SBI Bank rules updates

ಸ್ಟೇಟ್ ಬ್ಯಾಂಕ್ ಈಗ ದೇಶದ ಜನತೆಗೆ ಅತಿದೊಡ್ಡ ಶಾಕ್ ಕೊಡಲು ಮುಂದಾಗಿದೆ ಎನ್ನಬಹುದು, ಹೌದು ಇನ್ನು ಮುಂದೆ ನಿಮಗೆ ಬ್ಯಾಂಕ್ ಕೆಲವೊಂದು ಸೇವೆಗಳನ್ನು ಕಡಿತಗೊಳಿಸಲು ಮುಂದಾಗಿದೆ, ಈ ಮೂಲಕ ಇನ್ನುಮುಂದೆ ಬ್ಯಾಂಕಿಗೆ ಹಣ ಹಾಕಲು ಹೋದವರಿಗೆ ಕೆಲವೊಂದು ತೊಂದರೆಗಳನ್ನು ಎದುರಿಸಲೇಬೇಕಾಗುತ್ತದೆ.

ಹಾಗಿದ್ದರೆ ಯಾವೆಲ್ಲ ಹೊಸ ನಿಯಮಗಳನ್ನು ಸ್ಟೇಟ್ ಬ್ಯಾಂಕ್ ಜಾರಿಗೆ ತಂದಿದೆ ಎಂದು ನೋಡೋಣ ಬನ್ನಿ, ಮತ್ತು ಬದಲಾದ ಈ ಹೊಸ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇದೆ ಅಕ್ಟೊಬರ್ ಒಂದನೇ ತಾರೀಕಿನಿಂದ ಜಾರಿಗೆ ಬರುವಂತೆ ಸ್ಟೇಟ್ ಬ್ಯಾಂಕ್ ತನ್ನ ಸೇವಾ ಶುಲ್ಕ ಹಾಗು ಟ್ರಾನ್ಸಾಕ್ಷನ್ ಮೇಲೆ ನಿಯಮಾವಳಿ ಜಾರಿ ಮಾಡಿದೆ, ಇದರಲ್ಲಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವುದು, ವಾಪಸಾತಿ, ಚೆಕ್ ಬಳಕೆ, ಎಟಿಎಂ ವಹಿವಾಟಿಗೆ ಸಂಬಂಧಿಸಿದ ಸೇವಾ ಶುಲ್ಕಗಳನ್ನು ಒಳಗೊಂಡಿದೆ.

SBI Bank rules updates

ಬ್ಯಾಂಕಿನ ಸುತ್ತೋಲೆಯ ಪ್ರಕಾರ ಅಕ್ಟೋಬರ್ 1 ರಿಂದ ನೀವು ಉಚಿತ ಹಣವನ್ನು ತಿಂಗಳಲ್ಲಿ ಮೂರು ಬಾರಿ ಮಾತ್ರ ಠೇವಣಿ ಮಾಡಬಹುದು ಮತ್ತು ಇದರ ನಂತರ ನೀವು 100 ರೂಪಾಯಿಗಳನ್ನು ಸಹ ನಿಮ್ಮ ಖಾತೆಗೆ ಜಮಾ ಮಾಡಿದರೆ ನೀವು 50 ರೂಪಾಯಿ (ಹೆಚ್ಚುವರಿ ಜಿಎಸ್ಟಿ) ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಖಾತೆಯಲ್ಲಿ ಕೇವಲ 3 ಬಾರಿ ಮಾತ್ರ ಉಚಿತವಾಗಿ ಜಮಾ ಮಾಡಲು ನಿಮಗೆ ಸಾಧ್ಯವಾಗುತ್ತದೆ, ಇನ್ನು ಚೆಕ್ ವಿಷಯಕ್ಕೆ ಬಂದರೆ ಎಸ್‌ಬಿಐ ಚೆಕ್ ರಿಟರ್ನ್‌ಗಾಗಿ ನಿಯಮಗಳನ್ನು ಬಿಗಿಗೊಳಿಸಿದೆ.

ಹೌದು ಸ್ನೇಹಿತರೆ ಬ್ಯಾಂಕಿನ ಸುತ್ತೋಲೆಯ ಪ್ರಕಾರ ಯಾವುದೇ ತಾಂತ್ರಿಕ ಕಾರಣಗಳಿಂದಾಗಿ (ಬೌನ್ಸ್ ಹೊರತುಪಡಿಸಿ) ಅಕ್ಟೋಬರ್ 1 ರ ನಂತರ ಚೆಕ್ ಅನ್ನು ಹಿಂದಿರುಗಿಸಿದರೆ ಚೆಕ್ ನೀಡುವವರು 150 ರೂ ಮತ್ತು ಜಿಎಸ್ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ದೇಶದ ಆರು ಮೆಟ್ರೋ ನಗರಗಳಾದ ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾ, ಬೆಂಗಳೂರು ಮತ್ತು ಹೈದರಾಬಾದ್‌ನ ಬ್ಯಾಂಕಿನ ಎಟಿಎಂಗಳಲ್ಲಿ ಜನರು ಪ್ರತಿ ತಿಂಗಳು 10 ಟ್ರಾನ್ಸಾಕ್ಷನ್ ನಡೆಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಸುತ್ತೋಲೆ ಹೊರಡಿಸಿದೆ.

SBI Bank rules updates

ಇನ್ನು ನೀವು ಇತರ ನಗರಗಳಲ್ಲಿನ ಎಸ್‌ಬಿಐ ಎಟಿಎಂಗಳಲ್ಲಿ 12 ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ, ಒಬ್ಬ ವ್ಯಕ್ತಿಯು ಮತ್ತೊಂದು ಬ್ಯಾಂಕಿನ ಎಟಿಎಂ ಬಳಸಿದರೆ ಅವನಿಗೆ ತಿಂಗಳಲ್ಲಿ ಐದು ವಹಿವಾಟು ನಡೆಸುವ ಸೌಲಭ್ಯ ಸಿಗುತ್ತದೆ. ಕನಿಷ್ಠ ಸರಾಸರಿ 25 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಅಕೌಂಟ್ ನಲ್ಲಿ ಇಟ್ಟವರಿಗೆ ಬ್ಯಾಂಕ್ ಎಟಿಎಂ ಸೌಲಭ್ಯವನ್ನು ಎಷ್ಟು ಬೇಕಾದರೂ ಬಳಸಿಕೊಳ್ಳಬಹುದು.

ಬ್ಯಾಂಕ್ ಶಾಖೆಗೆ ಹೋಗಿ NEFT ಮತ್ತು RTGS ಮಾಡುವುದು ಕೂಡ ದುಬಾರಿಯಾಗಲಿದೆ, ನೆಟ್‌ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಯೋನೊ ಆಪ್ ಮೂಲಕ ಇಂತಹ ವಹಿವಾಟುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಇನ್ನು ಬ್ಯಾಂಕುಗಳ ಈ ನಿಯಮ ಪರಿಷ್ಕರಣೆ ಜನ ಸಾಮಾನ್ಯರಿಗೆ ಸ್ವಲ್ಪ ಮಟ್ಟಿಗೆ ಹೊರೆಯಾಗಲಿದೆ ಎನ್ನಬಹುದು, ಏಕೆಂದರೆ ಇನ್ನುಮುಂದೆ ನೀವು ಬೇಕು ಬೇಕು ಎಂದಾಗ ಬ್ಯಾಂಕಿಗೆ ಹೋಗಿ ಹಣ ಹಾಕುವಂತಿಲ್ಲ ಕೇವಲ ಮೂರು ಬಾರಿ ಮಾತ್ರ ಉಚಿತ ಸೇವೆ ಹಣ ಜಮೆ ಮಾಡಲು ನೀಡಲಾಗಿದೆ, ಸಾಧ್ಯವಾದಷ್ಟು ನೀವು ಕ್ಯಾಶ್ ಲೆಸ್ ವ್ಯವಹಾರ ಆರಂಭಿಸಿದರೆ ಈ ಯಾವ ತೊಂದರೆ ಕೂಡ ನಿಮಗಿರುವುದಿಲ್ಲ.

SBI Bank rules updates

Please follow and like us:
error0
http://karnatakatoday.in/wp-content/uploads/2019/09/SBI-Rules-update-1024x576.jpghttp://karnatakatoday.in/wp-content/uploads/2019/09/SBI-Rules-update-150x104.jpgKarnataka Trendingಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಸ್ಟೇಟ್ ಬ್ಯಾಂಕ್ ಈಗ ದೇಶದ ಜನತೆಗೆ ಅತಿದೊಡ್ಡ ಶಾಕ್ ಕೊಡಲು ಮುಂದಾಗಿದೆ ಎನ್ನಬಹುದು, ಹೌದು ಇನ್ನು ಮುಂದೆ ನಿಮಗೆ ಬ್ಯಾಂಕ್ ಕೆಲವೊಂದು ಸೇವೆಗಳನ್ನು ಕಡಿತಗೊಳಿಸಲು ಮುಂದಾಗಿದೆ, ಈ ಮೂಲಕ ಇನ್ನುಮುಂದೆ ಬ್ಯಾಂಕಿಗೆ ಹಣ ಹಾಕಲು ಹೋದವರಿಗೆ ಕೆಲವೊಂದು ತೊಂದರೆಗಳನ್ನು ಎದುರಿಸಲೇಬೇಕಾಗುತ್ತದೆ. ಹಾಗಿದ್ದರೆ ಯಾವೆಲ್ಲ ಹೊಸ ನಿಯಮಗಳನ್ನು ಸ್ಟೇಟ್ ಬ್ಯಾಂಕ್ ಜಾರಿಗೆ ತಂದಿದೆ ಎಂದು ನೋಡೋಣ ಬನ್ನಿ, ಮತ್ತು ಬದಲಾದ ಈ ಹೊಸ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ....Film | Devotional | Cricket | Health | India