ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಎಲ್ಲ ಆಚರಣೆಗಳಿಗೂ ಒಂದೊಂದು ಅರ್ಥವಿದೆ. ನಿಮಗೆ ಗೊತ್ತಿರಲಿ ನಮ್ಮ ಹಿಂದಿನವರು ನಮಗಿಂತ ಹೆಚ್ಚು ಬುದ್ದಿಶಾಲಿಯಾಗಿದ್ದರು, ಅವರು ಮಾಡುತ್ತಿದ್ದ ಒಂದೊಂದು ಕಾರ್ಯದಲ್ಲೂ ಕೂಡ ಒಂದೊಂದು ರಹಸ್ಯ ಇರುತ್ತಿತ್ತು ಮತ್ತು ಅದೇ ರೀತಿ ನಮ್ಮ ಹಿಂದೂ ಸಂಸ್ಕತಿಯಲ್ಲಿ ಶಂಖಕ್ಕೆ ವಿಶೇಷ ಮನ್ನಣೆ ಇದೆ. ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು ಶಂಖ, ಹಿಂದೂ ಪುರಾಣಗಳ ಪ್ರಕಾರ ಹದಿನೆಂಟು ವಾದ್ಯಗಳಲ್ಲಿ ಶಂಖವಾದ್ಯವೂ ಒಂದು, ಆದ್ದರಿಂದ ಇದನ್ನು ಊದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ.

ಮಹಾತ್ಮರು, ರಾಜರು ದೇವದೇವತೆಗಳ ಜನನವನ್ನು ಹಿಂದೆ ಶಂಖನಾದದ ಮೂಲಕವೇ ಷೋಷಿಸುತ್ತಿದ್ದರು, ಮುಖ್ಯವಾಗಿ ಹಿಂದೂಧರ್ಮದಲ್ಲಿ ಶಂಖ ಎಂದರೆ ಅದು ವಿಷ್ಣುವಿನ ಲಾಂಛನ. ಶಂಖದಿಂದ ಹೊರಸೂಸುವ ಕಂಪನಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೊರದೂಡುತ್ತವೆ ಎಂಬ ಭಾವನೆ ಇದೆ. ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮವನ್ನು ಸೂಚಿಸಲೂ ಶಂಖವನ್ನು ಬಳಸಲಾಗುತ್ತಿತ್ತು, ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯದಲ್ಲೂ ಶಂಖನಾದ ಮಾಡುವ ಪದ್ದತಿಯುಂಟು. ಶಂಖನಾದದಿಂದ ಜಗತ್ತಿನಲ್ಲಿರುವ ಋಣಾತ್ಮಕ ಶಕ್ತಿ ನಾಶವಾಗುತ್ತದೆ ಎಂದಿದ್ದಾನೆ ವಿಷ್ಣು, ವಿಷ್ಣುವಿನ ಪವಿತ್ರವಾದ ಚಿಹ್ನೆ ಶಂಖ, ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಶಂಖಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇನ್ನು ವಿಷ್ಣುವಿನ ಸ್ವರೂಪವಾದ ಶಂಖವನ್ನುಮನೆಯಲ್ಲಿಟ್ಟುಕೊಂಡರೆ ಮನೆಗೆ ಮತ್ತು ಮನೆಯವರಿಗೆ ಒಳ್ಳೆಯದು.

News of Conch

ಹೌದು ಸ್ನೇಹಿತರೆ ಶಂಖದಿಂದ ಬರುವ ಬರುವ ಓಂ ಶಬ್ದ ಎಲ್ಲಾ ಋಣಾತ್ಮಕ ಶಕ್ತಿಯನ್ನು ದೂರವಾಗಿಸಬಲ್ಲದು, ಮನೆಗೊಂದು ದೇವರ ಕೋಣೆ ಹಾಗೂ ಅಲ್ಲೊಂದು ಶಂಖವಿದ್ದರೆ ಮನೆಯ ವರ್ಚಸ್ಸು ಹೆಚ್ಚಿಸುತ್ತದೆ. ಶಂಖವನ್ನು ಊದುವವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ, ಇದನ್ನು ಊದಿದಾಗ ಅದರಲ್ಲಿ ಓಂ ಶಬ್ದ ಹೊರ ಬರುತ್ತದೆ ಮತ್ತು ಇದು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ತೊದಲು ಮಾತಾಡುವ ಮಗುವಿಗೆ ದಿನ ಶಂಖ ಊದುವುದನ್ನು ಹೇಳಿಕೊಟ್ಟರೆ ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತದೆ, ಇನ್ನು ಶಂಖ ಇಡುವುದಕ್ಕೆ ಕೂಡ ಹಲವಾರು ನಿಯಮಗಳಿವೆ. ಹೌದು ಸ್ನೇಹಿತರೆ ನೀವು ಹಿರಿಯರ ಬಳಿ ಅಥವಾ ಬ್ರಾಹ್ಮಣೋತ್ತಮರ ಬಳಿ ಕೇಳಿ ತಿಳಿದುಕೊಳ್ಳಬಹುದು, ಶಂಖಗಳಲ್ಲಿ ವಾಲಂಪುರಿ, ಇದಾಂಪುರಿ, ಚಾಲಂಕಾಲಮ್ ಹಾಗೂ ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ.

ರಾಮಾಯಣ, ಮಹಾಭಾರತಗಳಲ್ಲೂ ಶಂಖದ ಪಾತ್ರ ಬಹಳ ಮುಖ್ಯವಾದುದು ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿಯೂ ಒಂದೊಂದು ಶಂಖವಿದ್ದು ಅದಕ್ಕೆ ಪ್ರತ್ಯೇಕ ಹೆಸರಿರುತ್ತಿತ್ತು, ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ, ಅರ್ಜುನನದು ದೇವದತ್ತ, ಭೀಮನದು ಪೌಂಢ್ರ, ಯುಧಿಷ್ಠಿರನದು ಅನಂತವಿಜಯ, ನಕುಲನದು ಸುಘೋಶ, ಸಹದೇವನದು ಮಣೀಪುಷ್ಪಕ. ಮಹಾವಿಷ್ಣುವಿನ ಎಡಹಸ್ತದಲ್ಲಿ ಸದಾ ಶಂಖ ಶೋಭಿಸುತ್ತಿರುತ್ತದೆ, ಶಂಖದ ಬಗ್ಗೆ ವೈಜಾನಿಕವಾಗಿ ಕೂಡ ಕೆಲ ಸತ್ಯಗಳು ಅಡಗಿವೆ. ಶಂಖವನ್ನು ಊದುವಾಗ ಅದೊರೊಳಗೆ ಪ್ರವೇಶಿಸುವ ಉಸಿರು ಶಂಖದೊಳಗಿನ ವಕ್ರದಾರಿಯನ್ನು ದಾಟಿ ಹೊರಬರುವಾಗ ತೀವ್ರ ವೇಗವುಳ್ಳದ್ದೂ ಹೆಚ್ಚು ಉಷ್ಣತೆಯುಳ್ಳದ್ದೂ ಆಗುವದೆಂದು ಪ್ರಯೋಗಗಳಿಂದ ತಿಳಿದುಬಂದಿದೆ, ಶಂಖದ ಬಗ್ಗೆ ಇನ್ನಷ್ಟು ತಿಳಿಯಲು ನೀವು ನಿಮ್ಮ ಮನೆಯ ಹಿರಿಯ ಸದಸ್ಯರನ್ನು ಕೂಡ ಕೇಳಬಹುದು.

News of Conch

Please follow and like us:
error0
http://karnatakatoday.in/wp-content/uploads/2019/12/shankha-secrets-1024x576.jpghttp://karnatakatoday.in/wp-content/uploads/2019/12/shankha-secrets-150x104.jpgKarnataka Trendingಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಎಲ್ಲ ಆಚರಣೆಗಳಿಗೂ ಒಂದೊಂದು ಅರ್ಥವಿದೆ. ನಿಮಗೆ ಗೊತ್ತಿರಲಿ ನಮ್ಮ ಹಿಂದಿನವರು ನಮಗಿಂತ ಹೆಚ್ಚು ಬುದ್ದಿಶಾಲಿಯಾಗಿದ್ದರು, ಅವರು ಮಾಡುತ್ತಿದ್ದ ಒಂದೊಂದು ಕಾರ್ಯದಲ್ಲೂ ಕೂಡ ಒಂದೊಂದು ರಹಸ್ಯ ಇರುತ್ತಿತ್ತು ಮತ್ತು ಅದೇ ರೀತಿ ನಮ್ಮ ಹಿಂದೂ ಸಂಸ್ಕತಿಯಲ್ಲಿ ಶಂಖಕ್ಕೆ ವಿಶೇಷ ಮನ್ನಣೆ ಇದೆ. ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು ಶಂಖ, ಹಿಂದೂ ಪುರಾಣಗಳ ಪ್ರಕಾರ ಹದಿನೆಂಟು ವಾದ್ಯಗಳಲ್ಲಿ ಶಂಖವಾದ್ಯವೂ ಒಂದು,...Film | Devotional | Cricket | Health | India