ಇಂದು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿ ಮಾರ್ಪಾಡು ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ನಾವು ಯಾವುದೇ ಕೆಲಸವನ್ನ ಮಾಡಬೇಕು ಅಂದರು ಅದಕ್ಕೆ ಆಧಾರ್ ಕಾರ್ಡ್ ಕೊಡಲೇಬೇಕು ಅನ್ನುವ ಕಾಲ ಈಗ ಬಂದಿದೆ. ಇನ್ನು ಮೊದಲ ಭಾರಿಗೆ ಆಧಾರ್ ಕಾರ್ಡ್ ಮಾಡಿಸಿದಾಗ ಕೆಲವರ ಆಧಾರ್ ಕಾರ್ಡ್ ನಲ್ಲಿ ಹಲವು ತಪ್ಪುಗಳು ಕಂಡುಬಂದಿದ್ದವು, ಹೌದು ಆಧಾರ್ ಕಾರ್ಡ್ ನಲ್ಲಿ ಹೆಸರುಗಳ ತಪ್ಪು, ತಂದೆಯ ಹೆಸರು ತಪ್ಪು, ಜನ್ಮ ದಿನಾಂಕದ ತಪ್ಪು, ವಿಳಾಸದ ತಪ್ಪು ಹೀಗೆ ಹಲವು ರೀತಿಯ ತಪ್ಪುಗಳು ಆಧಾರ್ ಕಾರ್ಡ್ ನಲ್ಲಿ ಕಂಡು ಬಂದಿದ್ದು ನಿಮಗೆಲ್ಲ ಗೊತ್ತೇ ಇದೆ.

ಇನ್ನು ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಜನರು ಎಷ್ಟೇ ಭಾರಿ ಕಚೇರಿಗಳಿಗೆ ಭೇಟಿ ನೀಡಿದರು ಕೂಡ ಕೆಲವರ ಆಧಾರ್ ಕಾರ್ಡ್ ನಲ್ಲಿ ಇರುವ ತಪ್ಪುಗಳು ಇನ್ನು ಸರಿಹೋಗಿಲ್ಲ ಮತ್ತು ಅವರು ತಮ್ಮ ಆಧಾರ್ ಕಾರ್ಡ್ ನ್ನ ಸರಿ ಮಾಡಿಕೊಳ್ಳಲು ಪದೇ ಪದೇ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಈಗ ಎದುರಾಗಿದೆ. ಇನ್ನು ಈಗ ಆಧಾರ್ ಕಾರ್ಡ್ ಸಂಬಂಧಪಟ್ಟಂತೆ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟಂತೆ ಕೆಲವು ಬದಲಾವಣೆಗಳನ್ನ ಮಾಡಿದೆ, ಹಾಗಾದರೆ ಏನದು ಬದಲಾವಣೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಬದಲಾವಣೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

New update of Aadhar card

ಹೌದು ಸ್ನೇಹಿತರೆ ಜಾರಿಗೆ ಬಂದಿರುವ ಈ ಹೊಸ ನಿಯಮದ ಪ್ರಕಾರ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರುಗಳು ತಪ್ಪಾಗಿದ್ದರೆ ಕೇವಲ ಎರಡು ಭಾರಿ ಮಾತ್ರ ಅದನ್ನ ತಿದ್ದುಪಡಿ ಮಾಡಬಹುದು, ಇನ್ನು ಮೂರನೇ ಭಾರಿ ಕೂಡ ನಿಮ್ಮ ಹೆಸರನ್ನ ತಿದ್ದಪಡಿ ಮಾಡಿಕೊಳ್ಳಬೇಕು ಅಂದರೆ ಅದು ಸಾಧ್ಯವಿಲ್ಲ. ಇನ್ನು ಕೆಲವರ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ತಪ್ಪಾಗಿ ಬಂದಿರುತ್ತದೆ, ಇನ್ನು ಜನ್ಮ ದಿನಾಂಕ ತಪ್ಪಾಗಿ ಬಂದ ಆಧಾರ್ ಕಾರ್ಡ್ ನವರು ಕೇವಲ ಒಂದು ಭಾರಿ ಮಾತ್ರ ಅದನ್ನ ತಿದ್ದುಪಡಿ ಮಾಡಬಹುದಾಗಿದೆ, ಇನ್ನು ಎರಡನೇ ಭಾರಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಜನ್ಮ ದಿನಾಂಕವನ್ನ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.

ಇನ್ನು ಆಧಾರ್ ಕಾರ್ಡ್ ನಲ್ಲಿ ಮಹಿಳಾ ಅಥವಾ ಪುರುಷ ಮಾಹಿತಿ ತಪ್ಪಾಗಿದ್ದರೆ ಒಂದು ಭಾರಿ ಮಾತ್ರ ಲಿಂಗದ ಮಾಹಿತಿಯನ್ನ ತಿದ್ದುಪಡಿ ಮಾಡಬಹುದಾಗಿದೆ ಮತ್ತು ಎರಡನೆಯ ಭಾರಿ ಲಿಂಗದ ಕುರಿತ ಮಾಹಿತಿಯನ್ನ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಇನ್ನು ಜನ್ಮ ದಿನಾಂಕದ ಸಾಭೀತಿಗೆ ದಾಖಲೆ ಒದಗಿಸಿದ ಆಧಾರದಲ್ಲಿ ವೆರಿಫೈಡ್ ಎಂದು ನಮೂದಾಗಿದ್ದರೆ ಜನ್ಮ ದಿನಾಂಕವನ್ನ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಸ್ನೇಹಿತರೆ ನಿಮಗೆ ಆಧಾರ್ ಕಾರ್ಡ್ ಕುರಿತು ಯಾವುದೇ ರೀತಿಯ ಗೊಂದಲ ಇದ್ದರೆ ಅದನ್ನ ಪರಿಹರಿಸಿಕೊಳ್ಳಲು ಟ್ವಿಟರ್ ಖಾತೆಯನ್ನ ಆರಂಭಿಸಲಾಗಿದೆ ಮತ್ತು ಟ್ವಿಟರ್ ಖಾತೆ ಇಲ್ಲದವರು ಪ್ರಾಧಿಕಾರದ ಕಾಲ್ ಸೆಂಟರ್ ಗೆ ಕರೆ ಮಾಡಿ ತಮ್ಮ ಗೊಂದಲಗಳನ್ನ ಪರಿಹರಿಸಿಕೊಳ್ಳಬಹುದಾಗಿದೆ.

New update of Aadhar card

Please follow and like us:
error0
http://karnatakatoday.in/wp-content/uploads/2019/11/New-Update-of-aadhar-card-1024x576.jpghttp://karnatakatoday.in/wp-content/uploads/2019/11/New-Update-of-aadhar-card-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಇಂದು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿ ಮಾರ್ಪಾಡು ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ನಾವು ಯಾವುದೇ ಕೆಲಸವನ್ನ ಮಾಡಬೇಕು ಅಂದರು ಅದಕ್ಕೆ ಆಧಾರ್ ಕಾರ್ಡ್ ಕೊಡಲೇಬೇಕು ಅನ್ನುವ ಕಾಲ ಈಗ ಬಂದಿದೆ. ಇನ್ನು ಮೊದಲ ಭಾರಿಗೆ ಆಧಾರ್ ಕಾರ್ಡ್ ಮಾಡಿಸಿದಾಗ ಕೆಲವರ ಆಧಾರ್ ಕಾರ್ಡ್ ನಲ್ಲಿ ಹಲವು ತಪ್ಪುಗಳು ಕಂಡುಬಂದಿದ್ದವು, ಹೌದು ಆಧಾರ್ ಕಾರ್ಡ್ ನಲ್ಲಿ ಹೆಸರುಗಳ ತಪ್ಪು, ತಂದೆಯ ಹೆಸರು ತಪ್ಪು, ಜನ್ಮ ದಿನಾಂಕದ ತಪ್ಪು,...Film | Devotional | Cricket | Health | India