ಭಾರತದ ಪ್ರಮೂಖ ಬ್ಯಾಂಕುಗಳಲ್ಲಿ ಒಂದಾದ ಮತ್ತು ದೇಶದ ಅತಿ ದೊಡ್ಡ ಬ್ಯಾಂಕಿಂಗ್ ನೆಟ್ವರ್ಕ್ ಎಂದೇ ಕರೆಯಲಾಗುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಹೌದು ದೇಶದಲ್ಲಿ ಇದೀಗ ಬ್ಯಾಂಕಿಂಗ್ ಕ್ಷೇತ್ರ ಬಹಳಷ್ಟು ಸುಧಾರಿಸಿದ್ದು ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಹಾಗು ನಗದು ರಹಿತ ಬ್ಯಾಂಕಿಂಗ್ ಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಇದು ಸಂತಸದ ವಿಷಯ ಕೂಡ ಹೌದು ಇಷ್ಟೇ ಅಲ್ಲದೆ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಕ್ಷಿಪ್ರ ಗತಿಯ ಬದಲಾವಣೆಗಳು ಜನರ ಜೀವನ ಮಟ್ಟವನ್ನು ಸುಧಾರಿಸುತ್ತಿದೆ. ಇನ್ನು ಸ್ಟೇಟ್ ಬ್ಯಾಂಕ್ ಈ ಬಾರಿ ತನ್ನ ಖಾತೆದಾರರಿಗೆ ಹೊಸ ಭರ್ಜರಿ ಆಫ಼ರ್ ನೀಡಿದೆ.

ಅದೇನೆಂದರೆ ಇನ್ನು ಮುಂದೆ ನಿಮ್ಮ ಖಾತೆಯಲ್ಲಿ ಯಾವುದೇ ಮಿನಿಮಮ್ ಬ್ಯಾಲೆನ್ಸ್ ಇಡಬೇಕಾದ ಅವಶ್ಯಕತೆಯೇ ಇಲ್ಲ, ಹೌದು ಸ್ಟೇಟ್ ಬ್ಯಾಂಕ್ ಪರಿಚಯಿಸಿರುವ ಹೊಸ ಯೋಜನೆಯ ಪ್ರಕಾರ ಬೇಸಿಕ್ ಸೇವಿಂಗ್ ಖಾತೆಗೆ (BSBD) ಜೀರೋ ಬ್ಯಾಲೆನ್ಸ್ ಮೂಲಕ ಯಾವುದೇ ವ್ಯಕ್ತಿ ಕೂಡ ತನ್ನ ಆದಾಯ ಎಷ್ಟೇ ಇದ್ದರೂ ಜೀರೋ ಬ್ಯಾಲೆನ್ಸ್ ಅಕೌಂಟ್ ತೆರೆಯಬಹುದಾಗಿದೆ.

ಈ ಮೂಲಕ ಜನರಿಗೆ ಉಳಿತಾಯ ಖಾತೆ ತೆರೆಯಲು ಹೆಚ್ಚು ಪ್ರಾಧಾನ್ಯತೆ ನೀಡಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಸ್ಟೇಟ್ ಬ್ಯಾಂಕ್ ದೇಶದ ಯಾವುದೇ ಮೂಲೆಯ್ಲಲಿರುವ ಜನರು ಯಾವುದೇ ರೀತಿಯ ಆದಾಯ ಹೊಂದಿರಲಿ ಇನ್ನು ಮುಂದೆ ಸ್ಟೇಟ್ ಬ್ಯಾಂಕ್ ನಲ್ಲಿ ತಿಂಗಳಿಗೆ ಯಾವುದೇ ಬ್ಯಾಲೆನ್ಸ್ ಇಡದೆ ಕೂಡ ಅಕೌಂಟ್ ಹೊಂದಬಹುದಾಗಿದೆ.

 

ಈ ರೀತಿ ಉಳಿತಾಯ ಖಾತೆ ಆರಂಭಿಸಿದವರಿಗೆ ಬ್ಯಾಂಕ್ ಉಚಿತವಾಗಿ ಯಾವುದೇ ವರ್ಷಕ್ಕೆ ಚಾರ್ಜ್ ಇಲ್ಲದೆ ರೂಪೇ ಡೆಬಿಟ್ ಕಾರ್ಡ್ ಕೂಡ ನೀಡಲಿದೆ. ಅಲ್ಲದೆ ನೀವು ಇಟ್ಟಿರುವ ಹಣಕ್ಕೆ ಸಾಮಾನ್ಯ ಖಾತೆಗಳಂತೆ ಬಡ್ಡಿ ಕೂಡ ವರ್ಷಕ್ಕೆ ನೀಡಲಿದೆ. SBI ನೀಡಿದ ಈ ಸೇವೆಯ ಬಗ್ಗೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗು ಈ ಮಾಹಿತಿ ತಿಳಿಸಿ.

Please follow and like us:
0
http://karnatakatoday.in/wp-content/uploads/2019/01/state-bank-no-1024x576.jpghttp://karnatakatoday.in/wp-content/uploads/2019/01/state-bank-no-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಭಾರತದ ಪ್ರಮೂಖ ಬ್ಯಾಂಕುಗಳಲ್ಲಿ ಒಂದಾದ ಮತ್ತು ದೇಶದ ಅತಿ ದೊಡ್ಡ ಬ್ಯಾಂಕಿಂಗ್ ನೆಟ್ವರ್ಕ್ ಎಂದೇ ಕರೆಯಲಾಗುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಹೌದು ದೇಶದಲ್ಲಿ ಇದೀಗ ಬ್ಯಾಂಕಿಂಗ್ ಕ್ಷೇತ್ರ ಬಹಳಷ್ಟು ಸುಧಾರಿಸಿದ್ದು ಜನರಿಗೆ ಡಿಜಿಟಲ್ ಬ್ಯಾಂಕಿಂಗ್ ಹಾಗು ನಗದು ರಹಿತ ಬ್ಯಾಂಕಿಂಗ್ ಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಇದು ಸಂತಸದ ವಿಷಯ ಕೂಡ ಹೌದು ಇಷ್ಟೇ ಅಲ್ಲದೆ ದೇಶದ ಬ್ಯಾಂಕಿಂಗ್...Kannada News