ಎಲ್ಲಾ ರೇಷನ್ ಕಾರ್ಡುಗಳ ಮೇಲೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನ ಜಾರಿಗೆ ತರುತ್ತಿದೆ, ಇನ್ನು ಈ ನಿಯಮಗಳು ಮುಂದಿನ ವರ್ಷ ಅಂದರೆ ಜನವರಿ 1 2020 ರಿಂದ ದೇಶಾದ್ಯಂತ ಜಾರಿಗೆ ತರಲಿದೆ ಎಂದು ತಿಳಿಸಲಾಗಿದೆ. ಇನ್ನು ಹೆಚ್ಚಾಗಿ ಹೊಸ ರೇಷನ್ ಕಾರ್ಡುಗಳನ್ನ ಮಾಡಿಸಿಕೊಳ್ಳುವವರು ಈ ನಿಯಮಗಳನ್ನ ಪಾಲನೆ ಮಾಡುವುದು ಅನಿವಾರ್ಯವಾಗಿದೆ, ಹೌದು ಸ್ನೇಹಿತರೆ ಇನ್ನುಮುಂದೆ ಹೊಸದಾಗಿ ರೇಷನ್ ಕಾರ್ಡುಗಳನ್ನ ಮಾಡಿಸಿಕೊಳ್ಳಲು ಜನರಲ್ಲಿ ಈ ಐದು ಅರ್ಹತೆ ಇರಲೇಬೇಕು ಮತ್ತು ಈ ಐದು ಅರ್ಹತೆಗೇಕು ಇಲ್ಲದೆ ಇದ್ದರೆ ಅವರಿಗೆ ರೇಷನ್ ಕಾರ್ಡುಗಳು ಸಿಗುವುದಿಲ್ಲ. ಹಾಗಾದರೆ ಆ ಐದು ಅರ್ಹತೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ದೇಶದಲ್ಲಿ ರೇಷನ್ ಕಾರ್ಡ್ ಇರುವವರಿಗೆ ಉಚಿತವಾಗಿ ಅಕ್ಕಿ, ಬೆಲೆ, ಗೋಧಿ ಮತ್ತು ಇತರೆ ಪಡಿತರಗಳನ್ನ ರೇಷನ್ ಅಂಗಡಿಗಳಲ್ಲಿ ನೀಡಲಾಗುತ್ತದೆ, ಇನ್ನು ತಮ್ಮ ಆರ್ಥಿಕ ಪರಿಸ್ಥಿತಿ ಚನ್ನಗಿದ್ದುವು ತಮ್ಮ ಬಾಕಿ ಕಾರು ಮತ್ತು ಒಳ್ಳೆಯ ವಾಹನಗಳು ಇದ್ದು ತಾವು ಶ್ರೀಮಂತರಾಗಿದ್ದರೂ ಕೂಡ ಸರ್ಕಾರಕ್ಕೆ ವಂಚನೆಯನ್ನ ಮಾಡಿ ರೇಷನ್ ದಾನ್ಯಗಳನ್ನ ಪಡೆಯುತ್ತಿದ್ದಾರೆ ಕೆಲವರು. ಇನ್ನು ಇದಕ್ಕೆ ಕಡಿವಾಣವನ್ನ ಹಾಕಲು ಎಷ್ಟೇ ಕ್ರಮಗಳನ್ನ ಜಾರಿಗೆ ತಂದರೂ ಕೂಡ ಸರ್ಕಾರದ ಕೈಯಲ್ಲಿ ಈ ಅಕ್ರಮಕ್ಕೆ ಕಡಿವಾಣವನ್ನ ಹಾಕಲು ಸಾಧ್ಯವಾಗುತ್ತಿಲ್ಲ ಮತ್ತು ದಿನ ಕಳೆದಂತೆ ದೇಶದಲ್ಲಿ ಅಕ್ರಮ ರೇಷನ್ ಕಾರ್ಡುಗಳ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಇನ್ನು ಈಗ ಈ ಅಕ್ರಮವನ್ನ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಹೊಸ ನಿಯಮವನ್ನ ಜಾರಿಗೆ ತಂದಿದೆ.

New update Ration card

ಹೇಗೆ ದೇಶದಲ್ಲಿ ಒನ್ ನೇಶನ್ ಒನ್ ಎಲೆಕ್ಷನ್ ಅನ್ನುತ್ತಾರೋ ಅದೇ ರೀತಿಯಲ್ಲಿ ಒಂದು ದೇಶ ಒಂದು ರೇಷನ್ ಕಾರ್ಡ್ ಅನ್ನುವ ಹೊಸ ಯೋಜನೆ ಜಾರಿಗೆ ಬರಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ದೇಶದಲ್ಲಿ ಇರುವ ಎಲ್ಲಾ ರಾಜ್ಯಗಳಿಗೂ ಒಂದೇ ರೀತಿಯ ರೇಷನ್ ಕಾರ್ಡುಗಳನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರವನ್ನ ಮಾಡಿದೆ, ಇನ್ನು ಈಗ ಬಂದಿರುವ ಮಾಹಿತಿಯ ಪ್ರಕಾರ ಯಾರ ಬಳಿ ನಾಲ್ಕು ಚಕ್ರದ ವಾಹನ ಇರುತ್ತದೆಯೋ ಮತ್ತು ಯಾರ ವಾರ್ಷಿಕ ಆದಾಯ 1.25 ಲಕ್ಷ ಕ್ಕಿಂತ ಜಾಸ್ತಿ ಇರುತ್ತದೆಯೋ ಅಂತಹ ಕುಟುಂಬಕ್ಕೆ ರೇಷನ್ ಕಾರ್ಡ್ ಇನ್ನುಮುಂದೆ ಸಿಗುವುದಿಲ್ಲ. ಇನ್ನು ಇನ್ನುಮುಂದೆ ಗ್ರಾಮೀಣ ಭಾಗದಲ್ಲಿ ತಿಂಗಳಿಗೆ 10 ಸಾವಿರಕ್ಕಿಂತ ಕಡಿಮೆ ಮತ್ತು ನಗರ ಪ್ರದೇಶಗಳಲ್ಲಿ 12.5 ಸಾವಿರಕ್ಕಿಂತ ಕಡಿಮೆ ಆದಾಯವನ್ನ ಹೊಂದಿದವರಿಗೆ ಮಾತ್ರ ಹೊಸ ರೇಷನ್ ಕಾರ್ಡುಗಳನ್ನ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಅಧಿಸೂಚನೆಯನ್ನ ಹೊರಡಿಸಿದೆ.

ಹಣ ಇದ್ದವರು ಆರ್ಥಿಕವಾಗಿ ಚೆನ್ನಾಗಿದ್ದರೂ ಕೂಡ ಸರ್ಕಾರದಿಂದ ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನ ಪಡೆಯುತ್ತಿದ್ದರು, ಆದರೆ ಇನ್ನುಮುಂದೆ ಬರುವ ಹೊಸ ರೇಷನ್ ಕಾರ್ಡಿನಿಂದ ಸರ್ಕಾರಕ್ಕೆ 20 ಸಾವಿರ ಕೋಟಿಯಷ್ಟು ಹಣ ಉಳಿಯಲಿದೆ ಆಹಾರ ಸಚಿವರಾದ ರಾಮ್ ವಿಲಾಸ್ ಪಾಸ್ವಾನ್ ಅವರು ಹೇಳಿದ್ದಾರೆ. ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಈ ಹೊಸ ನಿಯಮ ತುಂಬಾ ಅನುಕೂಲವಾಗಲಿದೆ. ದೇಶದಲ್ಲಿ ಪಡಿತರ ದಾನ್ಯಗಳ ವಿತರಣೆಯನ್ನ ನಡೆಯುತ್ತಿರುವ ಅಕ್ರಮಗಳು ಇನ್ನಾದರೂ ಸರಿಹೋಗಲಿ ಅನ್ನುವುದು ನಮ್ಮ ಆಶಯವಾಗಿದೆ ಸ್ನೇಹಿತರೆ ಈ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಡಬರಿಗೆ ತಲುಪಿಸಿ.

New update Ration card

Please follow and like us:
error0
http://karnatakatoday.in/wp-content/uploads/2019/11/5-rules-of-ration-card-1024x576.jpghttp://karnatakatoday.in/wp-content/uploads/2019/11/5-rules-of-ration-card-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಎಲ್ಲಾ ರೇಷನ್ ಕಾರ್ಡುಗಳ ಮೇಲೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನ ಜಾರಿಗೆ ತರುತ್ತಿದೆ, ಇನ್ನು ಈ ನಿಯಮಗಳು ಮುಂದಿನ ವರ್ಷ ಅಂದರೆ ಜನವರಿ 1 2020 ರಿಂದ ದೇಶಾದ್ಯಂತ ಜಾರಿಗೆ ತರಲಿದೆ ಎಂದು ತಿಳಿಸಲಾಗಿದೆ. ಇನ್ನು ಹೆಚ್ಚಾಗಿ ಹೊಸ ರೇಷನ್ ಕಾರ್ಡುಗಳನ್ನ ಮಾಡಿಸಿಕೊಳ್ಳುವವರು ಈ ನಿಯಮಗಳನ್ನ ಪಾಲನೆ ಮಾಡುವುದು ಅನಿವಾರ್ಯವಾಗಿದೆ, ಹೌದು ಸ್ನೇಹಿತರೆ ಇನ್ನುಮುಂದೆ ಹೊಸದಾಗಿ ರೇಷನ್ ಕಾರ್ಡುಗಳನ್ನ ಮಾಡಿಸಿಕೊಳ್ಳಲು ಜನರಲ್ಲಿ ಈ ಐದು ಅರ್ಹತೆ ಇರಲೇಬೇಕು ಮತ್ತು...Film | Devotional | Cricket | Health | India