news of Ambarish

ಯಾಕೋ ಕಲಿಯುಗ ಕರ್ಣ ರೆಬಲ್ ಸ್ಟಾರ್ ಅಂಬರೀಷ್ ಗೆ ಟೈಮ್ ಸರಿ ಇಲ್ಲ ಅಂತ ಅನಿಸುತ್ತದೆ, ಇತ್ತೀಚಿಗೆ ರೆಬಲ್ ಸ್ಟಾರ್ ಅಂಬರೀಷ್ ಅವರು KCC ಕ್ರಿಕೆಟ್ ಟೂರ್ನಿ ಯಲ್ಲಿ ಮೂರ್ಛೆ ಬಿದ್ದಿದ್ದರು ಮತ್ತು ಮೊನ್ನೆ ಅಂಬರೀಶ್ ಅವರ ಆರೋಗ್ಯ ಕೆಟ್ಟಿತ್ತು.

ಅಂಬರೀಷ್ ಅವರ ಆರೋಗ್ಯ ಸ್ವಲ್ಪ ಸರಿ ಹೋಗುತ್ತಿರುವ ಸಮಯದಲ್ಲೇ ಅಂಬರೀಷ್ ಅವರಿಗೆ ಒಂದು ಶಾಕ್ ಎದುರಾಗಿದೆ, ಅಂಬರೀಷ್ ಅವರ ಮನೆಯ ಮಗನಂತೆ ಇದ್ದಿದ್ದ ಅವರ ಅಭಿಮಾನಿ ರಫಿಯುಲ್ಲ ಅವರು ನಿಧನರಾಗಿದ್ದಾರೆ, ಇದು ರೆಬಲ್ ಸ್ಟಾರ್ ಅಂಬರೀಷ್ ಅವರಿಗೆ ದೊಡ್ಡ ಆಘಾತವನ್ನೇ ಉಂಟುಮಾಡಿದೆ.

ರೆಬಲ್ ಸ್ಟಾರ್ ಅಂಬರೀಷ್ ಅವರು ಎಷ್ಟೇ ಬೈದರು ಅಭಿಮಾನಿಗಳಿಗೆ ಮಾತ್ರ ಅವರ ಮೇಲೆ ಇರುವ ಪ್ರೀತಿ ಸ್ವಲ್ಪಾನು ಕಮ್ಮಿ ಆಗಿಲ್ಲ ಆದ್ದರಿಂದ ಅಂಬಿಗೂ ಕೂಡ ಅಭಿಮಾನಿಗಳೆಂದರೆ ತುಂಬಾ ಇಷ್ಟ. ರೆಬಲ್ ಸ್ಟಾರ್ ಅವರು ತುಂಬಾ ಇಷ್ಟ ಪಡುವ ಅಭಿಮಾನಿಗಳಲ್ಲಿ ಒಬ್ಬರಾಗಿದ್ದ ರಫಿಯುಲ್ಲ ಅವರು ನಿನ್ನೆ ನಿಧನರಾಗಿದ್ದಾರೆ, ಈ ಸುದ್ದಿಯನ್ನ ಕೇಳಿದ ಅಬಿಮರೀಶ್ ಅವರು ಬೇಸರವನ್ನ ವ್ಯಕ್ತಪಡಿಸಿದ್ದಾರೆ, ಇನ್ನು ಅಂಬರೀಷ್ ಅವರು ಪತ್ನಿ ಸುಮಲತಾ ನನಗೆ ರಫಿ ಅವರ ಸಾವು ತುಂಬಾ ಬೇಸರವಾಗಿದೆ ಎಂದು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

news of Ambarish

ಇನ್ನು ಇದನ್ನ ಕೇಳಿದ ರೆಬಲ್ ಸ್ಟಾರ್ ಅಂಬರೀಷ್ ಅವರ ಮಗ ಕೂಡ ತಮ್ಮ ಹುಟ್ಟು ಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿಕೊಳ್ಳದೆ ಸರಳವಾಗಿ ಆಚರಿಸಿಕೊಂಡರು, ನಮ್ಮ ಅಣ್ಣನಂತೆ ಇದ್ದಿದ್ದ ಅಂಬಿ ರಫಿ ಅವರ ಸಾವು ನಮ್ಮ ಮನೆಯಲ್ಲಿ ಶೋಕ ಉಂಟಾಗಿದೆ, ಅವರು ನಮ್ಮ ಮನೆಯ ಸದಸ್ಯರಲ್ಲಿ ಒಬ್ಬರಾಗಿದ್ದರು ಆದರಿಂದ ನಾನು ನನ್ನ ಹುಟ್ಟು ಹಬ್ಬವನ್ನ ಸರವಾಗಿ ಆಚರಿಸಿಕೊಂಡೆ ಎಂದು ಅಂಬರೀಷ್ ಅವರ ಮಗ ಹೇಳಿಕೊಂಡಿದ್ದಾರೆ.

ರಫಿ ಅವರು ಭೀಕರ ಲಾರಿ ಅಪಘಾತದಲ್ಲಿ ಇಹಲೋಕವನ್ನ ತ್ಯಜಿಸಿದರು ಮತ್ತು ಇವರ ಜೊತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ, ತನ್ನ ಎಂಚ್ಚಿನ ಅಭಿಮಾನಿ ರಫಿ ಅವರ ಸಾವಿನಿಂದ ಆಘಾತಗೊಂಡಿದ್ದ ಅಂಬರೀಷ್ ಅವರು ಈಗ ಸ್ವಲ್ಪ ಚೇತರಿಸಿಕೊಂಡು ರಫಿ ಅವರ ಮನೆಗೆ ಹೋಗಿ ಅವರ ಮನೆಯರಿಗೆ ಸಾಂತ್ವನವನ್ನ ಹೇಳಿದ್ದಾರೆ.

news of Ambarish

ಇನ್ನು ಅಂಬಿ ಅವರು ಹೇಳಿರುವ ಪ್ರಕಾರ ರಫಿ ಅಂದರೆ ನನಗೆ ತುಂಬಾ ಇಷ್ಟ ಹಾಗೆ ನನ್ನ ಮಗನಿಗೂ ಕೂಡ ರಫಿ ಅಂದರೆ ತುಂಬಾ ಇಷ್ಟ ಮತ್ತು ಒಮ್ಮೆ ಅವರ ಮನೆಗೆ ಕೂಡ ಹೋಗಬೇಕೆಂದಿದ್ದ ಆದರೆ ದುರದೃಷ್ಟವಷಾ ಹೀಗಾಯಿತು, ನನ್ನ ಅಭಿಮಾನಿಯ ಮರಣದಿಂದ ನನಗೆ ತುಂಬಾ ನೋವಾಗಿದೆ ಎಂದು ರೆಬಲ್ ಸ್ಟಾರ್ ಅಂಬರೀಷ್ ಅವರು ಹೇಳಿದ್ದಾರೆ.

ಇನ್ನು ನಾನು ಚುನಾವಣೆಯಲ್ಲಿ ನಿಲ್ಲದಿದ್ದಕ್ಕೆ ರಫಿ ತುಂಬಾ ಬೇಸರದಲ್ಲಿದ್ದ, ಇನ್ನು ಅಂಬರೀಷ್ ಅವರು ರಫಿ ಕುಟುಂಬಕ್ಕೆ ತನ್ನ ಕೈಯಲ್ಲಿ ಆದ ಸಹಾಯವನ್ನ ನಾವು ಮಾಡುವುದಾಗಿ ಹೇಳಿದ್ದಾರೆ, ಈ ಅಭಿಮಾನಿಯೇ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ನೀವು ಯಾರ ಅಭಿಮಾನಿ ಅನ್ನುವುದನ್ನ ಹೇಳಿ.

news of Ambarish

Please follow and like us:
0
http://karnatakatoday.in/wp-content/uploads/2018/10/News-of-Ambarish-1024x576.jpghttp://karnatakatoday.in/wp-content/uploads/2018/10/News-of-Ambarish-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಾಕೋ ಕಲಿಯುಗ ಕರ್ಣ ರೆಬಲ್ ಸ್ಟಾರ್ ಅಂಬರೀಷ್ ಗೆ ಟೈಮ್ ಸರಿ ಇಲ್ಲ ಅಂತ ಅನಿಸುತ್ತದೆ, ಇತ್ತೀಚಿಗೆ ರೆಬಲ್ ಸ್ಟಾರ್ ಅಂಬರೀಷ್ ಅವರು KCC ಕ್ರಿಕೆಟ್ ಟೂರ್ನಿ ಯಲ್ಲಿ ಮೂರ್ಛೆ ಬಿದ್ದಿದ್ದರು ಮತ್ತು ಮೊನ್ನೆ ಅಂಬರೀಶ್ ಅವರ ಆರೋಗ್ಯ ಕೆಟ್ಟಿತ್ತು. ಅಂಬರೀಷ್ ಅವರ ಆರೋಗ್ಯ ಸ್ವಲ್ಪ ಸರಿ ಹೋಗುತ್ತಿರುವ ಸಮಯದಲ್ಲೇ ಅಂಬರೀಷ್ ಅವರಿಗೆ ಒಂದು ಶಾಕ್ ಎದುರಾಗಿದೆ, ಅಂಬರೀಷ್ ಅವರ ಮನೆಯ ಮಗನಂತೆ ಇದ್ದಿದ್ದ ಅವರ ಅಭಿಮಾನಿ ರಫಿಯುಲ್ಲ ಅವರು...Kannada News