ಸ್ನೇಹಿತರೆ ಪ್ರಪಂಚದ ಪ್ರತಿಯೊಬ್ಬ ತಂದೆ ತಾಯಿ ಕೂಡ ತಮ್ಮ ಮಕ್ಕಳು ಆಟವನ್ನ ನೋಡಿ, ಅವರ ತುಂಟಾಟವನ್ನ ನೋಡಿ ಮತ್ತು ಅವರು ಸಂತೋಷದಿಂದ ಇರುವುದನ್ನ ನೋಡಿ ಅವರು ಕೂಡ ಸಂತೋಷದಿಂದ ಇರುತ್ತಾರೆ. ತಮಗೆ ಎಷ್ಟೇ ಕಷ್ಟಗಳು ಇದ್ದರೂ ಕೂಡ ತಮ್ಮ ಮಕ್ಕಳು ಖುಷಿಯಿಂದ ಇರಲಿ ಅನ್ನುವ ಕಾರಣಕ್ಕೆ ಅವರ ಕಷ್ಟವನ್ನ ಮಕ್ಕಳ ಮುಂದೆ ತೋರಿಸಿಕೊಳ್ಳುವುದಿಲ್ಲ. ಇನ್ನು ಇಂಡೋನೇಷಿಯಾ ಹುಟ್ಟಿದ ಈ ಮಗು ತನ್ನ ಬಾಲ್ಯದ ಜೀವನವನ್ನ ತುಂಬಾ ನರಕದಿಂದ ಕಳೆದಿದೆ ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ನಾವು ಹೇಳುವ ಈ ಮಗುವಿನ ಆರ್ಯ ಪರ್ಮಾನ, ಇನ್ನು ಈ ಮಗು ಹುಟ್ಟುವಾಗ ಆ ಮಗುವಿನ ತೂಕ ಸಾಮಾನ್ಯ ಮಕ್ಕಳಂತೆ 3.800 ಕೆಜಿ ಇತ್ತು ಮತ್ತು ಎಲ್ಲಾ ಮಕ್ಕಳಂತೆ ಈ ಮಗು ಆಟವನ್ನ ಆಡಿಕೊಂಡು ಸಂತೋಷವಾಗಿ ಬೆಳೆಯುತ್ತಿತ್ತು.

ಇನ್ನು ಮೂರೂ ವರ್ಷದ ನಂತರ ಈ ಮಗುವಿನ ದೇಹದ ತೂಕ ಜಾಸ್ತಿ ಆಗುತ್ತಾ ಹೋಗುತ್ತದೆ ಮತ್ತು ಆ ಮಗುವಿಗೆ 11 ತುಂಬಿದ ಸಮಯದಲ್ಲಿ ಆ ಮಗುವಿನ ತೂಕ 192 ಕೆಜಿ ಆಗುತ್ತದೆ ಮತ್ತು ಪ್ರಪಂಚದ ಅತೀ ತೂಕದ ಬಾಲಕ ಅನ್ನುವ ಹೆಗ್ಗಳಿಯೆಗೆ ಆರ್ಯ ಪರ್ಮಾನ ಸೇರಿಕೊಳ್ಳುತ್ತಾನೆ. ಇನ್ನು ಈ ಹುಡುಗ ಪ್ರತಿದಿನ ಐದು ಭಾರಿ ಊಟವನ್ನ ಮಾಡುತ್ತಾನೆ ಮತ್ತು ಒಂದು ಭಾರಿ ಊಟ ಮಾಡುವಾಗ ಸುಮಾರು ಇಬ್ಬರಿಂದ ಮೂರೂ ಜನ ಊಟ ಮಾಡುವಷ್ಟು ಆಹಾರವನ್ನ ಸೇವನೆ ಮಾಡುತ್ತಾನೆ. ಇನ್ನು ಈ ಹುಡುಗನ ತಂದೆ ತಾಯಿಯರು ತಮ್ಮ ಮಗನನ್ನ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಿದಾಗ ವೈದ್ಯರು ನಿಮ್ಮ ಮಗನಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಅವನು ಆರೋಗ್ಯಕರವಾಗಿ ಇದ್ದಾನೆ ಎಂದು ಹೇಳುತ್ತಾರೆ ಮತ್ತು ಈತ ತುಂಬಾ ದಪ್ಪಗೆ ಇರುವುದರಿಂದ ಈತನ ಪ್ರಾಣಕ್ಕೆ ತೊಂದರೆ ಇದೆ ಎಂದು ಕೂಡ ಹೇಳುತ್ತಾರೆ.

News of arya Permana

ಇನ್ನು ವೈದ್ಯರು ಹೇಳಿದ ಈ ಮಾತು ಆ ಬಾಲಕನ ತಂದೆ ತಾಯಿಗೆ ತುಂಬಾ ಆಘಾತವನ್ನ ಉಂಟು ಮಾಡುತ್ತದೆ, ತಮ್ಮ ಮಗನ ಆರೋಗ್ಯದ ದೃಷ್ಟಿಯಿಂದ ಆ ತಾಯಿ ತನ್ನ ಮಗನಿಗೆ ಊಟ ಕೊಡುವುದನ್ನ ಕಡಿಮೆ ಮಾಡುತ್ತಾರೆ. ಇನ್ನು ಮಗನಿಗೆ ಅನ್ನದ ಬದಲು ಹಣ್ಣನ್ನ ಜಾಸ್ತಿ ಕೊಡಲು ಆರಂಭ ಮಾಡುತ್ತಾಳೆ, ಇನ್ನು ಆ ಆಗು ಅಷ್ಟು ತೂಕ ಇರುವುದರಿಂದ ಅವು ಏನೇ ಕೆಲಸವನ್ನ ಮಾಡಬೇಕು ಅಂದರು ಬೇರೆಯವರ ಸಹಾಯವನ್ನ ತಗೆದುಕೊಳ್ಳಬೇಕಾಗುತ್ತದೆ. ಇನ್ನು ಬಾಲಕ ಸ್ಕೂಲ್ ನಲ್ಲಿ ತುಂಬಾ ಚನ್ನಾಗಿ ಓದುತ್ತಿದ್ದು ಫಸ್ಟ್ ರಾಂಕ್ ಸ್ಟೂಡೆಂಟ್ ಕೂಡ ಆಗಿದ್ದಾನೆ, ಇನ್ನು ದೇಹದ ತೂಕ ಜಾಸ್ತಿ ಆದಕಾರಣ ನಡೆದುಕೊಂಡು ಶಾಲೆಗೆ ಹೋಗಲು ಸಾಧ್ಯವಾಗದ ಕರಣ ಆತನನ್ನ ಸ್ಕೂಲ್ ಗೆ ಆತನ ತಂದೆ ಕಳುಹಿಸಿ ಕೊಡುತ್ತಿದ್ದರು. ಇನ್ನು ಆತನ ದೇಹಕ್ಕೆ ಹೋಲುವ ಬಟ್ಟೆಗಳು ಕೂಡ ಅವರಿಗೆ ಸಿಗುವುದಿಲ್ಲ ಮತ್ತು ಆತ ಹೊರಗಡೆ ಓಡಾಡಲು ಅವರ ತಂದೆ ತಾಯಿ ಅವನದ್ದೇ ಅಳತೆಯ ಬಟ್ಟೆಗಳನ್ನ ತಯಾರು ಮಾಡಿ ತರುತ್ತಾರೆ.

2016 ರ ತನಕ ಈತನ ತೂಕ ಅಷ್ಟೇ ಇರುತ್ತದೆ ಮತ್ತು ಕೆಲವು ಸಮಯದ ನಂತರ ಈತನಿಗೆ ಗ್ಯಾಸ್ ಟ್ರಿಕ್ ಗೆ ಸಂಬಂದಿಸಿದ ಒಂದು ಆಪರೇಷನ್ ಮಾಡಿದ ಕಾರಣ ಆತನ ತೂಕ ಸುಮಾರು 50 ಕೆಜಿ ಕಡಿಮೆ ಆಗುತ್ತದೆ. ಇನ್ನು ಆ ಮಗು ಈಗ ಶಾಲೆಗೆ ಒಬ್ಬನೇ ನಡೆದುಕೊಂಡು ಹೋಗುತ್ತಾನೆ ಮತ್ತು ಬೇರೆ ಮಕ್ಕಳ ತರಹ ಆಟವನ್ನ ಕೂಡ ಆಡುತ್ತಾನೆ, ಇನ್ನು ತನ್ನ ಮಗನ ದೇಹದಲ್ಲಿ ಈ ರೀತಿಯ ಬದಲಾವಣೆಯನ್ನ ನೋಡಿದ ಆ ಮಗುವಿನ ತಾಯಿ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ, ಪ್ರತಿಯೊಬ್ಬ ತಂದೆ ತಾಯಿ ಕೂಡ ತಮ್ಮ ಮಕ್ಕಳು ಸಾಯುವ ತನಕ ಖುಷಿಯಿಂದ ಇರಬೇಕು ಅನ್ನುವ ದೃಷ್ಟಿಯಿಂದ ಅವರಿಗೆ ಬೇಕಾದುದೆಲ್ಲ ತಂದು ಕೊಡುತ್ತಾರೆ ಮತ್ತು ಅದೇ ರೀತಿಯಾಗಿ ಮಕ್ಕಳು ಕೂಡ ದೊಡ್ಡವರಾದ ಮೇಲೆ ತಮ್ಮ ತಂದೆ ತಾಯಿಯನ್ನ ಮಕ್ಕಳ ತರಾನೇ ನೋಡಿಕೊಳ್ಳಬೇಕು ಅನ್ನುವುದು ನಮ್ಮ ಆಶಯ.

News of arya Permana

Please follow and like us:
error0
http://karnatakatoday.in/wp-content/uploads/2020/01/News-of-arya-Permana-1024x576.jpghttp://karnatakatoday.in/wp-content/uploads/2020/01/News-of-arya-Permana-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಪ್ರಪಂಚದ ಪ್ರತಿಯೊಬ್ಬ ತಂದೆ ತಾಯಿ ಕೂಡ ತಮ್ಮ ಮಕ್ಕಳು ಆಟವನ್ನ ನೋಡಿ, ಅವರ ತುಂಟಾಟವನ್ನ ನೋಡಿ ಮತ್ತು ಅವರು ಸಂತೋಷದಿಂದ ಇರುವುದನ್ನ ನೋಡಿ ಅವರು ಕೂಡ ಸಂತೋಷದಿಂದ ಇರುತ್ತಾರೆ. ತಮಗೆ ಎಷ್ಟೇ ಕಷ್ಟಗಳು ಇದ್ದರೂ ಕೂಡ ತಮ್ಮ ಮಕ್ಕಳು ಖುಷಿಯಿಂದ ಇರಲಿ ಅನ್ನುವ ಕಾರಣಕ್ಕೆ ಅವರ ಕಷ್ಟವನ್ನ ಮಕ್ಕಳ ಮುಂದೆ ತೋರಿಸಿಕೊಳ್ಳುವುದಿಲ್ಲ. ಇನ್ನು ಇಂಡೋನೇಷಿಯಾ ಹುಟ್ಟಿದ ಈ ಮಗು ತನ್ನ ಬಾಲ್ಯದ ಜೀವನವನ್ನ ತುಂಬಾ ನರಕದಿಂದ ಕಳೆದಿದೆ...Film | Devotional | Cricket | Health | India