News of Chandrayan 2

ನಮ್ಮ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಬಹಳ ಕಷ್ಟಪಟ್ಟು ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರಯಾನ 2 ನ್ನ ಸಿದ್ದಪಡಿಸಿ ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಮ್ ಲ್ಯಾಂಡರ್ ನ್ನ ಇಳಿಸಿ ದಾಖಲೆಯನ ಬರೆಯಲು ಮುಂದಾಗಿದ್ದರು. ಇನ್ನೇನು ಯಶಸ್ಸು ಕಂಡೆವು ಅನ್ನುವ ಕೊನೆಯ ಕ್ಷಣದಲ್ಲಿ ನಡೆದ ಒಂದು ಚಿಕ್ಕ ಎಡವಟ್ಟಿನಿಂದ ವಿಕ್ರಮ್ ಲ್ಯಾಂಡರ್ ತನ್ನ ಕಕ್ಷೆಯನ್ನ ಬದಲಿಸಿ ಇಸ್ರೋ ಜೊತೆಗಿನ ತನ್ನ ಸಂಪರ್ಕವನ್ನ ಕಳೆದುಕೊಂಡು ಭಾರತೀಯರಿಗೆ ನಿರಾಸೆಯನ್ನ ಮೂಡಿಸಿತು.

ಹಾಗಾದರೆ ಲ್ಯಾಂಡರ್ ಈಗ ಯಾವ ಪರಿಸ್ಥಿತಿಯಲ್ಲಿ ಇದೆ ಹಾಗು ಎಷ್ಟು ದೂರದಲ್ಲಿ ಹೋಗಿ ಬಿದ್ದಿದೆ ಮತ್ತು ಲ್ಯಾಂಡರ್ ನಿಜಕ್ಕೂ ಸಂಪರ್ಕರಕ್ಕೆ ಸಿಗುತ್ತಾ ಅಥವಾ ಇಲ್ಲವ ಅನ್ನುವುದರ ಬಗ್ಗೆ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಸಂಪೂರ್ಣ ಮಾಹಿತಿಯನ್ನ ಕೊಟ್ಟಿದ್ದಾರೆ.

ಹಾಗಾದರೆ ಶಿವನ್ ಅವರು ಕೊಟ್ಟಿರುವ ಮಾಹಿತಿಯಲ್ಲಿ ಏನಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ವಿಕ್ರಮ್ ಲ್ಯಾಂಡರ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Chandrayan 2

ಚಂದ್ರಯಾನ 2 ಯಶಸ್ಸನ್ನ ಅಧಿಸುವ ಸಲುವಾಗ ಬಹಳಷ್ಟು ಜನ ವಿಜ್ಞಾನಿಗಳು ತುಂಬಾ ಕಷ್ಟಪಟ್ಟಿದ್ದಾರೆ, ಎಲ್ಲವೂ ಸರಿಯಾಗಿ ನಡೆಯುತ್ತಿದೆ ಅನ್ನುವಷ್ಟರಲ್ಲಿ ಚಂದ್ರನ ಮೇಲೆ ನೌಕೆ ಇಳಿಸಲು ಇನ್ನೇನು 2 ಕಿಲೋ ಮೀಟರ್ ಬಾಕಿ ಇರುವಾಗ ಲ್ಯಾಂಡರ್ ತನ್ನ ಪಥವನ್ನ ಬದಲಿಸಿ ಭೂಮಿ ಜೊತೆಗಿನ ತನ್ನ ಸಂಪರ್ಕವನ್ನ ಕಳೆದುಕೊಂಡಿತು.

ಯಾವುದಕ್ಕೂ ಜೊತೆಗೆ ಇರಲಿ ಎಂದು ಲ್ಯಾಂಡರ್ ಜೊತೆಗೆ ಓರ್ ಬೀಟರ್ ನ್ನ ಕೂಡ ಕಳುಹಿಸಲಾಗಿತ್ತು, ಈಗ ಓರ್ ಬೀಟರ್ ನ್ನ ಉಪಯೋಗವಾಗಿದ್ದು ಈ ಓರ್ ಬೀಟರ್ ಚಂದ್ರನ ಸುತ್ತ ತಿರುಗುತ್ತಿದ್ದು ತನ್ನ ಕ್ಯಾಮೆರಾ ಗಳಿಂದ ಲ್ಯಾಂಡರ್ ನ್ನ ಛಾಯಾಚಿತ್ರವನ್ನ ಕಳುಹಿಸಿದೆ. ಇನ್ನು ಓರ್ ಬೀಟರ್ ಕಳುಹಿಸಿದ ಛಾಯಾಚಿತ್ರದ ಪ್ರಕಾರ ಲ್ಯಾಂಡರ್ ನಿಗದಿತ ಸ್ಥಳಕ್ಕಿಂತ 500 ಮೀಟರ್ ದೂರದಲ್ಲಿ ಬಿದ್ದಿದೆ, ಇನ್ನು ಲ್ಯಾಂಡರ್ ಕ್ರ್ಯಾಶ್ ಲ್ಯಾಂಡರ್ ಆಗಿಲ್ಲ ಮತ್ತು ಲ್ಯಾಂಡರ್ ಒಂದು ಕಾರಿಗಿಂತ ಜಾಸ್ತಿ ತೂಕವಿದ್ದ ಕಾರಣ ಲ್ಯಾಂಡರ್ ಕೆಲವು ಭಾಗಗಳು ನಜ್ಜುಗುಜ್ಜು ಆಗಿದೆ ಎಂದು ತಿಳಿದು ಬಂದಿದೆ.

News of Chandrayan 2

ಇನ್ನು ಇದರ ಜೊತೆಗೆ ಲ್ಯಾಂಡರ್ ಒಳಗೆ ಇರುವ ರೋವರ್ ಕೂಡ ಓರ್ಟಿಫಿಷಿಯಲ್ ಇಂಟಲಿಜೆನ್ಸಿಯನ್ನ ಹೊಂದಿದ್ದು ಹಾಗು ಸೌರಶಕ್ತಿಯ ಬ್ಯಾಟರಿಗಳಿಂದ ಕೂಡಿದ್ದು ಅವಕಾಶ ಒದಗಿ ಬಂದಲ್ಲಿ ತನ್ನಿಂದ ತಾನೇ ಕೆಲಸವನ್ನ ಶುರು ಮಾಡುವ ಸಾಮರ್ಥ್ಯ ಹೊಂದಿದೆ.

ಇನ್ನು ರೋವರ್ ತನ್ನ ಕೆಲಸವನ್ನ ಶುರು ಮಾಡಿ ಭೂಮಿಯ ಜೊತೆಗೆ ಸಂಪರ್ಕಕ್ಕೆ ಸಿಗುವ ಸಾಧ್ಯತೆ ಕೂಡ ಇದೆ, ಯಾವುದಕ್ಕೂ ನಾವು ಇನ್ನು 14 ದಿನ ಕಾಯಬೇಕು ಎಂದು ಇಸ್ರೋದ ಅಧ್ಯಕ್ಷ ಶಿವನ್ ಅವರು ತಿಳಿಸಿದ್ದಾರೆ, ಇನ್ನು ರೋವರ್ ಸಂಪರ್ಕಕ್ಕೆ ಸಿಗಲಿ ಎಂದು ತಮಿಳುನಾಡಿನಲ್ಲಿ ಚಂದ್ರ ದೇವಾಲಯದಲ್ಲಿ ಪೂಜೆಯನ್ನ ಕೂಡ ಮಾಡಲಾಗುತ್ತಿದೆ.

News of Chandrayan 2

Please follow and like us:
error0
http://karnatakatoday.in/wp-content/uploads/2019/09/K-Shivan-Statement-1024x576.jpghttp://karnatakatoday.in/wp-content/uploads/2019/09/K-Shivan-Statement-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಬಹಳ ಕಷ್ಟಪಟ್ಟು ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರಯಾನ 2 ನ್ನ ಸಿದ್ದಪಡಿಸಿ ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಮ್ ಲ್ಯಾಂಡರ್ ನ್ನ ಇಳಿಸಿ ದಾಖಲೆಯನ ಬರೆಯಲು ಮುಂದಾಗಿದ್ದರು. ಇನ್ನೇನು ಯಶಸ್ಸು ಕಂಡೆವು ಅನ್ನುವ ಕೊನೆಯ ಕ್ಷಣದಲ್ಲಿ ನಡೆದ ಒಂದು ಚಿಕ್ಕ ಎಡವಟ್ಟಿನಿಂದ ವಿಕ್ರಮ್ ಲ್ಯಾಂಡರ್ ತನ್ನ ಕಕ್ಷೆಯನ್ನ ಬದಲಿಸಿ ಇಸ್ರೋ ಜೊತೆಗಿನ ತನ್ನ ಸಂಪರ್ಕವನ್ನ ಕಳೆದುಕೊಂಡು ಭಾರತೀಯರಿಗೆ ನಿರಾಸೆಯನ್ನ ಮೂಡಿಸಿತು. ಹಾಗಾದರೆ ಲ್ಯಾಂಡರ್ ಈಗ...Film | Devotional | Cricket | Health | India