ನಿಮಗೆ ತಿಳಿದಿರಬಹುದು ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ  ಮೇಲೆ ಡಿಜಿಟಲ್ ಇಂಡಿಯಾ ಎನ್ನುವ ಉದ್ದೇಶ ಇಟ್ಟುಕೊಂಡು ಅದೆಷ್ಟೋ ಸೇವೆಗಳನ್ನು ಬಹಳಷ್ಟು ಸುಲಭವಾಗಿ ಮಾಡಿಬಿಟ್ಟಿದ್ದಾರೆ. ಈಗ ಈ ಸರದಿ ಟ್ರಾಫಿಕ್ ಪೊಲೀಸರದ್ದು. ಹೌದು ಕೇಂದ್ರ ಕೆಲ ತಿಂಗಳ ಹಿಂದೆಯೇ ಇಂಥದ್ದೊಂದು ಯೋಜನೆಗೆ ಕೈ ಹಾಕಿತ್ತು. ಹೌದು ಈ ಬಾರಿಯ ಈ ಕೇಂದ್ರದ ಹೊಸ ನಿಯಮ ಟ್ರಾಫಿಕ್ ಪೊಲೀಸರಿಗೆ ಸ್ವಲ್ಪ ಶಾಕ್ ನೀಡಿದ್ದಾರೆ ಜನಸಾಮನ್ಯರಿಗೇ ಸ್ವಲ್ಪ ಖುಷಿ ನೀಡಿದೆ. ವಾಹನಗಳ ದಾಖಲೆಗಳನ್ನು ಸವಾರರು ತಮ್ಮ ಡಿಜಿ ಲಾಕರ್ ಆ್ಯಪ್ ಮೂಲಕವೇ ಪೊಲೀಸರಿಗೆ ತೋರಿಸಬಹುದೆಂದು ಕೇಂದ್ರ ಸರ್ಕಾರ ಡಿಜಿ ಲಾಕರ್ ಸೇವೆಗೆ ಅಧಿಕೃತ ಆದೇಶ ನೀಡಿದೆ.ಕೇಂದ್ರ ಸಾರಿಗೆ ಇಲಾಖೆಯು ದಾಖಲೆಗಳನ್ನು ಡಿಜಿ ಲಾಕರ್ ನಲ್ಲಿಯೇ ಪರಿಶೀಲಿಸಬಹುದೆಂದು ಮಾನ್ಯತೆ ನೀಡಿ, ಮಹತ್ವದ ಆದೇಶವನ್ನು ಹೊರಡಿಸಿದೆ.

ಇದರಿಂದಾಗಿ ವಾಹನಸವಾರರು ಇನ್ನು ಮುಂದೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ದಾಖಲೆ ಕೇಳಿದರೆ, ಸವಾರರು ತಮ್ಮ ಮೊಬೈಲ್ ನಲ್ಲಿರುವ ದಾಖಲೆ ತೋರಿಸಿ ದಂಡ ಹಾಗೂ ಕಾನೂನಿನ ಕ್ರಮದಿಂದ ಪಾರಾಗಬಹುದಾಗಿದೆ.ಈ ಸಂಬಂಧ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಸ್ಮಾರ್ಟ್​ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆಗಳನ್ನು ಸಲ್ಲಿಸಬಹುದೆಂದು ಉಲ್ಲೇಖಿಸಲಾಗಿದೆ.

ಸದ್ಯ ಇಲಾಖೆ ಡಿಜಿಲಾಕರ್ ​ಆ್ಯಪ್​ನಲ್ಲಿ ಚಾಲನಾ ಪರವಾನಗಿ, ನೋಂದಣಿ ಪತ್ರ ಮತ್ತು ವಾಯುಮಾಲಿನ್ಯ ಪ್ರಮಾಣಪತ್ರದ ಡಿಜಿಟಲ್ ಪ್ರತಿಗಳನ್ನು ಸಂಗ್ರಹಿಸಬಹುದಾಗಿದೆ. ಇದಲ್ಲದೇ ಕುಡಿದು, ಅಜಾಗರೂಕ ಚಾಲನೆ ಹಾಗೂ ಇನ್ನು ಮುಂತಾದ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಸವಾರರ ಮೂಲ ಚಾಲನಾ ಪತ್ರವನ್ನು ಮುಟ್ಟುಗೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ಅಧಿಕಾರಿಗಳು ಕಾನೂನು ರೀತಿ ಡಿಎಲ್ ಮತ್ತು ಆರ್ ಸಿ ಜಪ್ತಿಮಾಡಬೇಕಾದ ಪ್ರಕರಣಗಳಲ್ಲಿ ದಾಖಲೆಯ ಮೂಲ ಪ್ರತಿ ಅಗತ್ಯವಾಗಿರಲಿದೆ.

ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ ಪ್ಲೇ ಸ್ಟೋರ್ ಹಾಗೂ ಆಪಲ್ ಐಓಎಸ್ ಮುಖಾಂತರ ಡಿಜಿಲಾಕರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ, ಸೈನ್ ಅಪ್ ಆಯ್ಕೆ ಒತ್ತಬೇಕು, ನಂತರ ಹೊಸ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ. ಮಾಹಿತಿಯನ್ನು ಆದಷ್ಟು ಜನರಿಗೆ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/09/new-traffic-rule-1024x576.pnghttp://karnatakatoday.in/wp-content/uploads/2018/09/new-traffic-rule-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುನಿಮಗೆ ತಿಳಿದಿರಬಹುದು ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ  ಮೇಲೆ ಡಿಜಿಟಲ್ ಇಂಡಿಯಾ ಎನ್ನುವ ಉದ್ದೇಶ ಇಟ್ಟುಕೊಂಡು ಅದೆಷ್ಟೋ ಸೇವೆಗಳನ್ನು ಬಹಳಷ್ಟು ಸುಲಭವಾಗಿ ಮಾಡಿಬಿಟ್ಟಿದ್ದಾರೆ. ಈಗ ಈ ಸರದಿ ಟ್ರಾಫಿಕ್ ಪೊಲೀಸರದ್ದು. ಹೌದು ಕೇಂದ್ರ ಕೆಲ ತಿಂಗಳ ಹಿಂದೆಯೇ ಇಂಥದ್ದೊಂದು ಯೋಜನೆಗೆ ಕೈ ಹಾಕಿತ್ತು. ಹೌದು ಈ ಬಾರಿಯ ಈ ಕೇಂದ್ರದ ಹೊಸ ನಿಯಮ ಟ್ರಾಫಿಕ್ ಪೊಲೀಸರಿಗೆ ಸ್ವಲ್ಪ ಶಾಕ್ ನೀಡಿದ್ದಾರೆ ಜನಸಾಮನ್ಯರಿಗೇ ಸ್ವಲ್ಪ ಖುಷಿ ನೀಡಿದೆ. ವಾಹನಗಳ ದಾಖಲೆಗಳನ್ನು...Kannada News