತೆಯನ್ನ ಮಾಡಲಾಗುತ್ತಿದೆ. ಇನ್ನು ಇದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆ, ಪಿಂಚಣಿ ಯೋಜನೆ ಹೀಗೆ ಮೊದಲಾದವುಗಳನ್ನ ಪಂಚಾಯತಿ ಮಟ್ಟದಲ್ಲೇ ಅನುಷ್ಠಾನ ಮಾಡುವ ಚಿಂತನೆಯನ್ನ ಮಾಡಲಾಗಿದೆ.

New Panchayath scheme

ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನ ನಿರ್ಮಾಣ ಮಾಡಲು ಹೊಸ ಯೋಜನೆಯನ್ನ ಜಾರಿಗೆ ತಂದು ಅದನ್ನ ಬಜೆಟ್ ನಲ್ಲಿ ಘೋಷಣೆ ಮಾಡಲು ಸಿದ್ಧತೆಯನ್ನ ಮಾಡಲಾಗಿದೆ, ಕೇರಳ ರಾಜ್ಯದ ಪಂಚಾಯತಿಗಳಲ್ಲಿ ಮೂರೂ ಸ್ಥಾಯಿ ಸಮಿತಿಗಳು ಇದ್ದು ಗ್ರಾಮೀಣ ಜನರಿಗೆ ಬೇಕಾದ ಯೋಜನೆಗಳ ಕುರಿತಾಗಿ ಸ್ಥಾಯಿ ಸಮಿತಿಗಳು ಯೋಜನೆಯನ್ನ ರೂಪಿಸಿ ಅದನ್ನ ಅನುಷ್ಠಾನ ಮಾಡುತ್ತದೆ ಮತ್ತು ಇದೆ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಇಂತಹ ಸಮಿತಿಗಳನ್ನ ನಿರ್ಮಿಸಲು ಯೋಜನೆಯನ್ನ ರೂಪಿಸಲಗುತ್ತಿದೆ. ಇನ್ನು ಕುಟುಂಬಶ್ರೀ ಯೋಜನೆಯ ಮೂಲಕ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟಕ್ಕೆ ನರೇಗಾ ಅನುಷ್ಠಾನ ಸೇರಿ ವಿವಿಧ ರೀತಿಯ ಕಾರ್ಯಕ್ರಮಗಳನ್ನ ಜಾರಿಗೆ ತರಲಾಗುತ್ತಿದೆ.

ಇನ್ನು ಇದರ ಜೊತೆಗೆ ರಾಜ್ಯದಲ್ಲಿ ಕೂಡ ನರೇಗಾ ಅನುಷ್ಠಾನಕ್ಕೆ ಚಿಂತನೆಯನ್ನ ಮಾಡಲಾಗುತ್ತಿದೆ ಹೇಳಲಾಗುತ್ತಿದೆ. ಇನ್ನು ಈ ಎಲ್ಲಾ ಯೋಜನೆಯ ಮೂಲಕ ರಾಜ್ಯದಲ್ಲಿ ಎಲ್ಲಾ ಹಳ್ಳಿಗಳನ್ನ ಅಭಿವೃದ್ಧಿ ಮಾಡಲು ನಮ್ಮ ರಾಜ್ಯ ಈಗ ಚಿಂತನೆಯನ್ನ ಮಾಡಿದ್ದು ಮುಂದಿನ ಬಜೆಟ್ ನಲ್ಲಿ ಈ ಎಲ್ಲಾ ಯೋಜನೆಯ ಕುರಿತಾಗಿ ದೊಡ್ಡ ಚರ್ಚೆ ನಡೆಯಲಿದೆ. ಇನ್ನು ಈ ಎಲ್ಲಾ ಯೋಜನೆಗಳು ನಮ್ಮ ರಾಜ್ಯದಲ್ಲಿ ಜಾರಿಗೆ ಬಂದರೆ ನಮ್ಮ ಹಳ್ಳಿಗಳ ಮತ್ತು ಗ್ರಾಮೀಣ ಭಾಗಗಳ ಜನರಿಗೆ ತುಂಬಾ ಉಪಯೋಗ ಆಗಲಿದೆ ಅನ್ನುವುದು ನಮ್ಮ ಅಭಿಪ್ರಾಯವಾಗಿದೆ, ಸ್ನೇಹಿತರೆ ನಿಮ್ಮ ಅನಿಸಿಕೆಯನ್ನ ಪ್ರಕಾರ ಈ ಎಲ್ಲಾ ಯೋಜನೆಗಳು ಜಾರಿಗೆ ಬರಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

New Panchayath scheme

Please follow and like us:
error0
http://karnatakatoday.in/wp-content/uploads/2020/02/New-Grama-Panchayat-Schemes-1024x576.jpghttp://karnatakatoday.in/wp-content/uploads/2020/02/New-Grama-Panchayat-Schemes-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇರಳ ಮಾದರಿಯ ಸ್ಥಳೀಯ ಸರ್ಕಾರ ವ್ಯವಸ್ಥೆಯನ್ನ ಜಾರಿಗೆ ತರಲು ಮುಂದಾಗಿದೆ. ಹೌದು ಸ್ನೇಹಿತರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ ಎಸ್ ಈಶ್ವರಪ್ಪನವರ ನೇತೃತ್ವದ ತಂಡ ಕೇರಳದಲ್ಲಿ ಸ್ಥಳೀಯ ಸರ್ಕಾರದ ಮಾದರಿ ಅಧ್ಯಯನವನ್ನ ನಡೆಸಿದ್ದು ಈ ಬಜೆಟ್ ನಲ್ಲಿ ನಮ್ಮ ರಾಜ್ಯದಲ್ಲಿ ಅದನ್ನ ಘೋಷಣೆ ಮಾಡುವ ಸಾಧ್ಯತೆ ಇದೆ. ಕೇರಳ ಮಾದರಿಯ ಬಲವನ್ನ ತುಂಬುವ...Film | Devotional | Cricket | Health | India