News of Boiled Egg

ಮಕ್ಕಳು ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಅವರ ಮುಗ್ದ ಮುಖ ಮತ್ತು ನಗು, ಯಾವ ಮಗುವಿಗೆ ತಾಯಿ ಅಂದರೆ ಇಷ್ಟ ಇರುವುದಿಲ್ಲ ಹೇಳಿ, ಪ್ರತಿಯೊಬ್ಬರು ಕೂಡ ತಾಯಿಯ ಅಕ್ಕರೆ ಮತ್ತು ಆತ್ಮೀಯತೆಯಲ್ಲಿ ಬೆಳೆಯುತ್ತಾರೆ.

ಇನ್ನು ಮಕ್ಕಳಿಗೆ ಏನು ಗೊತ್ತಾಗಲ್ಲ, ಮಕ್ಕಳು ಸಿಕ್ಕಿದ್ದನ್ನ ತಮ್ಮ ಬಾಯಿಯಲ್ಲಿ ಇಟ್ಟುಕೊಳ್ಳುತ್ತಾರೆ ಹಾಗಾಗಿ ಮಕ್ಕಳನ್ನ ಬೆಳೆಸುವಲ್ಲಿ ತಾಯಿಯ ಪಾತ್ರ ಅತೀ ಮುಖ್ಯವಾದದ್ದು.

ಸ್ನೇಹಿತರೆ ಈಗ ಒಬ್ಬ ತಾಯಿಯ ಮಾಡಿದ ಒಂದು ಚಿಕ್ಕ ತಪ್ಪಿನಿಂದ ಪುಟ್ಟ ಮಗು ತನ್ನ ಪ್ರಾಣವನ್ನ ಕಳೆದುಕೊಂಡಿದೆ, ಹಾಗಾದರೆ ಆ ತಾಯಿ ಮಾಡಿದ ತಪ್ಪು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Boiled Egg

ಹೌದು ತೆಲಂಗಾಣದಲ್ಲಿ ರಮೇಶ್ ಮತ್ತು ಸಂಗೀತ ದಂಪತಿಗಳಿಗೆ ನಿಹಾನ್ ಎನ್ನುವ ಎರಡು ವರ್ಷದ ಮಗ ಇದ್ದ, ಇನ್ನು ಈ ದಂಪತಿಗಳು ಪ್ರತಿದಿನ ತಮ್ಮ ಮಗನನ್ನ ಅಂಗನವಾಡಿಗೆ ಕಳುಹಿಸುತ್ತಿದ್ದರು.

ಇನ್ನು ಒಂದು ದಿನ ಅಂಗನವಾಡಿಯವರು ಕುದಿಸಿದ್ದ ಮೊಟ್ಟೆಯನ್ನ ಮಗುವಿಗೆ ಆಹಾರವಾಗಿ ನೀಡಿದ್ದರು, ಇನ್ನು ಆ ಮಗು ಆ ಮೊಟ್ಟೆಯನ್ನ ಅಲ್ಲೇ ತಿನ್ನದೇ ಮನೆಗೆ ತಗೆದುಕೊಂಡು ಬಂದಿದೆ, ಇನ್ನು ಮನೆಗೆ ಬಂದ ನಂತರ ನಿಹಾನ್ ನ ತಾಯಿ ಸಂಗೀತ ಆ ಮೊಟ್ಟೆಯನ್ನ ಮಗುವಿಗೆ ತಿನ್ನಲು ಕೊಟ್ಟಳು ತನ್ನ ಕೆಲಸವನ್ನ ಮಾಡಲು ಶುರು ಮಾಡಿದಳು.

News of Boiled Egg

ಇನ್ನು ಮಗು ಆ ಮೊಟೆಯನ್ನ ಅಗಿದು ತಿನ್ನದೇ ಹಾಗೆ ಇಡೀ ಮೊಟ್ಟೆಯನ್ನ ನುಂಗಿಬಿಟ್ಟಿದೆ, ಇನ್ನು ಆ ಮೊಟ್ಟೆ ಒಳಗೂ ಹೋಗದೆ ಹೊರಗೂ ಬರದೇ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತು, ಇನ್ನು ಮಗು ಏನು ಮಾಡಲು ಆಗದೆ ಒದ್ದಾಡಲು ಶುರು ಮಾಡಿತು.

ಇನ್ನು ಕೊನೆಗೆ ಉಸಿರಾಡಲು ಆಗದೆ ತನ್ನ ಪ್ರಾಣವನ್ನ ಬಿಟ್ಟಿತು ಆ ಮಗು, ತನ್ನ ಎಲ್ಲಾ ಕೆಲಸವನ್ನ ಮುಗಿಸಿಕೊಂಡು ತಾಯಿ ಹೊರಗೆ ಬಂದು ನೋಡಿದಾಗ ಮಗು ನೆಲದ ಮೇಲೆ ಬಿದ್ದಿತ್ತು, ಇನ್ನು ಕಾರಣ ತಿಳಿದುಕೊಂಡ ತಾಯಿ ತಕ್ಷಣ ಆಸ್ಪತ್ರೆಗೆ ಹೋದರು ಯಾವುದೇ ಪ್ರಯೋಜನವಾಗಲಿಲ್ಲ.

ಪೋಷಕರೇ ನಿಮ್ಮಲ್ಲಿ ನಮ್ಮದೊಂದು ಮನವಿ, ಮಕ್ಕಳು ಒಬ್ಬರೇ ಇರುವಾಗ ಅವರನ್ನ ಬಿಟ್ಟು ನಿಮ್ಮ ಕೆಲಸಗಳಲ್ಲಿ ತೊಡಗಬೇಡಿ, ಮಗುವಿನ ಸಂಪೂರ್ಣ ಜವಾಬ್ದಾರಿ ಪೋಷಕರದ್ದೇ, ಅದರಲ್ಲೂ ಮುಖ್ಯವಾಗಿ ಮಗುವಿನ ತಾಯಿ.

News of Boiled Egg

Please follow and like us:
0
http://karnatakatoday.in/wp-content/uploads/2019/03/News-of-Boiled-Egg-1-1024x576.jpghttp://karnatakatoday.in/wp-content/uploads/2019/03/News-of-Boiled-Egg-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಮಕ್ಕಳು ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಅವರ ಮುಗ್ದ ಮುಖ ಮತ್ತು ನಗು, ಯಾವ ಮಗುವಿಗೆ ತಾಯಿ ಅಂದರೆ ಇಷ್ಟ ಇರುವುದಿಲ್ಲ ಹೇಳಿ, ಪ್ರತಿಯೊಬ್ಬರು ಕೂಡ ತಾಯಿಯ ಅಕ್ಕರೆ ಮತ್ತು ಆತ್ಮೀಯತೆಯಲ್ಲಿ ಬೆಳೆಯುತ್ತಾರೆ. ಇನ್ನು ಮಕ್ಕಳಿಗೆ ಏನು ಗೊತ್ತಾಗಲ್ಲ, ಮಕ್ಕಳು ಸಿಕ್ಕಿದ್ದನ್ನ ತಮ್ಮ ಬಾಯಿಯಲ್ಲಿ ಇಟ್ಟುಕೊಳ್ಳುತ್ತಾರೆ ಹಾಗಾಗಿ ಮಕ್ಕಳನ್ನ ಬೆಳೆಸುವಲ್ಲಿ ತಾಯಿಯ ಪಾತ್ರ ಅತೀ ಮುಖ್ಯವಾದದ್ದು. ಸ್ನೇಹಿತರೆ ಈಗ ಒಬ್ಬ ತಾಯಿಯ ಮಾಡಿದ ಒಂದು ಚಿಕ್ಕ ತಪ್ಪಿನಿಂದ ಪುಟ್ಟ...Kannada News