ಸಂಪತ್ತಿನ ಅದಿಧೇವತೆ ಲಕ್ಷ್ಮೀ ಮಾತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಅಷ್ಟ ಐಶ್ವರ್ಯ ನೆಲೆಯಾಗುತ್ತದೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಮಾತಾಗಿದೆ. ಧನ ಕನಕವನ್ನು ನೀಡುವ ಲಕ್ಷ್ಮೀ ಮಾತೆಯು ಮನೆಯಲ್ಲಿ ಸಕಲ ಐಶ್ವರ್ಯವನ್ನು ನೀಡುವಾಕೆಯಾಗಿದ್ದು ಸರಳ ಪೂಜೆಗೆ ಒಲಿದು ಬೇಡಿದ್ದನ್ನು ನೀಡುವ ಅಭಯದಾಕೆಯಾಗಿದ್ದಾರೆ. ಯಥೇಚ್ಛವಾದ ಹಣ ಮತ್ತು ಸಂಪತ್ತನ್ನು ಸಂಪಾದಿಸುವ ಆಲೋಚನೆ ಇದ್ದವರು ತಾಯಿ ಲಕ್ಷ್ಮಿಯನ್ನು ವಿಶೇಷವಾಗಿ ಆರಾಧಿಸುತ್ತಾರೆ.ಇನ್ನು 2019 ಈಗಾಗಲೇ ಮುಗಿಯಲಿದ್ದು 2020 ರ ಆರಂಭದಲ್ಲೇ ಕೆಲವು ರಾಶಿಗಳಿಗೆ ರಾಜಯೋಗ ಆರಂಭವಾಗಲಿದೆ. ಈ ರಾಶಿಗಳು ಮಾಡುವ ಎಲ್ಲಾ ಕಾರ್ಯದ ಮೇಲೆ ಕುಬೇರದೇವನ ಆಶೀರ್ವಾದ ಕೂಡ ಇರಲಿದ್ದು ಬದುಕಿನಲ್ಲಿ ಈ ಸಲ ಏನನ್ನಾದರೂ ಸಾಧಿಸುವ ಸೂಚನೆ ಈ ರಾಶಿಗಳಿಗಿವೆ.

ಲಕ್ಷ್ಮೀ ದೇವಿ ನೆಲೆಸಿರುವ ಮನೆಯಲ್ಲಿ ಅಷ್ಟೈಶ್ವರ್ಯಗಳು ನೆಲೆಸಿರುತ್ತವೆ ಎಂಬ ನಂಬಿಕೆ ನಮ್ಮ ಪುರಾಣಗಳಲ್ಲಿ ವ್ಯಕ್ತವಾಗಿದೆ. ಆದರೆ ಲಕ್ಷ್ಮೀ ಚಂಚಲೆ, ನಿಂತಲ್ಲಿ ನಿಲ್ಲಲಾರಳು. ತನ್ನನ್ನು ಆರಾಧಿಸುವ ಸ್ಥಳ ಮತ್ತು ವ್ಯಕ್ತಿಗಳನ್ನು ಆಕೆ ಹುಡುಕಿಕೊಂಡು ಹೋಗುತ್ತಾ ಇರುತ್ತಾಳೆ ಎಂಬ ಮಾತಿದೆ. ಹಾಗಾಗಿ ಇಂದು ತಿಳಿಸುವ ಎಲ್ಲಾ ರಾಶಿಯ ವ್ಯಕ್ತಿಗಳು ಕೂಡ ಬಡವರಿಗೆ ಹಾಗು ದುರ್ಬಲರಿಗೆ ಸಹಾಯ ಮಾಡುವುದರಿಂದ ಯೋಗ ಹೆಚ್ಚಿಸಿಕೊಳ್ಳಬಹುದು.

ಮೊದಲೆನೆಯದಾಗಿ ಕರ್ಕ ರಾಶಿಗೆ ರಾಶಿ ಭವಿಷ್ಯ 2020 ರ ಪ್ರಕಾರ, ಕರ್ಕ ರಾಶಿಯವರು ಆರ್ಥಿಕವಾಗಿ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣುತ್ತಾರೆ. ಆದಾಗ್ಯೂ, ನೀವು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕು. ಏಕೆಂದರೆ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರು ಬಡತಿ ಹೊಂದುವ ಸಾಧ್ಯತೆಗಳಿವೆ. ಫೆಬ್ರವರಿಯಿಂದ ಮಾರ್ಚ್ ಮತ್ತು ನವಂಬರ್‍ ನಿಂದ ಡಿಸೆಂಬರ್‍ ವರೆಗೆ, ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮಗೆ ಒಳ್ಳೆಯ ಸುದ್ದಿ ದೊರೆಯುತ್ತದೆ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ ಆದರೂ ನೀವು ಹಣ ಕಾಸಿನ ಸಮಸ್ಯೆಗಳನ್ನು ಹೊಂದಿರಬಹುದು. ಕುಟುಂಬದ ಸದಸ್ಯರೊಂದಿಗೆ ನೀವು ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಮಾಡಬಹುದು. ನಿಮ್ಮ ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಅವರಿಗೆ ಅಗತ್ಯವಿರುವಾಗ ಸಹಾಯ ಮಾಡಿ.

ಮಕರ ರಾಶಿಗೆ ಹೊಸ ವರುಷ ನಿಮ್ಮಲ್ಲಿ ಸಾಕಷ್ಟು ಉತ್ಸಾಹ ಮತ್ತು ಹುಮ್ಮಸ್ಸು ತುಂಬಿಕೊ‌ಳ್ಳುತ್ತದೆ. ಈ ವರ್ಷ, ನಿಮ್ಮ ಔದ್ಯೋಗಿಕ ಜೀವನದಲ್ಲಿ ಉನ್ನತಿ ಸಾಧಿಸುತ್ತೀರಿ. ನಿಮ್ಮ ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ ಮತ್ತು ನಿಮ್ಮ ನಿರ್ಧಾರಗಳಿಂದಾಗಿ ನಿಮಗೆ ಅತ್ಯುತ್ತಮ ಫಲಿತಾಂಶಗಳು ದೊರೆಯುತ್ತವೆ. ನಿಮ್ಮ ಅದ್ಭುತ ನಿರ್ಧಾರಗಳ ಮೂಲಕ ನೀವು ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಶ್ರೇಷ್ಠವಾಗಿರುತ್ತದೆ. ಈ ವರ್ಷ ನಿಮಗೆ ಆರ್ಥಿಕ ಲಾಭಗಳು ದೊರೆಯುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಬೇಕಾದಷ್ಟು ಹಣ ದೊರೆಯತ್ತದೆ. ಅಲ್ಲದೇ ಇಡೀ ವರ್ಷ ಸಾಕಷ್ಟು ಹಣ ಗಳಿಸುತ್ತೀರಿ. ಮಾರ್ಚ್ ನಂತರ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.


ಮೇಷ ರಾಶಿಗೆ ಈ ನವ ವರ್ಷ ನೀವು ನಿಮ್ಮ ಸ್ವಂತ ಕೆಲಸವನ್ನು ಪ್ರಾರಂಭಿಸಬಹುದು. ಅತಿಯಾದ ಕೆಲಸದ ಒತ್ತಡದಿಂದ ನೀವು ಆಯಾಸಗೊಳ್ಳಬಹುದು. ಇದು ನಿಮ್ಮ ಕೆಲಸ ಮತ್ತು ದೇಹದ ಮೇಲೆ ಪರಿಣಾಮ ಬೀರಬಹುದು. ಈ ವರ್ಷ ನೀವು ನಿಮ್ಮ ಆಸೆಗಳನ್ನು ಈಡೇರಿಸಬಹುದು. ಕುಟುಂಬದಲ್ಲಿ ಆಸ್ತಿಗೆ ಸಂಬಂಧಿಸಿದ ವಿಷಯಗಳಿಂದ ವಿವಾದಗಳು ಉಂಟಾಗಬಬಹುದು. ನೀವು ನಿಮ್ಮ ತಿಳುವಳಿಕೆಯಿಂದ ಆ ತೊಂದರೆಗಳಿಂದ ಹೊರಬರುತ್ತೀರಿ.

Please follow and like us:
error0
http://karnatakatoday.in/wp-content/uploads/2019/12/2020-new-1024x576.jpghttp://karnatakatoday.in/wp-content/uploads/2019/12/2020-new-150x104.jpgKarnataka Trendingಅಂಕಣಜ್ಯೋತಿಷ್ಯಸಂಪತ್ತಿನ ಅದಿಧೇವತೆ ಲಕ್ಷ್ಮೀ ಮಾತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಅಷ್ಟ ಐಶ್ವರ್ಯ ನೆಲೆಯಾಗುತ್ತದೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಮಾತಾಗಿದೆ. ಧನ ಕನಕವನ್ನು ನೀಡುವ ಲಕ್ಷ್ಮೀ ಮಾತೆಯು ಮನೆಯಲ್ಲಿ ಸಕಲ ಐಶ್ವರ್ಯವನ್ನು ನೀಡುವಾಕೆಯಾಗಿದ್ದು ಸರಳ ಪೂಜೆಗೆ ಒಲಿದು ಬೇಡಿದ್ದನ್ನು ನೀಡುವ ಅಭಯದಾಕೆಯಾಗಿದ್ದಾರೆ. ಯಥೇಚ್ಛವಾದ ಹಣ ಮತ್ತು ಸಂಪತ್ತನ್ನು ಸಂಪಾದಿಸುವ ಆಲೋಚನೆ ಇದ್ದವರು ತಾಯಿ ಲಕ್ಷ್ಮಿಯನ್ನು ವಿಶೇಷವಾಗಿ ಆರಾಧಿಸುತ್ತಾರೆ.ಇನ್ನು 2019 ಈಗಾಗಲೇ ಮುಗಿಯಲಿದ್ದು 2020 ರ ಆರಂಭದಲ್ಲೇ ಕೆಲವು ರಾಶಿಗಳಿಗೆ ರಾಜಯೋಗ...Film | Devotional | Cricket | Health | India