ಸ್ನೇಹಿತರೆ ನಾಳೆ ಬಹಳ ವಿಶೇಷವಾದ ದಿನ, ಹೌದು ಸ್ನೇಹಿತರೆ ಕಾರ್ತಿಕ ಅಮಾವಾಸ್ಯೆ ಮತ್ತು ಈ ಅಮಾವಾಸ್ಯೆಯನ್ನ ಚಟ್ಟಿ ಅವಮಾಸ್ಯೆ ಎಂದು ಕೂಡ ಕರೆಯುತ್ತಾರೆ. ಹಲವು ವರ್ಷಗಳ ನಂತರ ಬಂದಿರುವ ಈ ಅಮಾವಾಸ್ಯೆಯ ದಿನ ದೇವಾನು ದೇವತೆಗಳು ಭೂಮಿಗೆ ಬಂದು ಮಾನವ ಮಾಡಿದ ಪಾಪ ಕರ್ಮಗಳಿಗೆ ಅನುಗುಣವಾಗಿ ಅವರಿಗೆ ವರ ಮತ್ತು ಶಿಕ್ಷೆಯನ್ನ ಕೊಟ್ಟು ಹೋಗುತ್ತದೆ. ಈ ಅವಮಾಸ್ಯೆಯ ದಿನ ಈ ಮಾಡುವ ಕೆಲವು ಚಿಕ್ಕ ಕೆಲಸಗಳಿಂದ ನೀವು ದೇವಾನು ದೇವತೆಗಳ ಆಶೀರ್ವಾದವನ್ನ ಪಡೆದುಕೊಳ್ಳಬಹುದು ಮತ್ತು ನೀವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತವನ್ನ ಮಾಡಿಕೊಳ್ಳಬಹುದು. ಇನ್ನು ನೀವು ಮಾಡುವ ಈ ಚಿಕ್ಕ ಕೆಲಸಗಳಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಿ ನಿಮಗೆ ರಾಜಯೋಗ ಆರಂಭ ಆಗಲಿದೆ ಮತ್ತು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಜಯ ನಿಮಗೆ ಸಿಗಲಿದೆ.

ಹಾಗಾದರೆ ಆ ಚಿಕ್ಕ ಕೆಲಸಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ದೇವರ ಬಗ್ಗೆ ನಿಮಗೂ ನಂಬಿಕೆ ಇದ್ದರೆ ನಾಳೆ ಚಿಕ್ಕ ಕೆಲಸವನ್ನ ಮಾಡಿ ದೇವಾನು ದೇವತೆಗಳ ಆಶೀರ್ವಾದವನ್ನ ಪಡೆದುಕೊಳ್ಳಿ. ಸ್ನೇಹಿತರೆ ನಾಳೆ ಬಹಳ ವಿಶೇಷವಾದ ದಿನವಾದ್ದರಿಂದ ನಾಳೆ ಕಾಮದೇನು ಅಂದರೆ ಹಸುವಿಗೆ ಆಹಾರವನ್ನ ಕೊಟ್ಟು ಅದರ ತಲೆಯನ್ನ ಮುಟ್ಟಿ ನಿಮ್ಮ ಮನಸ್ಸಿನಲ್ಲಿ ಇರುವುದನ್ನ ಬೇಡಿಕೊಂಡರೆ ನಿಮ್ಮ ಇಷ್ಟಾರ್ಥಗಳು ಆದಷ್ಟು ಬೇಗ ನೆರವೇರಲಿದೆ. ಇನ್ನು ಹಸುವಿನ ಶುದ್ಧವಾದ ಹಾಲನ್ನ ತೆಗೆದುಕೊಂಡು ಹತ್ತಿರ ಶಿವನ ದೇವಳಕ್ಕೆ ಹೋಗಿ ಆ ಹಾಲಿನಿಂದ ಶಿವನಿಗೆ ಅಭಿಷೇಕವನ್ನ ಪೂಜೆಯನ್ನ ಮಾಡಬೇಕು ಮತ್ತು ಹೀಗೆ ಮಾಡುವುದರಿಂದ ನಿಮಗೆ ಇರುವ ಕೆಲವು ದೋಷಗಳು ನಿವಾರಣೆ ಆಗಲಿದೆ.

News of Chatti amavasye

ಇನ್ನು ಈ ದಿನ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ದಾನ ಧರ್ಮಗಳನ್ನ ಮಾಡಿ ಮತ್ತು ನೀವು ಮಾಡುವ ದಾನ ಧರ್ಮಗಳಿಂದ ನಿಮಗೆ ಮುಕ್ಕೋಟಿ ದೇವರ ಆಶೀರ್ವಾದ ಸಿಗಲಿದೆ. ಇನ್ನು ನಾಳೆ ಬೆಳಿಗ್ಗೆ ಬೇಗ ಎದ್ದು ತಣ್ಣೀರಿನಲ್ಲಿ ಸ್ನಾನವನ್ನ ಮಾಡಿ ಹತ್ತಿರದ ಶಿವನ ದೇವಾಲಯಕ್ಕೆ ಭೇಟಿನೀಡಿ ನಿಮ್ಮ ಕಷ್ಟಗಳನ್ನ ಹೇಳಿಕೊಂಡರೆ ನಿಮಗೆ ಕಷ್ಟಗಳು ಸರಿಹೋಗಲಿದೆ ಮತ್ತು ನಾಳೆಯ ದಿನ ಉಪವಾಸವನ್ನ ಮಾಡಿದರೆ ಇನ್ನು ಒಳ್ಳೆಯದು. ನಾಳೆ ಬಹಳ ವಿಶೇಷವಾದ ದಿನವಾದ್ದರಿಂದ ಯಾವುದೇ ತಪ್ಪುಗಳನ್ನ ಮಾಡಬೇಡಿ ಮತ್ತು ನೀವು ಸಣ್ಣ ತಪ್ಪುಗಳನ್ನ ಮಾಡಿದರು ಕೂಡ ಅದರಿಂದ ದೊಡ್ಡ ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ.

ನಾಳೆ ಯಾವುದೇ ಕಾರಣಕ್ಕೂ ಮಾಂಸದ ಆಹಾರಗಳನ್ನ ಸೇವನೆ ಮಾಡಬಾರದು ಮತ್ತು ಪ್ರಾಣಿಹಿಂಸೆಯನ್ನ ಮಾಡಬೇಡಿ, ನಾಳೆ ಕಾರ್ತಿಕ ಅಮಾವಾಸ್ಯೆ ಆದ್ದರಿಂದ ತುಳಸಿ ಪೂಜೆಯನ್ನ ಮಾಡಿದರೆ ನಿಮಗೆ ತುಳಸಿಯ ಆಶೀರ್ವಾದ ಸಿಗಲಿದೆ. ನಾಳೆ ಯಾವುದೇ ಕಾರಣಕ್ಕೂ ಯಾರ ಜೊತೆನೂ ಜಗಳವನ್ನ ಮಾಡಬೇಡಿ ಮತ್ತು ಯಾರಿಂದಲೂ ನಿಷ್ಟೂರಕ್ಕೆ ಒಳಗಾಗಬೇಡಿ, ನಾಳೆ ನೀವು ಮಾಡುವ ಈ ಎಲ್ಲಾ ಕೆಲಸಗಳಿಂದ ನೀವು ದೇವಾನು ದೇವತೆಗಳ ಆಶೀರ್ವಾದವನ್ನ ಪಡೆಯಬಹುದು ಮಾಡಿದ ಎಲ್ಲಾ ಪಾಪಗಳಿಗೆ ಪ್ರಾಯಶ್ಚಿತವನ್ನ ಮಾಡಿಕೊಳ್ಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಪತಿಯೊಬ್ಬರಿಗೂ ತಲುಪಿಸಿ.

News of Chatti amavasye

Please follow and like us:
error0
http://karnatakatoday.in/wp-content/uploads/2019/11/News-of-Chatti-Amavasye-1024x576.jpghttp://karnatakatoday.in/wp-content/uploads/2019/11/News-of-Chatti-Amavasye-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ನಾಳೆ ಬಹಳ ವಿಶೇಷವಾದ ದಿನ, ಹೌದು ಸ್ನೇಹಿತರೆ ಕಾರ್ತಿಕ ಅಮಾವಾಸ್ಯೆ ಮತ್ತು ಈ ಅಮಾವಾಸ್ಯೆಯನ್ನ ಚಟ್ಟಿ ಅವಮಾಸ್ಯೆ ಎಂದು ಕೂಡ ಕರೆಯುತ್ತಾರೆ. ಹಲವು ವರ್ಷಗಳ ನಂತರ ಬಂದಿರುವ ಈ ಅಮಾವಾಸ್ಯೆಯ ದಿನ ದೇವಾನು ದೇವತೆಗಳು ಭೂಮಿಗೆ ಬಂದು ಮಾನವ ಮಾಡಿದ ಪಾಪ ಕರ್ಮಗಳಿಗೆ ಅನುಗುಣವಾಗಿ ಅವರಿಗೆ ವರ ಮತ್ತು ಶಿಕ್ಷೆಯನ್ನ ಕೊಟ್ಟು ಹೋಗುತ್ತದೆ. ಈ ಅವಮಾಸ್ಯೆಯ ದಿನ ಈ ಮಾಡುವ ಕೆಲವು ಚಿಕ್ಕ ಕೆಲಸಗಳಿಂದ ನೀವು ದೇವಾನು...Film | Devotional | Cricket | Health | India