ದೇಶದ ಸರ್ಕಾರಿ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 1ನೇ ತಾರಿಕಿನಿಂದ ಹಲವಾರು ನಿಯಮಗಳನ್ನು ಬದಲಿಸಿದೆ, ಈಗಾಗಲೇ ತನ್ನ ನಿಯಮಗಳ ಬಗ್ಗೆ ಜನರಿಗೆ ಸುತ್ತೋಲೆ ಒದಗಿಸಿರುವ ಬ್ಯಾಂಕ್ ಮತ್ತೆ ಮತ್ತೆ ಖಾತೆದಾರರಿಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಎಸ್‌ಬಿಐ ಅಕ್ಟೋಬರ್ 1 ಮತ್ತು ಅಕ್ಟೋಬರ್ 10 ರ ನಡುವೆ 6 ಪ್ರಮುಖ ನಿಯಮ ಬದಲಾವಣೆಗಳನ್ನು ಮಾಡಿದೆ, ಇದು ಖಾತೆದಾರರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಎಸ್‌ಬಿಐ ಇಂತಹ ಹಲವು ಬದಲಾವಣೆಗಳನ್ನು ಮಾಡಿದ್ದು ಅದು ಗ್ರಾಹಕರಿಗೆ ಒಂದು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಮತ್ತು ಮತ್ತೊಂದೆಡೆ ಅವರು ನಷ್ಟವನ್ನು ಸಹಿಸಿಕೊಳ್ಳಬೇಕಾಗುತ್ತದೆ, ಹಾಗಾದರೆ ಆ ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ಬ್ಯಾಂಕಿನ ಗ್ರಾಹಕರಾಗಿದ್ದರೆ ಈ ಬದಲಾವಣೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಮೊದಲನೆಯದಾಗಿ ಕನಿಷ್ಠ ಬಾಕಿ ಮೇಲಿನ ಶುಲ್ಕವನ್ನು ಬ್ಯಾಂಕ್ ಬದಲಾಯಿಸಿದೆ, ಎಸ್‌ಬಿಐ ತನ್ನ ಬ್ಯಾಂಕ್ ಖಾತೆಯಲ್ಲಿ ಮಾಸಿಕ ಸರಾಸರಿ ಬಾಕಿ ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಶುಲ್ಕವನ್ನು ಕಡಿಮೆ ಮಾಡಿದೆ ಮತ್ತು ಈ ಕಡಿತವು 80 ಪ್ರತಿಶತದವರೆಗೆ ಇರಬಹುದು. ಎರಡನೆಯದಾಗಿ ಎಸ್‌ಬಿಐ ಗೃಹ ಸಾಲ, ವಾಹನ ಸಾಲವನ್ನು ಅಗ್ಗವಾಗಿ ಮಾಡುವ ಮೂಲಕ ಜನರಿಗೆ ದೀಪಾವಳಿ ಉಡುಗೊರೆಗಳನ್ನು ನೀಡಿದೆ, ಆನ್ಲೈನ್ ಮೂಲಕ ಶಾಪಿಂಗ್ ಮಾಡುವವರಿಗೆ ಬಂಪರ್ ಆಫರ್ ನೀಡಿದೆ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ಇಎಂಐ ಸೌಲಭ್ಯವನ್ನು ಒದಗಿಸಿದೆ.

News of Bharatiya State bank

ಬ್ಯಾಂಕ್ ಹೊಸ ಡೆಬಿಟ್ ಕಾರ್ಡ್ ಅನ್ನು ಪರಿಚಯಿಸಿದೆ ಮತ್ತು ಇದರಲ್ಲಿ ಗ್ರಾಹಕರು ಇಎಂಐ ಸೇವೆಯನ್ನು ಪಡೆಯುತ್ತಾರೆ, ಎಸ್‌ಬಿಐನ ಡೆಬಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡುವ ಮೂಲಕ ನೀವು ಕಂತುಗಳಲ್ಲಿ ಪಾವತಿಸಬಹುದು, ನೀವು ಕನಿಷ್ಟ 6 ತಿಂಗಳಿನಿಂದ 18 ತಿಂಗಳವರೆಗೆ ಇಎಂಐ ಅವಧಿಯನ್ನು ಆಯ್ಕೆ ಮಾಡಬಹುದು. ಇನ್ನು ಎಟಿಎಂ ಮೂಲಕ ಹಣ ತೆಗೆಯುವ ಮೆಟ್ರೋ ನಗರ ನಿವಾಸಿಗಳಿಗೆ ಹತ್ತು ಟ್ರಾನ್ಸಕ್ಷನ್ ಉಚಿತವಾಗಿ ನೀಡಲಾಗಿದೆ, ಅಕ್ಟೋಬರ್ 1 ರಿಂದ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಡುವ ಮತ್ತು ಹಿಂತೆಗೆದುಕೊಳ್ಳುವ ನಿಯಮಗಳನ್ನೂ ಬ್ಯಾಂಕ್ ಬದಲಾಯಿಸಿದೆ.

ಬ್ಯಾಂಕಿನ ಸುತ್ತೋಲೆ ಪ್ರಕಾರ 1 ಅಕ್ಟೋಬರ್ 2019 ರ ನಂತರ ಒಂದು ತಿಂಗಳಲ್ಲಿ ನಿಮ್ಮ ಖಾತೆಯಲ್ಲಿ ಕೇವಲ 3 ಬಾರಿ ಮಾತ್ರ ಉಚಿತವಾಗಿ ಜಮಾ ಮಾಡಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಇದಕ್ಕಿಂತ ಹೆಚ್ಚಿನದನ್ನು ಹಣವನ್ನು ಠೇವಣಿ ಮಾಡಲು ನೀವು ಪ್ರತಿ ವಹಿವಾಟಿನ ಮೇಲೆ ಜಿಎಸ್ಟಿ ಶುಲ್ಕದ ಜೊತೆಗೆ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಅದೇ ಸಮಯದಲ್ಲಿ, ನೀವು ಮತ್ತೆ ಮತ್ತೆ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಹಿಂಪಡೆಯಲು ಮಿತಿಯೂ ಇದೆ, ಖಾತೆದಾರರು ತಿಂಗಳಿಗೆ ಮೂರು ಬಾರಿ ತಮ್ಮ ಖಾತೆಯಲ್ಲಿ ಉಚಿತ ಹಣವನ್ನು ಜಮಾ ಮಾಡಬಹುದು, ಅದೇ ಸಮಯದಲ್ಲಿ ನೀವು ಬ್ಯಾಂಕ್ ಶಾಖೆಯಿಂದ 2 ಬಾರಿ ಹಣವನ್ನು ಹಿಂಪಡೆಯಬಹುದು, ಈ ಬಗ್ಗೆ ಎಲ್ಲಾ ನಿಯಮಗಳನ್ನು ತನ್ನ ಶಾಖೆಗಳಲ್ಲಿ ಪ್ರಕಟಿಸಿದೆ ಬ್ಯಾಂಕ್ ಹೀಗಾಗಿ ಈ ನಿಯಮಗಳ ಬಗ್ಗೆ ನಿಮ್ಮ ಗಮನವಿರಲಿ.

News of Bharatiya State bank

Please follow and like us:
error0
http://karnatakatoday.in/wp-content/uploads/2019/10/News-of-Bharatiya-State-bank-1-1024x576.jpghttp://karnatakatoday.in/wp-content/uploads/2019/10/News-of-Bharatiya-State-bank-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲದೇಶದ ಸರ್ಕಾರಿ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 1ನೇ ತಾರಿಕಿನಿಂದ ಹಲವಾರು ನಿಯಮಗಳನ್ನು ಬದಲಿಸಿದೆ, ಈಗಾಗಲೇ ತನ್ನ ನಿಯಮಗಳ ಬಗ್ಗೆ ಜನರಿಗೆ ಸುತ್ತೋಲೆ ಒದಗಿಸಿರುವ ಬ್ಯಾಂಕ್ ಮತ್ತೆ ಮತ್ತೆ ಖಾತೆದಾರರಿಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಎಸ್‌ಬಿಐ ಅಕ್ಟೋಬರ್ 1 ಮತ್ತು ಅಕ್ಟೋಬರ್ 10 ರ ನಡುವೆ 6 ಪ್ರಮುಖ ನಿಯಮ ಬದಲಾವಣೆಗಳನ್ನು ಮಾಡಿದೆ, ಇದು ಖಾತೆದಾರರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಎಸ್‌ಬಿಐ...Film | Devotional | Cricket | Health | India