ತಂದೆ ದೊಡ್ಡ ಕಂಟ್ರಾಕ್ಟರ್ ಆದ ಕಾರಣ ತಂದೆ ಹಾದಿಯಲ್ಲೇ ಬರಲು ಸಿವಿಲ್ ಇಂಜಿನಿಯರಿಗೆ ಓದಿದರೂ ನಟ ರಘುವೀರ್, ಇನ್ನು ನಟ ಅಂಬರೀಷ್ ಅವರ ಮನೆಯನ್ನ ಕಟ್ಟುವ ಕಾಂಟ್ರಾಕ್ಟ್ ರಘುವೀರ್ ಅವರ ತಂದೆಗೆ ಸಿಕ್ಕಿತ್ತು. ಇನ್ನು ಅಪ್ಪ ಕೆಲಸ ಮಾಡುವ ಸ್ಥಳಗಳಿಗೆ ಹೋಗುತ್ತಿದ್ದ ನಟ ರಘುವೀರ್ ಅಲ್ಲಿ ಅಂಬರೀಷ್ ಅವರ ಗತ್ತು ಮತ್ತು ಸ್ಟೈಲ್ ಗಳನ್ನ ನೋಡಿ ನಾನು ಕೂಡ ಒಬ್ಬ ಸ್ಟಾರ್ ನಟನಾಗಬೇಕು ಅಂದುಕೊಂಡರು ನಟ ರಘುವೀರ್. ಇನ್ನು ಮಗನ ಆಸೆಗೆ ಒಪ್ಪಿದ ಅಪ್ಪ ಮಗನನ್ನ ಚನೈ ಗೆ ಕಳುಹಿಸಿ ಅಲ್ಲಿ ನಟನೆ, ಡಾನ್ಸ್ ಹೀಗೆ ಎಲ್ಲವನ್ನ ಕಲಿಯುವಂತೆ ಹೇಳಿದರು, ಇನ್ನು ಅಜಯ್ ವಿಜಯ್ ಅನ್ನುವ 30 ಲಕ್ಷ ಬಂಡವಾಳ ಹಾಕಿದ ರಘುವೀರ್ ಅವರ ತಂದೆ ಮಗನನ್ನ ಹೀರೋ ಆಗಿ ಮಾಡಿದರು, ಆದರೆ ಆ ಚಿತ್ರ ಅಷ್ಟೊಂದು ಸಕ್ಸಸ್ ಆಗಲಿಲ್ಲ. ಇನ್ನು ನಂತರ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಹೀರೋ ಆಗಿ ನಟನೆ ಮಾಡಿದರು ರಘುವೀರ್, ಇನ್ನು ಚಿತ್ರವನ್ನ ನೋಡಿದ ಕೆಲವರು ನಗಾಡಿದರು ಮತ್ತು ಈ ಚಿತ್ರದ ಮೈನಸ್ ಪಾಯಿಂಟ್ ರಘುವೀರ್ ಎಂದು ಹೇಳಿದರು ಮತ್ತು ಚಿತ್ರವನ್ನ ಖರೀದಿ ಮಾಡಲು ಯಾವ ವಿತರಕರು ಕೂಡ ಮುಂದೆ ಬರಲಿಲ್ಲ.

ಇನ್ನು ಈ ಸಮಯದಲ್ಲಿ ಮುಂದೆ ಬಂದ ರಾಮು ಅವರ ಚಿತ್ರವನ್ನ ಖರೀದಿ ಮಾಡಿ ಬಿಡುಗಡೆ ಮಾಡಿದರು ಮತ್ತು ಯಾರು ಊಹೆ ಮಾಡದ ರೀತಿಯಲ್ಲಿ ಚೈತ್ರದ ಪ್ರೇಮಾಂಜಲಿ ದೊಡ್ಡ ಸಕ್ಸಸ್ ಕಂಡಿತು. ಯಾರು ಅವಮಾನ ಮಾಡಿದ್ದರೋ ಅವರೇ ರಘುವೀರ್ ಅವರ ಡೇಟ್ಸ್ ಗಾಗಿ ಮನೆಮುಂದೆ ನಿಂತರು, ಹೀಗೆ ಸಕ್ಸಸ್ ಕಂಡ ರಘುವೀರ್ ಶೃಂಗಾರ ಕಾವ್ಯ ಚಿತ್ರವನ್ನ ಮಾಡಲು ಮುಂದಾದರು ಮತ್ತು ಈ ಚಿತ್ರಕ್ಕೆ ನಟಿಯಾಗಿ ಚನೈ ನಿಂದ ಸಿಂಧು ಅವರು ಬಂದರು ಮತ್ತು ಈ ಚಿತ್ರ ಸೂಪರ್ ಹಿಟ್ ಆಯಿತು. ಇನ್ನು ಈ ಚಿತ್ರದ ನಂತರ ರಘುವೀರ್ ಮತ್ತು ಸಿಂಧು ನಡುವೆ ಪ್ರೇಮಾಂಕುರ ಆಗಿ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದರು, ಆದರೆ ಈ ಮದುವೆ ರಘುವೀರ್ ಅವರ ತಂದೆಗೆ ಇಷ್ಟ ಇರಲಿಲ್ಲ.

Actress raghuvir

ಇನ್ನು ತಂದೆಯ ಮಾತನ್ನ ದಿಕ್ಕರಿಸಿದ ರಘುವೀರ್ ನಟಿ ಸಿಂಧು ಅವರನ್ನೇ ಮದುವೆ ಮಾಡಿಕೊಂಡರು, ಈ ಸಮಯದಲ್ಲಿ ತಂದೆಯ ಜೊತೆ ಮನಸ್ತಾಪ ಮಾಡಿಕೊಂಡ ರಘುವೀರ್ ಮನೆಯಿಂದ ಆಚೆ ಬಂದರು ಮತ್ತು ಮನೆಯವರ ಜೊತೆ ಮಾತನ್ನೇ ನಿಲ್ಲಿಸಿದರು. ಇನ್ನು ಈ ಸಮಯದಲ್ಲಿ ರಘುವೀರ್ ಮನೆಯಿಂದ ಆಚೆ ಬಂದಿದ್ದಾನೆ ಅವನ ಬಳಿ ಹಣವಿಲ್ಲ ಮತ್ತು ತಂದೆ ಮನೆಯಿಂದ ಆಚೆ ಹಾಕಿದ್ದಾರೆ ಅನ್ನುವ ಗಾಳಿಸುದ್ದಿ ಆ ಕಾಲದಲ್ಲಿ ದೊಡ್ಡ ಸದ್ದನ್ನೇ ಮಾಡಿತ್ತು. ಈ ಘಟನೆ ನಡೆದ ನಂತರ ರಘುವೀರ್ ಯಾವುದೇ ಅವಕಾಶಗಳು ಸಿಗಲಿಲ್ಲ ಮತ್ತು ಹಿಟ್ ಚಿತ್ರಗಳನ್ನ ಕೊಟ್ಟಿದ್ದ ರಘುವೀರ್ ಯಾವ ಚಿತ್ರದಲ್ಲಿ ಚಾನ್ಸ್ ಸಿಗಲಿಲ್ಲ. ಇನ್ನು ಆರ್ಥಿಕವಾಗಿ ಕುಗ್ಗಿದ್ದ ನಟ ರಘುವೀರ್ 2003 ರಲ್ಲಿ ಮತ್ತೆ ದೊಡ್ಡ ಆಘಾತ, ಸುನಾಮಿ ಸಂತ್ರಸ್ತರ ನೆರವಿಗೆ ಹೋಗಿದ್ದ ಹೆಂಡತಿ ಸುಂಟರಗಾಳಿಗೆ ಸಿಲುಕಿ ಮೂಗಿನೊಳಗೆ ಅತಿಯಾದ ಧೂಳು ಹೋಗಿದ್ದರಿಂದ ಕೋಮಾಗೆ ಹೋಗಿ ನಂತರ ಮರಣ ಹೊಂದಿದರು.

ಹೀಗೆ ಎಲ್ಲರನ್ನ ಕಳೆದುಕೊಂಡ ರಘುವೀರ್ ಮನಸಿಕೆ ಖಿನ್ನತೆಗೆ ಒಳಗಾಗಿ ಮುಂಬೈ ಗೆ ಹೋದರು, ಅಲ್ಲಿ ಬೀದಿ ಬೀದಿಗಳಲ್ಲಿ ರಘುವೀರ್ ತಿರುಗಾಡುತ್ತಿದ್ದಾರೆ ಎಂದು ತಿಳಿದ ತಂದೆ ಎಲ್ಲವನ್ನ ಮರೆತು ಮುಂಬೈ ಗೆ ಹೋಗಿ ಮಗನನ್ನ ಕರೆತಂದು ಮತ್ತೆ ಇನ್ನೊಂದು ಮದುವೆ ಮಾಡಿದರು. ಇನ್ನು ರಘುವೀರ್ ಎರಡನೆಯ ಮದುವೆ ನಂತರ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು ಆದರೆ ಅದೂ ಬಿಡುಗಡೆ ಆಗಲಿಲ್ಲ, ಇನ್ನು 2014 ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನ ಆಸ್ಪತ್ರೆಗೆ ಕರೆದುಕೊಂಡರು ಹೋದರು ಕೂಡ ರಘುವೀರ್ ಉಳಿಯಲಿಲ್ಲ, ಹೀಗೆ ಪ್ರೀತಿ ಅನ್ನುವ ಪದ ರಘುವೀರ್ ಜೀವನದಲ್ಲಿ ಶಾಪವಾಗಿ ಪರಿಣಮಿಸಿತು ಎಂದು ಹೇಳಿದರೆ ತಪ್ಪಾಗಲ್ಲ.

Please follow and like us:
error0
http://karnatakatoday.in/wp-content/uploads/2019/12/news-of-raghuvir-1024x576.jpghttp://karnatakatoday.in/wp-content/uploads/2019/12/news-of-raghuvir-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲತಂದೆ ದೊಡ್ಡ ಕಂಟ್ರಾಕ್ಟರ್ ಆದ ಕಾರಣ ತಂದೆ ಹಾದಿಯಲ್ಲೇ ಬರಲು ಸಿವಿಲ್ ಇಂಜಿನಿಯರಿಗೆ ಓದಿದರೂ ನಟ ರಘುವೀರ್, ಇನ್ನು ನಟ ಅಂಬರೀಷ್ ಅವರ ಮನೆಯನ್ನ ಕಟ್ಟುವ ಕಾಂಟ್ರಾಕ್ಟ್ ರಘುವೀರ್ ಅವರ ತಂದೆಗೆ ಸಿಕ್ಕಿತ್ತು. ಇನ್ನು ಅಪ್ಪ ಕೆಲಸ ಮಾಡುವ ಸ್ಥಳಗಳಿಗೆ ಹೋಗುತ್ತಿದ್ದ ನಟ ರಘುವೀರ್ ಅಲ್ಲಿ ಅಂಬರೀಷ್ ಅವರ ಗತ್ತು ಮತ್ತು ಸ್ಟೈಲ್ ಗಳನ್ನ ನೋಡಿ ನಾನು ಕೂಡ ಒಬ್ಬ ಸ್ಟಾರ್ ನಟನಾಗಬೇಕು ಅಂದುಕೊಂಡರು ನಟ ರಘುವೀರ್. ಇನ್ನು...Film | Devotional | Cricket | Health | India