News of actress Sangeeta

ಕೆಲವೊಮ್ಮೆ ಸ್ಟಾರ್ ಗಿರಿಯೇ ದೊಡ್ಡ ಸಮಸ್ಯೆಗಳನ್ನ ತಂದೊಡ್ಡುತ್ತದೆ, ಹಾಗೆ ಆಗಿದೆ ಈ ಸ್ಟಾರ್ ನಟಿಯ ಸ್ಥಿತಿ, ಹೆತ್ತ ತಾಯಿಯನ್ನ ಮನೆಯಿಂದ ಆಚೆ ನೂಕಿದ್ದಾರೆ ಈ ನಟಿ.

ಹಾಗಾದರೆ ಈ ನಟಿ ಯಾರು ಮತ್ತು ಆಕೆ ಯಾಕೆ ತನ್ನ ತಾಯಿಯನ್ನ ಮನೆಯಿಂದ ಆಚೆ ಹಾಕಿದ್ದಾಳೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನಟಿ ಸಂಗೀತ, ಕನ್ನಡದ ‘ನಲ್ಲ’ ಸೇರಿ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ, ಇವರು ಖ್ಯಾತ ಸಿಂಗರ್ ಕ್ರಿಶ್ ಅವರನ್ನ ಮದುವೆಯಾಗಿದ್ದಾರೆ, ಇನ್ನು ಇತ್ತೀಚಿಗೆ ನಟಿ ಸಂಗೀತ ಅವರ ತಾಯಿ ನಟಿ ಸಂಗೀತ ಅವರ ಮೇಲೆ ದೊಡ್ಡ ಆರೋಪವನ್ನ ಮಾಡಿದ್ದಾರೆ.

News of actress Sangeeta

ನನ್ನ ಮಗಳು ನನ್ನನ್ನ ಮನೆಯಿಂದ ಆಚೆ ನೂಕಿದ್ದಾಳೆ, ನನ್ನ ವಯಸ್ಸು ನೋಡದೆ ನನ್ನನ್ನ ಮನೆಯಿಂದ ಹೊರಗೆ ಹಾಕಲಾಗಿದೆ, ಇನ್ನು ಅಷ್ಟೇ ಅಲ್ಲದೆ ಆಸ್ತಿಯನ್ನ ಕಬಳಿಸುವ ಯತ್ನವನ್ನ ಕೂಡ ಮಾಡುತ್ತಿದ್ದಾಳೆ ಎಂದು ನಟಿ ಸಂಗೀತ ತಾಯಿ ಆಕೆಯ ಮೇಲೆ ಆರೋಪವನ್ನ ಮಾಡಿದ್ದಾರೆ.

ಇನ್ನು ಇದಕ್ಕೆ ತುಂಬಾ ತೀಕ್ಷಣವಾಗಿ ಪ್ರತಿಕ್ರಿಯೆ ಕೊಟ್ಟಿರುವ ನಟಿ ಸಂಗೀತ ಅವರು ಏನು ಹೇಳಿದ್ದಾರೆ ಅಂದರೆ, ಇಡೀ ಜಗತ್ತಿಗೆ ನನ್ನನ್ನ ಪರಿಚಯ ಮಾಡಿದ್ದಕ್ಕೆ ನನ್ನ ತಾಯಿಗೆ ತುಂಬು ಹೃದಯದ ಧನ್ಯವಾದ ಮತ್ತು 13 ನೇ ವಯಸ್ಸಿಗೆ ನನ್ನನ್ನ ಕೆಲಸಕ್ಕೆ ಸೇರುವಂತೆ ಒತ್ತಾಯ ಮಾಡಿದ ತಾಯಿಗೆ ಕೂಡ ಧನ್ಯವಾದ ಎಂದು ಹೇಳಿದ್ದಾರೆ ನಟಿ ಸಂಗೀತ.

News of actress Sangeeta

ಇನ್ನು ಮುಂದುವರೆಸಿದ, ಖಾಲಿ ಚೆಕ್ ನಲ್ಲಿ ಸಹಿ ಮಾಡಿಸಿದ್ದಕ್ಕೆ ನನ್ನ ತಾಯಿಗೆ ಧನ್ಯವಾದ, ಡ್ರಗ್ಸ್ ಗೆ ದಾಸನಾಗಿ ಕೆಲಸ ಮಾಡದೆ ಮನೆಯಲ್ಲಿ ಕೂತಿದ್ದ ನಿನ್ನ ಮಗನ ಸಲುವಾಗಿ ನನ್ನನ್ನ ಮನೆಯಿಂದ ಆಚೆ ಹಾಕಿದ ತಾಯಿಗೆ ಧನ್ಯವಾದ ಎಂದು ಹೇಳಿದ್ದಾರೆ.

ನನಗಿಷ್ಟವಾದ ಹುಡುಗನನ್ನ ಮದುವೆಯಾಗಲು ಬಿಡದೆ ನನ್ನ ತಾಯಿಗೆ ಧನ್ಯವಾದ, ಇನ್ನು ಮದುವೆಯ ನಂತರನು ನನ್ನ ಮತ್ತು ನನ್ನ ಕುಟುಂಬಕ್ಕೆ ಕಿರುಕುಳ ಕೊಟ್ಟ ನನ್ನ ತಾಯಿಗೆ ಧನ್ಯವಾದ, ಓರ್ವ ತಾಯಿ ಹೀಗೆ ಇರಬಾರದು ಎಂದು ತೋರಿಸಿದ್ದಕ್ಕೆ ಧನ್ಯವಾದ, ಹೀಗೆ ತಾಯಿಯ ತಪ್ಪುಗಳನ್ನ ಹೇಳಿ ತಾಯಿಗೆ ತಿರುಗೇಟು ಕೊಟ್ಟಿದ್ದಾರೆ ನಟಿ ಸಂಗೀತ.

News of actress Sangeeta

Please follow and like us:
0
http://karnatakatoday.in/wp-content/uploads/2019/04/News-of-Actress-Sangeeta-1024x576.jpghttp://karnatakatoday.in/wp-content/uploads/2019/04/News-of-Actress-Sangeeta-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕೆಲವೊಮ್ಮೆ ಸ್ಟಾರ್ ಗಿರಿಯೇ ದೊಡ್ಡ ಸಮಸ್ಯೆಗಳನ್ನ ತಂದೊಡ್ಡುತ್ತದೆ, ಹಾಗೆ ಆಗಿದೆ ಈ ಸ್ಟಾರ್ ನಟಿಯ ಸ್ಥಿತಿ, ಹೆತ್ತ ತಾಯಿಯನ್ನ ಮನೆಯಿಂದ ಆಚೆ ನೂಕಿದ್ದಾರೆ ಈ ನಟಿ. ಹಾಗಾದರೆ ಈ ನಟಿ ಯಾರು ಮತ್ತು ಆಕೆ ಯಾಕೆ ತನ್ನ ತಾಯಿಯನ್ನ ಮನೆಯಿಂದ ಆಚೆ ಹಾಕಿದ್ದಾಳೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಟಿ ಸಂಗೀತ,...Kannada News