ಬೇಬಿ ಶಾಮಿಲಿ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಆ ಮುದ್ದಾದ ಮುಖ, ತುಂಟಾಟ ಮತ್ತು ಮುದ್ದಾದ ಮಾತು ನೆನಪಿಗೆ ಬರುತ್ತದೆ, ಬಾಲನಟಿಯಾಗಿ ತುಂಬಾ ಪ್ರಸಿದ್ಧಿಯಾಗಿದ್ದ ಬೇಬಿ ಶಾಮಿಲಿಯ ಕಾಲ್ ಶೀಟ್ ಕೂಡ ಆ ಕಾಲದಲ್ಲಿ ಸಿಗುತ್ತಿರಲಿಲ್ಲವಂತೆ. ಮೂರೂ ಭಾಷೆಗಳಲ್ಲಿ ತುಂಬಾ ಬೇಡಿಕೆಯ ಬಾಲ ನಟಿಯಾಗಿದ್ದರು ಬೇಬಿ ಶಾಮಿಲಿ, ಇನ್ನು ಆಗಿನ ಕಾಲದಲ್ಲಿ ನಟರಿಗಿಂತ ಹೆಚ್ಚಿನ ಸಂಭಾವನೆಯನ್ನ ಕೂಡ ಪಡೆಯುತ್ತಿದ್ದರೂ ಬೇಬಿ ಶಾಮಿಲಿ, ಇನ್ನು ಅಷ್ಟು ದೊಡ್ಡ ಹೆಸರನ್ನ ಮಾಡಿದ್ದ ಶಾಮಿಲಿ ದೊಡ್ಡವಳಾದ ಮೇಲೆ ಹೆಚ್ಚಾಗಿ ತೆರೆಯ ಮೇಲೆ ಯಾಕೆ ಕಾಣಿಸಿಕೊಳ್ಳಲಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟಿ ಶಾಮಿಲಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ನಟಿ ಶಾಮಿಲಿ ಅವರು ದೊಡ್ಡವರಾದ ಮೇಲೆ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದರು ಆದರೆ ಆ ಚಿತ್ರಗಳು ಹಿಟ್ ಆಗಲಿಲ್ಲ ಮತ್ತು ಚಿತ್ರ ಹಿಟ್ ಆಗದೆ ಇರುವುದಕ್ಕೆ ನಿರ್ದೇಶಕರು ಕೆಲವು ಕಾರಣಗಳನ್ನ ಕೂಡ ಕೊಡುತ್ತಾರೆ. ಹೌದು ಬಾಲನಟಿಯಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿ ಮಿಂಚಿದ್ದ ಬೇಬಿ ಶಾಮಿಲಿ ತೆಲುಗು ಚಿತ್ರ ಓಯಿ ಮೂಲಕ ಮತ್ತೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಇನ್ನು ನಟಿಯಾಗಿ ಶಾಮಿಲಿ ನಟಿಸಿದ್ದು ಕೇವಲ ನಾಲ್ಕು ಚಿತ್ರಗಳಲ್ಲಿ ಮಾತ್ರ ಆದರೆ ಆ ಚಿತ್ರಗಳು ಹಿಟ್ ಆಗಲಿಲ್ಲ. ಇದಾದ ನಂತರ ಅವರು ಮೂರೂ ಚಿತ್ರಗಳಲ್ಲಿ ನಟಿಯಾಗಿ ಕಾಣಿಸಿಕೊಂಡರು ಆದರೆ ಆ ಚಿತ್ರಗಳು ಹಿಟ್ ಆಗದೆ ಇದ್ದ ಕಾರಣ ಶಾಮಿಲಿ ಅವರಿಗೆ ಅವಕಾಶಗಳು ಕಡಿಮೆ ಆದವು

News of Baby Shamili

ಅದ್ಬುತ ನಟನೆ ಮತ್ತು ಅದರ ಜೊತೆ ಸೌಂದರ್ಯವನ್ನ ಕೂಡ ಹೊಂದಿರುವ ನಟಿ ಶಾಮಿಲಿ ಅವರಿಗೆ ಯಾಕೆ ಒಳ್ಳೆಯ ಚಿತ್ರಗಳು ಸಿಗಲಿಲ್ಲ ಅನ್ನುವುದಕ್ಕೆ ಚಿತ್ರರಂಗದ ಜನರ ಕೊಟ್ಟ ಕಾರಣ ಏನು ಅಂದರೆ, ನಟಿ ಶಾಮಿಲಿ ಅವರನ್ನ ನಟಿಯಾಗಿ ಹಾಕಿಕೊಂಡು ಚಿತ್ರ ಮಾಡುವುದು ತುಂಬಾ ಕಷ್ಟ ಅನ್ನುವುದು ಕೆಲವರ ಅಭಿಪ್ರಾಯ ಮತ್ತು ಅದಕ್ಕೆ ಕಾರಣ ಶಾಮಿಲಿ ಅವರ ಡಿಮ್ಯಾಂಡ್ ತುಂಬಾ ಜಾಸ್ತಿ ಮತ್ತು ಸರಿಯಾಗಿ ಶೂಟಿಂಗ್ ಗೆ ಬಾರದೆ ಇರುವುದು ಆಗಿದೆ ಮತ್ತು ಈ ವಿಷಯ ಎಲ್ಲಾ ಹರಿದಾಡಿ ಆಕೆಗೆ ಒಳ್ಳೆಯ ಅವಕಾಶಗಳು ಸಿಗಲಿಲ್ಲ ಅನ್ನುವುದು ಚಿತ್ರರಂಗದವರ ಮಾತಾಗಿದೆ. ಇನ್ನು ನಟಿ ಶಾಮಿಲಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತು ಕನ್ನಡ ಸಿನಿ ರಸಿಕರಲ್ಲಿ ಒಳ್ಳೆಯ ಹೆಸರು ಇದೆ ಮತ್ತು ಇದೆ ಕಾರಣಕ್ಕೆ ಆಕೆಗೆ ಕನ್ನಡ ಚಿತ್ರರಂಗದಿಂದ ಒಂದು ಒಳ್ಳೆಯ ಅವಕಾಶ ಸಿಕ್ಕಿತ್ತು ಅದೂ ಶಿವರಾಜ್ ಕುಮಾರ್ ಅವರ ಜೊತೆ ನಟನೆ ಮಾಡುವ ಅವಕಾಶ.

ಶಿವರಾಜ್ ಕುಮಾರ್ ಅವರ ಜೊತೆ ನಟನೆ ಮಾಡುವ ಒಳ್ಳೆಯ ಅದನ್ನ ಕೈಚೆಲ್ಲಿಕೊಂಡರು, ಹೌದು ಶಿವರಾಜ್ ಕುಮಾರ್ ಅವರ ಜೊತೆ ನಾನು ನಟಿಸಲ್ಲ ಎಂದು ಹೇಳಿದ್ದ ಶಾಮಿಲಿ ಆ ಅವಕಾಶವನ್ನ ತಿರಸ್ಕಾರ ಮಾಡಿದ್ದರು ಮತ್ತು ಈ ಕಾರಣಕ್ಕೆ ಆಕೆಗೆ ಕನ್ನಡ ಚಿತ್ರರಂಗದ ಬಾಗಿಲು ಮುಚ್ಚಿತು ಎಂದು ಚಿತ್ರರಂಗದ ಜನರು ಹೇಳುತ್ತಾರೆ. ಇನ್ನು ಶಾಮಿಲಿ ಅವರ ಅಕ್ಕ ಖ್ಯಾತ ನಟ ಅಜಿತ್ ಅವರ ಪತ್ನಿ, ಚಿತ್ರರಂಗದಲ್ಲಿ ನಟಿಯರ ಕಷ್ಟ ಒಬ್ಬ ನಟಿಗೆ ಮಾತ್ರ ಗೊತ್ತಿರುತ್ತದೆ, ಬೇಬಿ ಶಾಮಿಲಿ ಅವರಿಗೆ ಒಳ್ಳೆಯ ಅವಕಾಶಗಳು ಸಿಕ್ಕಿದ್ದರೆ ಇಂದು ದೇಶದ ಟಾಪ್ ನಟಿಯರಲ್ಲಿ ಅವರು ಕೂಡ ಒಬ್ಬರಾಗುತ್ತಿದ್ದರು ಅನ್ನುವುದು ನಮ್ಮ ಅಭಿಪ್ರಾಯವಾಗಿದೆ, ಸ್ನೇಹಿತರೆ ನಟಿ ಶಾಮಿಲಿ ಅವರ ಬಗ್ಗೆ ನಿಮ್ಮ ಅಂಭಿಪ್ರಾಯವನ್ನ ನಮಗೆ ತಿಳಿಸಿ.

News of Baby Shamili

Please follow and like us:
error0
http://karnatakatoday.in/wp-content/uploads/2020/01/News-of-Baby-Shamili-1024x576.jpghttp://karnatakatoday.in/wp-content/uploads/2020/01/News-of-Baby-Shamili-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಬೇಬಿ ಶಾಮಿಲಿ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಆ ಮುದ್ದಾದ ಮುಖ, ತುಂಟಾಟ ಮತ್ತು ಮುದ್ದಾದ ಮಾತು ನೆನಪಿಗೆ ಬರುತ್ತದೆ, ಬಾಲನಟಿಯಾಗಿ ತುಂಬಾ ಪ್ರಸಿದ್ಧಿಯಾಗಿದ್ದ ಬೇಬಿ ಶಾಮಿಲಿಯ ಕಾಲ್ ಶೀಟ್ ಕೂಡ ಆ ಕಾಲದಲ್ಲಿ ಸಿಗುತ್ತಿರಲಿಲ್ಲವಂತೆ. ಮೂರೂ ಭಾಷೆಗಳಲ್ಲಿ ತುಂಬಾ ಬೇಡಿಕೆಯ ಬಾಲ ನಟಿಯಾಗಿದ್ದರು ಬೇಬಿ ಶಾಮಿಲಿ, ಇನ್ನು ಆಗಿನ ಕಾಲದಲ್ಲಿ ನಟರಿಗಿಂತ ಹೆಚ್ಚಿನ ಸಂಭಾವನೆಯನ್ನ ಕೂಡ ಪಡೆಯುತ್ತಿದ್ದರೂ ಬೇಬಿ ಶಾಮಿಲಿ, ಇನ್ನು ಅಷ್ಟು ದೊಡ್ಡ ಹೆಸರನ್ನ...Film | Devotional | Cricket | Health | India