ರಾಶಿ ಚಕ್ರದ ಬದಲಾವಣೆ ಮಾನವನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀಳುವುದರಲ್ಲಿ ಸಂಶಯವಿಲ್ಲ. ಗ್ರಹಗಳ ಸ್ಥಿತಿ ನಕ್ಷತ್ರಪುಂಜಗಳ ಲೆಕ್ಕಾಚಾರದ ನಂತರ ಮಾನವ ಜೀವನದ ಮೇಲೆ ಅವುಗಳ ಪರಿಣಾಮಗಳು ಕಂಡುಬರುತ್ತವೆ. ಸಮಾಜದ ಒಂದು ದೊಡ್ಡ ಭಾಗವು ಪ್ರತಿದಿನ ತನ್ನ ಜಾತಕವನ್ನು ಅಂತರ್ಜಾಲ, ಪೇಪರ್, ಹೀಗೆ ಎಲ್ಲ ಕಡೆಗಳಲ್ಲಿ ನೋಡುತ್ತಾರೆ. ಇನ್ನು ರಾಶಿ ಮಂಡಲದಲ್ಲಿ ಆಗುತ್ತಿರುವ ಕೆಲ ಮಹತ್ವದ ಸ್ಥಾನಪಲ್ಲಟ ಕೆಲ ರಾಶಿಗಳಿಗೆ ಬಹುದೊಡ್ಡ ಯೋಗ ತಂದಿಟ್ಟಿದೆ. ಕಾಲಭೈರವನ ಕ್ರಪೆ ಮುಂದಿನ ಶನಿವಾರದವರೆಗೂ ಕೆಲ ರಾಶಿಗಳ ಮೇಲಾಗಲಿದೆ. ಹೌದು ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ.

ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ, ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಮುಂದಿನ ಶನಿವಾರದವರೆಗೂ ಈ ಎಲ್ಲ ಫಲಗಳನ್ನು ಕೆಲವು ರಾಶಿಗಳು ಪಡೆಯಲಿದ್ದಾರೆ, ಹಾಗಿದ್ದರೆ ಈ ರಾಶಿಯವರ ಜೀವನದಲ್ಲಿ ಏನಾಗಲಿದೆ ಹಾಗು ಮುಂದಿನ ದಿನಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕೆಂದು ತಿಳಿಸುತ್ತೇವೆ ಕೇಳಿ.

News Lord kalabhirava

ಮಕರ ರಾಶಿಯವರ ಮನೆಯಲ್ಲಿ ಒಂದು ಮಂಗಳಕರ ಸಮಾರಂಭ ನಡೆಯಬಹುದು. ಇದು ಮನೆಯಲ್ಲಿನ ಸಂಭ್ರಮವನ್ನು ಆನಂದಿಸುವ ಸಮಯ. ಆದಾಗ್ಯೂ ಕುಟುಂಬದ ಕೆಲವು ಸದಸ್ಯರ ಅಸಭ್ಯ ವರ್ತನೆ ನಿಮಗೆ ನೋವುಂಟುಮಾಡಬಹುದು, ಆದರೆ ನೀವದನ್ನು ನಿರ್ಲಕ್ಷಿಸುವುದು ಒಳ್ಳೆಯದು. ದಾಂಪತ್ಯ ಜೇವನದಲ್ಲಿಯೂ ಸಂತೋಷವನ್ನು ನೋಡಲಾಗುತ್ತದೆ ಮತ್ತು ನಿಮ್ಮ ಮಕ್ಕಳು ಸಹ ಕೆಲಸದ ಸ್ಥಳದಲ್ಲಿ ಬಡ್ತಿ ಮತ್ತು ಪ್ರಗತಿಯನ್ನು ಹೊಂದುತ್ತಾರೆ. ಆದಾಗ್ಯೂ ಆರೋಗ್ಯದ ದೃಷ್ಟಿಯಿಂದ ಈ ಸಮಯ ಕೆಲವು ತೊಂದರೆ ಬರಬಹುದು. ಮನೆ-ಕುಟುಂಬದಲ್ಲಿ ಒಬ್ಬ ಸದಸ್ಯರ ಅರೋಗ್ಯ ಕೆಟ್ಟದಾಗಿದ್ದರೆ, ಈ ಸಮಯದಲ್ಲಿ ಅದರಲ್ಲಿ ಸುಧಾರಣೆ ಬರುತ್ತದೆ, ಇದರಿಂದ ಮನೆಯ ವಾತಾವರಣವು ಹದಗೆಡಬಹುದು, ಇದರೊಂದಿಗೆ ಯಾವುದೇ ಕಾರಣದಿಂದಾಗಿ ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗಬಹುದು.

ಕುಂಭ ರಾಶಿಯವರಿಗೆ ನಿಮ್ಮ ವಿಚಾರದಲ್ಲಿ ಕೆಲವರು ನೇರವಾಗಿಯೇ ಕಿರುಕುಳ ಕೊಡುತ್ತಾರೆ. ಆದರೆ ದೈವಕೃಪೆಯಿಂದ ಅವರೆಲ್ಲರ ಕಿರುಕುಳ ನಿಮಗೆ ಪುಷ್ಪವೃಷ್ಟಿಯನ್ನು ಮಾಡುವಂತೆ ಆಗುತ್ತದೆ. ಧೈರ್ಯದಿಂದಿರಿ, ಕುಟುಂಬದ ಎಲ್ಲ ಸದಸ್ಯರೊಂದಿಗೆ ಪರಸ್ಪರ ಸ್ನೇಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಎಲ್ಲರನ್ನು ನಿಮ್ಮ ನಂಬಿಕೆಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿ. ಈ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಒತ್ತಡದ ಸಂದರ್ಭಗಳು ಉದ್ಭವಿಸಬಹುದು. ಯಾರೋ ಬೇರೆ ವ್ಯಕ್ತಿಯ ಕಾರಣದಿಂದಾಗಿ ನಿಮ್ಮ ಪ್ರೇಮಿ/ ಪ್ರೇಮಿಕರ ನಡುವೆ ಉದ್ವಿಗ್ನ ವಾತಾವರಣವನ್ನು ಉಂಟುಮಾಡಬಹುದು.

ಈ ಕಾರಣದಿಂದಾಗಿ ಪರಸ್ಪರರಲ್ಲಿ ಅಪನಂಬಿಕೆಯ ಭಾವನೆ ಉಂಟಾಗುತ್ತದೆ ಆದ್ದರಿಂದ ಇನ್ನೊಬ್ಬ ವ್ಯಕ್ತಿಯ ಮಾತುಗಳನ್ನು ನಂಬದೇ ನಿಮ್ಮ ಮೇಲೆ ನೀವು ನಂಬಿಕೆಯನ್ನು ಇಡೀ. ಮೀನಾ ರಾಶಿಯವರ ಕೆಲಸ ಕಾರ್ಯಗಳು ಜಯ ತರುತ್ತದೆಯಾದರೂ ಖರ್ಚಿಗೂ ಅನೇಕ ದಾರಿಗಳಿವೆ. ಗಣಪತಿ ಆರಾಧನೆಯಿಂದ ವ್ಯರ್ಥ ಕಸರತ್ತುಗಳಿಗೆ ಅಡೆತಡೆಗಳು ಬೀಳುತ್ತವೆ. ಸ್ವಯಂ ಉದ್ಯೋಗಿಗಳು, ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ಫಲವಿದೆ. ಈ ರಾಶಿಗಳು ಗಣೇಶನನ್ನು ಪೂಜಿಸಿ. ಬುಧವಾರದ ದಿನ ಹಸಿರು ವಸ್ತುಗಳ ಪೂಜೆ ಮಾಡಿ, ಶಿವನ ಗುಡಿಗೆ ಬಿಲ್ವಪತ್ರೆ ಎಲೆಯನ್ನು ಅರ್ಪಿಸಿ, ನೊಂದವರ ಕಣ್ಣೀರು ಒರೆಸಿದರೆ ಭಗವಂತನ ಕ್ರಪೆ ಮತ್ತಷ್ಟು ಸಾಧ್ಯ.

News Lord kalabhirava

 

Please follow and like us:
error0
http://karnatakatoday.in/wp-content/uploads/2019/11/kalabhairava-1024x576.jpghttp://karnatakatoday.in/wp-content/uploads/2019/11/kalabhairava-150x104.jpgKarnataka Trendingಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲರಾಶಿ ಚಕ್ರದ ಬದಲಾವಣೆ ಮಾನವನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀಳುವುದರಲ್ಲಿ ಸಂಶಯವಿಲ್ಲ. ಗ್ರಹಗಳ ಸ್ಥಿತಿ ನಕ್ಷತ್ರಪುಂಜಗಳ ಲೆಕ್ಕಾಚಾರದ ನಂತರ ಮಾನವ ಜೀವನದ ಮೇಲೆ ಅವುಗಳ ಪರಿಣಾಮಗಳು ಕಂಡುಬರುತ್ತವೆ. ಸಮಾಜದ ಒಂದು ದೊಡ್ಡ ಭಾಗವು ಪ್ರತಿದಿನ ತನ್ನ ಜಾತಕವನ್ನು ಅಂತರ್ಜಾಲ, ಪೇಪರ್, ಹೀಗೆ ಎಲ್ಲ ಕಡೆಗಳಲ್ಲಿ ನೋಡುತ್ತಾರೆ. ಇನ್ನು ರಾಶಿ ಮಂಡಲದಲ್ಲಿ ಆಗುತ್ತಿರುವ ಕೆಲ ಮಹತ್ವದ ಸ್ಥಾನಪಲ್ಲಟ ಕೆಲ ರಾಶಿಗಳಿಗೆ ಬಹುದೊಡ್ಡ ಯೋಗ ತಂದಿಟ್ಟಿದೆ. ಕಾಲಭೈರವನ ಕ್ರಪೆ ಮುಂದಿನ...Film | Devotional | Cricket | Health | India